ಬೆಂಗಳೂರು: ಕೊರೊನಾ ಸೋಂಕು ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಈಗಾಗಲೇ ದೇಶವನ್ನು ಲಾಕ್ ಡೌನ್ ಮಾಡಿದೆ. ಜನರಿಗೆ ಮನೆ ಬಿಟ್ಟು ರಸ್ತೆಗಿಳಿಯಬೇಡಿ ಎಂದೂ ಸಹ ಸೂಚಿಸಲಾಗಿದೆ. ಆದ್ರೂ ಕೆಲವರು ಸರ್ಕಾರದ ಆದೇಶಕ್ಕೆ ತಲೆಕೆಡಿಸಿಕೊಳ್ಳದೇ ಗುಂಪು ಗುಂಪಾಗಿ ಅಲ್ಲಲ್ಲಿ ಕಾಣಿಸಿಕೊಳ್ತಿದ್ದಾರೆ. ಊರಿಗೆ ತೆರಳಬೇಡಿ ಅಂದ್ರೂ ಊರುಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ, ಒಳ್ಳೆಯ ಮಾತಿನಲ್ಲಿ ಹೇಳಿದರೂ ಕೇಳದವರಿಗೆ ದಂಡಂ ದಶಗುಣಂ ನಡೆಯೇ ಸರಿ ಅನ್ನೋ ನಿರ್ಧಾರಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಡಿ. ಚನ್ನಣ್ಣನವರ್ ಬಂದಿದ್ದಾರೆ.
ಬೆಂಗಳೂರಿನಿಂದ ಊರಿಗೆ ತೆರಳುವ ಜನರು ಟೋಲ್ ಬಳಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಈ ಹಿನ್ನೆಲೆ ಜನರನ್ನು ತಡೆಯುವ ದೃಷ್ಠಿಯಿಂದ ಅಗತ್ಯ ಬಿದ್ದಲ್ಲಿ ಲಾಠಿ ಚಾರ್ಜ್ ಮಾಡಿ ಎಂದು ತಮ್ಮ ಸಿಬ್ಬಂದಿಗೆ ರವಿ ಡಿ ಚನ್ನಣ್ಣನವರ್ ಆದೇಶ ನೀಡಿದ್ದಾರೆ.








