ಟೀಂ ಇಂಡಿಯಾಗೆ ವಿಭಜಿತ ನಾಯಕತ್ವ ಬೇಕಾ : ಕಪಿಲ್ ಹೇಳಿದ್ದೇನು..?
ನವದೆಹಲಿ : ಟೀಂ ಇಂಡಿಯಾಗೆ ವಿಭಜಿತ ನಾಯಕತ್ನ ಅವಶ್ಯಕತೆ ಇದೆ. ರೋಹಿತ್ ಟೀಂ ಇಂಡಿಯಾದ ನಾಯಕ ಆಗಲಿಲ್ಲ ಅಂದ್ರೆ ಭಾರತಕ್ಕೆ ನಷ್ಟ.
ರೋಹಿತ್ ಟಿ 20 ಮಾದರಿಯಲ್ಲಾದರೂ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಬೇಕು ಎಂಬ ಮಾತುಗಳು ಸದ್ಯ ಭಾರತದ ಕ್ರಿಕೆಟ್ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿವೆ.
ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ಸ್ ಆಗುತ್ತಿದ್ದಂತೆ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಉದ್ಬವಿಸಿವೆ.
ಮುಂಬೈ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾದ ಕ್ಯಾಪ್ಟನ್ ಆಗಬೇಕೆಂಬ ಮಾತುಗಳು ಕೇಳಿಬರುತ್ತಿವೆ.
ಕೆಲ ಹಿರಿಯ ಕ್ರಿಕೆಟ್ ಆಟಗಾರರು ಕೂಡ ರೋಹಿತ್ ಶರ್ಮಾ ಟೀಂ ಇಂಡಿಯಾದ ಕ್ಯಾಪ್ಟನ್ ಆಗುವುದು ಸೂಕ್ತ ಎಂದು ಹೇಳುತ್ತಿದ್ದಾರೆ.
ಸೂರ್ಯ ಕುಮಾರ್ ಟೀಂ ಇಂಡಿಯಾದ ಎಬಿಡಿ
ಭಾರತ ಕ್ರಿಕೆಟ್ ತಂಡಕ್ಕೆ ವಿಭಜಿತ ನಾಯಕತ್ವದ ಅವಶ್ಯಕತೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಆದ್ರೆ ಈ ಎಲ್ಲ ಹೇಳಿಕೆಗಳಿಗೆ ಭಿನ್ನವಾಗಿ ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ “ಟೀಂ ಇಂಡಿಯಾಗೆ ವಿಭಜಿತ ನಾಯಕತ್ವ ಬೇಕಾ” ಎಂಬ ಪ್ರಶ್ನೆಗೆ ಕಪಿಲ್ ದೇವ್ ಉತ್ತರಿಸಿ, ಒಂದು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಇಬ್ಬರು ಸಿಇಒಗಳು ಇರೋಲ್ಲ.
ಹಾಗೇನೆ ವಿಭಜಿತ ನಾಯಕತ್ವ ನಮ್ಮ ಸಂಸ್ಕøತಿಯಲ್ಲಿ ಕೆಲಸಕ್ಕೆ ಬರೋಲ್ಲ ಎಂದು ಹೇಳಿದ್ದಾರೆ.
ಒಂದು ತಂಡಕ್ಕೆ ಇಬ್ಬಿಬ್ಬರು ನಾಯಕರಾಗಲು ಸಾಧ್ಯವಿಲ್ಲ. ಅದು ನಮ್ಮ ಸಂಸ್ಕøತಿಯೂ ಅಲ್ಲ. ಒಂದೇ ಕಂಪನಿಯಲ್ಲಿ ಇಬ್ಬಿಬ್ಬರು ಸಿಇಒಗಳಿರುತ್ತಾರಾ? ಇಲ್ಲ ತಾನೆ.
ಕೊಹ್ಲಿ ಟಿ20 ಕ್ರಿಕೆಟ್ ಆಡುತ್ತಿದ್ದಾರೆ. ಅವರೇ ನಾಯಕರಾಗಲಿ ಬಿಡಿ. ಬೇರೆ ನಾಯಕರಾಗಲಿ ಅಂತ ನನಗೂ ಅನ್ನಿಸಬಹುದು. ಆದರೆ ಅದು ಕಷ್ಟ,’ ಎಂದು ವಿಭಜಿತ ನಾಯಕತ್ವದ ಬಗ್ಗೆ ಕಪಿಲ್ ದೇವ್ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










