ಕೇಂದ್ರದ ವಾರ್ನಿಂಗ್.. ಲಾಕ್ ಡೌನ್ ನೆಪದಲ್ಲಿ ವೇತನ ಕಡಿತಗೊಳಿಸುವಂತಿಲ್ಲ..
ಲಾಕ್ ಡೌನ್ ನೆಪವನ್ನು ಒಡ್ಡಿ ಯಾವುದೇ ನೌಕರರ ಸಂಬಳವನ್ನು ಕಡಿತಗೊಳಿಸಬಾರದು ಎಂದು ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್ ನೀಡಿದೆ.ಈ ಕುರಿತಂತೆ ತುರ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕಾಳ ಸಂತೆಯಲ್ಲಿ ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ರೇ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಭಾರತೀಯರಿಗಾಗಿ ಕೊರೊನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ 80 ಕೋಟಿ ರೂಪಾಯಿಯನ್ನು ವಿಶೇಷ ಪಡಿತರ ಯೋಜನೆಗೆ ಘೋಷಿಸಿಲಾಗಿದೆ. ಅಲ್ಲದೇ ಲಾಕ್ ಡೌನ್ ನೆಪವನ್ನು ಒಡ್ಡಿ ಯಾವುದೇ ನೌಕರರ ಸಂಬಳವನ್ನು ಕಡಿತಗೊಳಿಸಬಾರದು ಎಂಬುದಾಗಿ ಖಡಕ್ ಸೂಚನೆಯನ್ನು ದೇಶದ ಎಲ್ಲಾ ಖಾಸಗಿ ಸಂಸ್ಥೆಗಳಿಗೆ ನೀಡಿದ್ದಾರೆ.
ಇನ್ನು ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಊಟ ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆ ಕಾರ್ಮಿಕರಿಗೆ ಕಡ್ಡಾಯವಾಗಿ ಸಂಬಳ ನೀಡಲಾಗುತ್ತಿದೆ.2 ರೂಪಾಯಿಗೆ ಕೆಜಿ ಗೋಧಿ, 3 ರೂಪಾಯಿಗೆ ಕೆಜಿ ಅಕ್ಕಿ ವಿತರಿಸುವ ಪಡಿತರ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಜಾವಡೇಕರ್ ತಿಳಿಸಿದ್ರು.








