AMITH SHA
ಚೆನ್ನೈನಲ್ಲಿ ಅಮಿತ್ ಶಾ ಮೇಲೆ ಪ್ಲೇಕಾರ್ಡ್ ಎಸೆದ ವ್ಯಕ್ತಿ..!
ಚೆನ್ನೈ: ತಮಿಳುನಾಡಿನ ಚೆನ್ನೈಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಆಗಮಿಸಿದ್ದಾರೆ. ಈ ವೇಳೆ ಅವರನ್ನು ಎಐಎಡಿಎಂಕೆ ಮತ್ತು ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಆದರೆ ಈ ವೇಳೆ 60 ವರ್ಷದ ವೃದ್ಧರೊಬ್ಬರು ಅಮಿತ್ ಶಾ ಅವರ ಮೇಲೆ ಪ್ಲೇಕಾರ್ಡ್ ಎಸೆದ ಪ್ರಸಂಗ ನಡೆದಿದೆ. ಘಟನೆಯಿಂದಾಗಿ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ ಘಟನೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ಎಲ್ ಮುರುಗನ್ ಅವರು ಪೊಲೀಸರ ಬಳಿ ವಿಚಾರಿಸಿದಾಗ ಆ ವ್ಯಕ್ತಿಯೋರ್ವ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿರೋದಾಗಿ ತಿಳಿದುಬಂದಿದೆ.
ಬೈ ಎಲೆಕ್ಷನ್ ತಯಾರಿಯಲಿದ್ದ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಸಮನ್ಸ್
ಇಂದು ನಗರಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು ಕಾರ್ಯಕರ್ತರ ಬಳಿ ತೆರಳುತ್ತಿದ್ದ ವೇಳೆ ಆ ವ್ಯಕ್ತಿ ಫಲಕವನ್ನ ಅವರೆಡೆಗೆ ಬಿಸಾಡಿದ್ದಾರೆ. ಆದ್ರೆ ಅದೃಷಷ್ಟವಶಾತ್ ಅದು ಅಮಿತ್ ಶಾ ಅವರಿಗೆ ತಗುಲಿಲ್ಲ. ಸದ್ಯ ಪ್ಲೇಕಾರ್ಡ್ ಎಸೆದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ ಬಳಿಕ ಆತ ಮಾನಸಿಕ ಅಸ್ವಸ್ಥ ಎಂಬುದು ತಿಳಿದುಬಂದಿದೆ. ಆತನನ್ನ ದುರೈರಾಜ್ ಎಂದು ಗುರುತಿಸಲಾಗಿದೆ.
AMITH SHA
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








