devendra Fadnavis
ಒಂದು ದಿನ ಕರಾಚಿಯೂ ಭಾರತದ ಭಾಗವಾಗಲಿದೆ: ಫಡ್ನವಿಸ್
ನವದೆಹಲಿ: ಒಂದು ದಿನ ಕರಾಚಿಯೂ ಭಾರತದ ಭಾಗವಾಗಲಿದೆ. ನನಗೆ ಅಖಂಡ ಭಾರತದ ಬಗ್ಗೆ ವಿಶ್ವಾಸವಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಹೌದು ಸ್ವೀಟ್ ಶಾಪ್ ಮಾಲೀಕರೊಬ್ಬರಿಗೆ ಶಿವಸೇನೆಯ ಮುಖಂಡರು ತಮ್ಮ ಬೇಕರಿಯ ಹೆಸರನ್ನು ಕರಾಚಿಯಿಂದ ಮರಾಠಿಗೆ ಬದಲಾಯಿಸಬೇಕು ಎಂದು ಒತ್ತಡ ಹೇರಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ಫಡ್ನವೀಸ್ ಒಂದು ದಿನ ಕರಾಚಿಯೂ ಭಾರತದ ಭಾಗವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ ಇತ್ತೀಚೆಗೆ ಸ್ವೀಟ್ ಸಾಪ್ ಅಂಗಡಿ ಮಾಲೀಕರಿಗೆ ಶಿವಸೇನೆ ಕಾರ್ಯಕರ್ತರು ಕರಾಚಿ ಎಂಬ ಹೆಸರನ್ನ ಬದಲಾಯಿಸುವಂತೆ ಒತ್ತಾಯಿಸಿದ್ರು. ಆದ್ರೆ ಈ ಘಟನೆ ಬಗ್ಗೆ ಮಾತನಾಡಿದ್ದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು , ಇದು ಪಕ್ಷದ ನಿಲುವಲ್ಲ, ಕಾರ್ಯಕರ್ತರಿಗೆ ತೋಚಿದ್ದನ್ನು ಅವರು ಮಾಡಿದ್ದಾರೆ ಎಂದು ಹೇಳಿದ್ದರು.
ಚೆನ್ನೈನಲ್ಲಿ ಅಮಿತ್ ಶಾ ಮೇಲೆ ಪ್ಲೇಕಾರ್ಡ್ ಎಸೆದ ವ್ಯಕ್ತಿ..!
ಅಂದ್ಹಾಗೆ ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಹೈದರಾಬಾದ್ ಗೆ ವಲಸೆ ಬಂದ ಖಾನ್ ಚಂದ್ ರಮ್ನಾನಿ ಅವರು ಈ ಸ್ವೀಟ್ಸ್ ಶಾಪ್ ಆರಂಭಿಸಿದ್ದರು. ಇದು ಅತ್ಯಂತ ಪ್ರಸಿದ್ಧಿ ಪಡೆದಿತ್ತು. ಅಲ್ಲದೇ ಪ್ರಮುಖ ನಗರಗಳಾದ ಹೈದರಾಬಾದ್, ಬೆಂಗಳೂರು, ಮುಂಬಯಿ, ದೆಹಲಿ ಹಾಗೂ ಚೆನ್ನೆ ನಗರಗಳಲ್ಲಿಯೂ ಇದರ ಶಾಖೆ ಇದೆ. ಆದ್ರೆ ದೇವೇಂದ್ರ ಫಡ್ನವೀಸ್ ಅವರು ಒಂದಲ್ಲಾ ಒಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎಂದಿರೋದು ಮಾತ್ರ ತೀವ್ರ ಕುತೂಹಲಕ್ಕೆ ಹಾಗೂ ಭಾರೀ ಚರ್ಚೆಗಳಿಗೆ ಕಾರಣವಾಗಿದೆ.
devendra Fadnavis
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








