ರಾಮನಗರ: ಮರಾಠಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ರಾಜ್ಯ ಸರ್ಕಾರ ತನ್ನ ಆದೇಶ ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ರಾಮನಗರದ ಐಜೂರು ವೃತ್ತದಲ್ಲಿ ಗೋಣಿ ಚೀಲ ಹಾಸಿಕೊಂಡು ಮಲಗಿ ವಿನೂತನವಾಗಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರರು ಸರ್ಕಾರದ ವಿರುದ್ಧ ಚಳವಳಿ ಮಾಡಲಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಬೆದರಿಕೆಗೆ ಯಾರು ಹೆದರಬೇಡಿ ಎಂದು ಕರೆ ನೀಡಿದ್ದಾರೆ.
ರಾಜ್ಯ ಸರ್ಕಾರ ಮರಾಠಿ ಪ್ರಾಧಿಕಾರವನ್ನ ಈ ಕೂಡಲೇ ತೆಗೆಯಬೇಕು. ಪ್ರಾಧಿಕಾರದ ವಿರುದ್ಧ ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ. ಇಲ್ಲದಿದ್ದರೆ ನಾವು ಜೈಲಿಗೆ ಹೋಗಲು ಸಿದ್ದರಿದ್ದೇವೆ ಎಂದು ವಾಟಾಳ್ ಖಡಕ್ ಸಂದೇಶ ರವಾನಿಸಿದರು.
ಕನ್ನಡ ಹೋರಾಟಗಾರರನ್ನು ರೋಲ್‍ಕಾಲ್, ನಕಲಿ ಎಂದು ಟೀಕಿಸಿರುವ ಬಿಜೆಪಿ ಶಾಸಕ ಯತ್ನಾಳ್‍ಗೆ ತಲೆ ಸರಿಯಿಲ್ಲ. ಯತ್ನಾಳ್ ರನ್ನ ನಿಮಾನ್ಸ್ ಗೆ ಸೇರಿಸಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ವಾಟಾಳ್ ಗುಡುಗಿದ್ದಾರೆ.
ಇದೇ ವೇಳೆ ಮಾತನಾಡಿದ ಸಾ.ರಾ ಗೋವಿಂದ್, ನಮ್ಮ ಹೋರಾಟದ ಬಗ್ಗೆ ಬಹಳ ಜನರು ತಪ್ಪು ತಿಳಿದುಕೊಂಡಿದ್ದಾರೆ. ಬೆಳಗಾವಿ, ಮಸ್ಕಿ ಚುನಾವಣೆ ಮುಂದಿಟ್ಟುಕೊಂಡು ಮರಾಠಿ ಅಭಿವೃದ್ಧಿ ನಿಗಮ ಮಾಡಿದ್ದಾರೆ. ಮರಾಠಿ ಪ್ರಾಧಿಕಾರ ರಚನೆ ಕನ್ನಡಕ್ಕೆ ಮಾರಕವಾಗಿದ್ದು, ಕನ್ನಡಿಗರಿಗೆ ಮಸಿ ಬಳಿದಂತಾಗಿದೆ. ಯಡಿಯೂರಪ್ಪ ಅವರಿಗೆ ಇದು ಅರ್ಥವಾಗುತ್ತಿಲ್ಲ ಎಂದರು.
ಬಿಜೆಪಿ ಸರ್ಕಾರವನ್ನು ಕೇಳುತ್ತೇನೆ, ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಇಂತಹ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರಾ ಪ್ರತಿ ವರ್ಷ ನವೆಂಬರ್ 1ರಂದು ಬೆಳಗಾವಿಯ ಮರಾಠಿಗರು ಕರಾಳ ದಿನ ಆಚರಿಸುತ್ತಾರೆ. ಇದು ಕನ್ನಡಿಗರಿಗೆ ನೋವಾಗುವುದಿಲ್ಲವೇ ? ಸಿಎಂ ಯಡಿಯೂರಪ್ಪ ಅವರಿಗೆ ರಾಜ್ಯದ ಹಿತದೃಷ್ಟಿ ಬೇಕಾಗಿಲ್ಲ. ಅವರಿಗೆ ಚುನಾವಣೆ ಬಳ ಮುಖ್ಯ. ಚುನಾವಣೆಯಲ್ಲಿ ಅವರು ಗೆಲ್ಲಬೇಕು ಅಷ್ಟೇ ಎಂದು ಸಾ.ರಾ ಗೋವಿಂದ್ ಟೀಕಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel