ಜನ ಸಾಮಾನ್ಯರು ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಕೊರೊನಾ ವೈರಸ್ ಬಡವ, ಶ್ರೀಮಂತ ಎಂದು ತಾರತಮ್ಯ ಮಾಡುವುದಿಲ್ಲ. ಆದ್ದರಿಂದ ಜನರ ತುಂಬ ಎಚ್ಚರಿಕೆ ಯಿಂದ ಇರಬೇಕು ಎಂದು ಮೋದಿ
ಮನವಿ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ದೇಶ 21 ದಿನ ಲಾಕ್ ಡೌನ್ ಆಗುವ ವಿಷಯ ಘೋಷಣೆ ಮಾಡಿದ, ಬಳಿಕ ವಾರಣಾಸಿ ಜನತೆ ಜೊತೆ ವಿಡಿಯೋ ಕಾನ್ಪೆರೆನ್ಸ್ ನಡೆಸಿದ್ದಾರೆ. ಇದಾದ ಬಳಿಕ ಮಾತಾನಾಡಿದ ಅವರು, ಕೊರೊನಾ ವೈರಸ್ ಬಡವ, ಶ್ರೀಮಂತ ಎಂಬ ತಾರತಮ್ಯ ಮಾಡಲ್ಲ. ಯೋಗ ಮಾಡುತ್ತಾರೆ ಎಂಬ ಕಾರಣಕ್ಕೆ ಯೋಗ ಮಾಡುವವರನ್ನು ಬಿಡೋಲ್ಲ. ಹಾಗಾಗಿ ಜನ ಶಾಂತಿ, ಸಂಯಮ,ತಾಳ್ಮೆಯಿಂದ ಇರಬೇಕು ಎಂದು ಮೋದಿ ಹೇಳಿದ್ದಾರೆ.








