ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸುವ ಔಷಧಿಗಳ ಪಟ್ಟಿಯಿಂದ ರಿಮೆಡಿವಿರ್ ಔಟ್ Who suspended remdesivir
ಹೊಸದಿಲ್ಲಿ, ನವೆಂಬರ್22: ಆಸ್ಪತ್ರೆಗೆ ದಾಖಲಾದ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸುವ ಔಷಧಿಗಳ ಪೂರ್ವಭಾವಿ ಪಟ್ಟಿಯಿಂದ ರಿಮೆಡಿವಿರ್ ಅನ್ನು ಅಮಾನತುಗೊಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ. ನಾವು ಅದನ್ನು ಪಿಕ್ಯೂ (ಪೂರ್ವಭಾವಿ ಪಟ್ಟಿ) ಯಿಂದ ಅಮಾನತುಗೊಳಿಸಿದ್ದೇವೆ ಎಂದು ತಾರಿಕ್ ಜಸರೆವಿಕ್ ಇಮೇಲ್ ಮಾಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. Who suspended remdesivir

ಚಿಕಿತ್ಸೆಯ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಕೋವಿಡ್ ಸೋಂಕಿಗಾಗಿ ರಿಮೆಡಿವಿರ್ ಔಷಧಿಯನ್ನು ಖರೀದಿಸಲು ದೇಶಗಳಿಗೆ ಶಿಫಾರಸು ಮಾಡುವುದಿಲ್ಲ ಎನ್ನುವುದು ಅಮಾನತಿನ ಸಂಕೇತವಾಗಿದೆ.
ಯಾವ ಅಂತರರಾಷ್ಟ್ರೀಯ ಖರೀದಿದಾರರು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ ಔಷಧಿಯನ್ನು ನೀಡುತ್ತಿದ್ದಾರೆ ಎಂದು WHO ಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ಆಕ್ಸ್‌ಫರ್ಡ್ ಕೋವಿಡ್ -19 ಲಸಿಕೆಯ ಬೆಲೆ ಎರಡು ಡೋಸ್ ಗೆ ಗರಿಷ್ಠ 1,000 ರೂ
ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್ ಮತ್ತು ಇತರ ದೇಶಗಳು ರೆಮೆಡೆಸಿವಿರ್ ಬಳಕೆಗೆ ತಾತ್ಕಾಲಿಕ ಅನುಮೋದನೆಯನ್ನು ನೀಡಿವೆ. ಆರಂಭಿಕ ಸಂಶೋಧನೆಯು ಕೆಲವು ಕೊರೋನವೈರಸ್ ರೋಗಿಗಳಲ್ಲಿ ಚೇತರಿಕೆಯ ಸಮಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
ಅಕ್ಟೋಬರ್‌ನಲ್ಲಿ ಕೋವಿಡ್ -19 ಧೃಡ ಪಟ್ಟ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇತರ ಔಷಧಿಗಳ ಜೊತೆ ರಿಮೆಡಿವಿರ್ ಚಿಕಿತ್ಸೆ ನೀಡಲಾಯಿತು.

ಶುಕ್ರವಾರದ ಡಬ್ಲ್ಯುಎಚ್‌ಒ ಶಿಫಾರಸು, ವೈರಸ್‌ನಿಂದ ಆಸ್ಪತ್ರೆಗೆ ದಾಖಲಾದ 7,000 ಕ್ಕೂ ಹೆಚ್ಚು ರೋಗಿಗಳ ನಾಲ್ಕು ಅಂತರರಾಷ್ಟ್ರೀಯ ದೃಢೀಕರಣ ಪ್ರಯೋಗಗಳನ್ನು ಆಧರಿಸಿದೆ.ಔಷಧವು 2020 ಮೂರನೇ ತ್ರೈಮಾಸಿಕ ಮಾರಾಟವನ್ನು ಸುಮಾರು 900 ಮಿಲಿಯನ್ ಹೆಚ್ಚಿಸಿದೆ ಎಂದು ರಿಮೆಡಿವಿರ್ ತಯಾರಕ ಗಿಲ್ಯಾಡ್ ಕಳೆದ ತಿಂಗಳು ಹೇಳಿದ್ದರು. ಆರಂಭದಲ್ಲಿ ಎಬೋಲಾ ವೈರಸ್‌ಗೆ ಚಿಕಿತ್ಸೆಯಾಗಿ ಈ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸೋರೆಕಾಯಿ ತಿನ್ನಲು 6 ಉತ್ತಮ ಕಾರಣಗಳುhttps://t.co/76fhiw24zx
— Saaksha TV (@SaakshaTv) November 21, 2020
https://twitter.com/SaakshaTv/status/1330187878652125189?s=19
https://twitter.com/SaakshaTv/status/1330188116712435712?s=19








