ರಾಜಕೀಯದಲ್ಲಿ ಮುಂದುವರಿಯುವ ಆಸೆ ಇಲ್ಲ : ಹೆಚ್ ಡಿಕೆ
ಮಂಡ್ಯ : ವೈಯುಕ್ತಿಕವಾಗಿ ರಾಜಕೀಯದಲ್ಲಿ ಮುಂದುವರಿಯುವ ಆಸೆ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು.
ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಲೋಕಸಭೆ ಚುನಾವಣೆಯಲ್ಲಿ ಮಗನ ಸೋಲಿನ ಬಗ್ಗೆ ಬೇಸರದ ಮಾತುಗಳನ್ನಾಡಿದರು.
ಜಿಲ್ಲೆಯ ಹಲವರ ಒತ್ತಾಯದ ಮೇರೆಗೆ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗನನ್ನು ನಿಲ್ಲಿಸಿದೆ. ಚುನಾವಣೆ ಗೆಲ್ಲಲು ಕಾರ್ಯಕರ್ತರು ತುಂಬಾ ಕೆಲಸ ಮಾಡಿದ್ರು.
ಈ ಹಿಂದೆ ಗೆದ್ದಾಗ ಐದು ಕಾಲು ಲಕ್ಷ ಮತ ನೀಡಿದ್ದ ಜನರು ಸೋತಾಗ ಐದು ಮುಕ್ಕಾಲು ಲಕ್ಷ ಮತ ನೀಡಿದರು.
ಎಲ್ಲರೂ ಸೇರಿ ಮುಗಿಸಬೇಕು ಅಂತಾ ಮುಗಿಸಿದರು. ಆದ್ರೆ ನನಗೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ ಎಂದು ಹೇಳಿದರು.
ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡ್ತೇವೆ: ವಾಟಾಳ್ ನಾಗರಾಜ್ ಪುನರುಚ್ಛಾರ
ಇನ್ನು ನಾನು ರಾಜಕಾರಣಕ್ಕೆ ಬಂದ ದಿನದಿಂದ ಮಂಡ್ಯ ಜನರ ಜೊತೆ ಒಡನಾಟವಿದೆ. ಜಿಲ್ಲೆಯ ಜನರು ತುಂಬಾ ಮುಗ್ಧರು, ಎಲ್ಲರನ್ನು ನಂಬುತ್ತಾರೆ.
ದೇವೇಗೌಡರು ಮತ್ತು ನಮ್ಮನ್ನು ಬೆಳೆಸಿದ್ದೇ ಮಂಡ್ಯದ ಜನತೆ. ನಾನು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಕೊಂಡಿದ್ದೆ.
ಜನರು ತೋರಿಸುವ ಪ್ರೀತಿ ನೋಡಿದಾಗ ನಾನು ಅನ್ಯಾಯ ಮಾಡುತ್ತಿದ್ದೇನೆ ಅನ್ನಿಸಿತು. ನನಗೆ ಈ ವ್ಯವಸ್ಥೆಯಿಂದ ಆದ ಬೇಸರದಿಂದ ಹೊರಗೆ ಹೋದರೆ ಜನರಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತೆ.
ಈ ಕಾರಣಕ್ಕೆ ನಾನು ರಾಜಕೀಯದಲ್ಲಿ ಮುಂದುವರಿದಿದ್ದೇನೆ. ವೈಯುಕ್ತಿಕವಾಗಿ ರಾಜಕೀಯದಲ್ಲಿ ಮುಂದುವರಿಯುವ ಆಸೆ ಇಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










