ಶಿವಾಜಿ ಮಹಾರಾಜರು ಕೂಡ ಕನ್ನಡಿಗರೇ : ಕಾರಜೋಳ
ವಿಜಯಪುರ : ಮರಾಠ ಸಮಾಜದ ಶಿವಾಜಿ ಮಹಾರಾಜರು ಕನ್ನಡಿಗರೇ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ವಿವಿಧ ಸಂಘಟನೆಗಳು ಡಿಸೆಂಬರ್ 05 ರಂದು ಕರ್ನಾಟಕ ಬಂದ್ ಗೆ ಕರೆಕೊಟ್ಟಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ್ ಕಾರಜೋಳ, ಕರ್ನಾಟಕ ಬಂದ್ ಕರೆ ನೀಡುವವರು ಮೊದಲು ಇತಿಹಾಸ ತಿಳಿದುಕೊಳ್ಳಲಿ.
ಮರಾಠಿಗರು ಸಹ ಕನ್ನಡಿಗರೇ, ಮರಾಠ ಸಮಾಜದ ಶಿವಾಜಿ ಮಹಾರಾಜರು ಕನ್ನಡಿಗರು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇನ್ನು ಮರಾಠಿಗರು ನಮ್ಮ ಅಣ್ಣ ತಮ್ಮಂದಿರು ಅವರಲ್ಲಿ ಹಿಂದುಳಿದ ಜನ ಸಾಕಷ್ಟು ಇದ್ದಾರೆ, ಅವರ ಅಭಿವೃದ್ಧಿಗೆ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ. ಮರಾಠ ಭಾಷೆ ಅಭಿವೃದ್ಧಿಗಲ್ಲ ಎಂದು ಉಪಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ವಿಪ್ಲವ : ಕೋಡಿಮಠ ಶ್ರೀ ಭವಿಷ್ಯ
ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಇನ್ನೂ ನಾಲ್ಕು ದಿನ ಕಾಯಿರಿ ಎಂದರು.
ಇನ್ನ ಐಎಂಎ ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಬಂಧನಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅದು ಕಾನೂನು ಪ್ರಕ್ರಿಯೆ ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆ ನಡೆಯುತ್ತಿದೆ.
ಸಿಬಿಐ, ಇಡಿ ತನ್ನ ತನಿಖೆ ನಡೆಸುತ್ತದೆ. ಹೀಗಾಗಿ ಅದರ ಬಗ್ಗೆ ಮಾತನಾಡುವುದು ಸರಿ ಅಲ್ಲ ಎಂದು ಡಿಸಿಎಂ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel