ಬೆಂಬಲ ಬೆಲೆ ನಿಮ್ಮಪ್ಪನ ಮನೆಯಿಂದ ಕೊಡುತ್ತಿಯಾ: ಸಿಎಂ ವಿರುದ್ಧ ಸಿದ್ದು ಘರ್ಜನೆ
ರಾಯಚೂರು : ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆದಿದ್ದು, ಸಭೆಯಲ್ಲಿ ಸಿಎಂ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರೂ ಈಗ ಅವರ ಮಗ ಆರ್ ಟಿಜಿಎಸ್ ಮೂಲಕವೇ ಲಂಚ ಪಡೆದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ತೊರೆಯುವ ಬಗ್ಗೆ ಜಿ.ಟಿ.ದೇವೇಗೌಡ ಸ್ಪಷ್ಟನೆ
ಕೊರೊನಾ ಸಾಮಾಗ್ರಿ ಖರೀದಿಯಲ್ಲಿ ಯಡಿಯೂರಪ್ಪ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾರೆ. ಕೋವಿಡ್ ನಿಯಂತ್ರಣ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ.
ಇವರನ್ನು ಮನುಷ್ಯರು ಎನ್ನಬೇಕೊ? ಅಥವಾ ರಾಕ್ಷಸರು ಎನ್ನಬೇಕೊ? ಇವರೆಲ್ಲ ಮನುಷ್ಯತ್ವ ಇಲ್ಲದವರು ಎಂದು ಜರಿದ ಸಿದ್ದರಾಮಯ್ಯ, ಭತ್ತಕ್ಕೆ ಬೆಂಬಲ ಬೆಲೆ ಕೊಡಲೇಬೇಕು. ಬೆಂಬಲ ಬೆಲೆ ನಿಮ್ಮಪ್ಪನ ಮನೆಯಿಂದ ಕೊಡುತ್ತಿಯಾ ಯಡಿಯೂರಪ್ಪ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಬಸನಗೌಡಗೆ ಕೈ ಟಿಕೆಟ್ : ಕಾಂಗ್ರೆಸ್ ಗೆ ನಾಚಿಕೆಯಾಗಬೇಕು ಎಂದ ವಿಜಯೇಂದ್ರ
ಭತ್ತಕ್ಕೆ ಬೆಂಬಲ ಬೆಲೆ ಕೊಡುವ ಬಗ್ಗೆ ಡಿಸೆಂಬರ್ ನಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ. ಕನಿಷ್ಠ 500 ರೂ. ಬೆಂಬಲ ಬೆಲೆ ನೀಡಲೆಬೇಕು. ಕೊಡದಿದ್ದಲ್ಲಿ ಅಧಿವೇಶನದಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದೇ ವೇಳೆ ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ, ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ನರೇಂದ್ರ ಮೋದಿ. ಕೋವಿಡ್ -19 ನಿಯಂತ್ರಣಕ್ಕೆ ಔಷಧ ಕಂಡು ಹಿಡಿಯುವುದು ಬಿಟ್ಟು ದೀಪ ಹಚ್ಚಿ ಗಂಟೆ ಬಾರಿಸಿದ್ರೆ ಸೋಂಕು ಹೋಗುತ್ತಾ ಎಂದು ವ್ಯಂಗ್ಯವಾಡಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಆರ್.ಬಸನಗೌಡ ತುರುವಿಹಾಳ ಅವರು ಬೆಂಬಲಿಗರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel