ಕೊಪ್ಪಳ: ಸಮಾಜವನ್ನು ಒಡೆಯಲು ಏನೇನು ಮಾಡಬೇಕೋ ಅದನ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಸಮಾಜ ಒಗ್ಗೂಡಲು ಕಾರ್ಯಕ್ರಮಗಳು ರಾಜ್ಯ ಬಿಜೆಪಿ ಸರ್ಕಾರದಿಂದ ನಡೆಯುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೇಳಿದ್ದಾರೆ.
ಕೊಪ್ಪಳದ ಹಿಟ್ನಾಳ್ ಗ್ರಾಮದಲ್ಲಿ ಮಾತನಾಡಿದ ಡಿಕೆಶಿ, ಬಿಜೆಪಿಯವರು ಈಗ ರೂಲಿಂಗ್ ನಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‍ನ ಮಾಜಿ ಸಚಿವರು ತಮ್ಮ ಸಣ್ಣ ಪುಟ್ಟ ಕೆಲಸಗಳನ್ನು ಮುಗಿಸಿಕೊಳ್ಳಲು ಬಿಜೆಪಿ ಕಡೆ ಹೋಗುತ್ತಿರಬಹುದು, ಕೆಲಸ ಮುಗಿಸಿಕೊಳ್ಳಲಿ ಬಿಡಿ ಎಂದಿದ್ದಾರೆ.
ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡುವ ವಿಚಾರವಾಗಿ ಸರಕಾರ ನಮ್ಮ ಜೊತೆ ಚರ್ಚೆ ಮಾಡಿಲ್ಲ. ಹಿಂದೆ ಒಂದು ಬಾರಿ ನಮ್ಮನ್ನು ಕೇಳಿದ್ದರು. ಅವರು ತೀರ್ಮಾನ ಮಾಡಲಿ. ಅವರಿಗೆ ಒಂದು ಅವಕಾಶ ಇದೆ ಮಾಡಿಕೊಳ್ಳಲಿ ಅವರ ತೀರ್ಮಾನ ಆದ ಮೇಲೆ ನಾವು ಮಾತಾಡ್ತೀವಿ ಎಂದು ಡಿಕೆಶಿ ಹೇಳಿದ್ದಾರೆ.
ಕಾಂಗ್ರೆಸ್ ಸರಕಾರ ವಿದ್ಯುತ್‍ನ್ನು ಸರಿಯಾಗಿ ನಿರ್ವಹಣೆ ಮಾಡಿತ್ತು. ವಿದ್ಯುತ್ ಕ್ಷೇತ್ರದಲ್ಲಿ ರಾಷ್ಟ್ರವೇ ಮೆಚ್ಚುವಂತ ಕೆಲಸ ಮಾಡಿದ್ದೆವು. ಕೇಂದ್ರ ಸರಕಾರ ಸಹ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೂ, ಈಗ ವಿದ್ಯುತ್ ದರ ಏರಿಕೆಯನ್ನು ಕಡಿಮೆ ಮಾಡಬೇಕು. ಭತ್ತಕ್ಕೆ ಹೆಚ್ಚವರಿಯಾಗಿ 500 ರೂಪಾಯಿ ಬೆಂಬಲ ಬೆಲೆ ಕೊಡಬೇಕು ಎಂದು ಡಿಕೆಶಿ ಆಗ್ರಹಿಸಿದರು.
ಸಿಎಂ ಬಿಎಸ್ವೈ ಹಾಗೂ ಮಂತ್ರಿಗಳಿಗೆ ಸರಕಾರ ಉಳಸಿಕೊಳ್ಳುವುದು ಮುಖ್ಯವಾಗಿದೆ. ರೈತರನ್ನು ಉಳಿಸಿಕೊಳ್ಳುವುದು ಮುಖ್ಯವಲ್ಲ. ಅವರ ಖುರ್ಚಿಗಳು ಭದ್ರವಾಗಿರಬೇಕು. ರೈತರ ಬೆಳೆಯ ಬೆಲೆಯನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ. ರೈತರು ಬದುಕಲು ಬಿಡುತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿ ಪೇರಲ ಹಣ್ಣು ಖರೀದಿಸಿದ ಡಿಕೆಶಿ
ಕೊಪ್ಪಳ ಜಿಲ್ಲೆ ಪ್ರವಾಸದಲ್ಲಿರುವ ಡಿ.ಕೆ ಶಿವಕುಮಾರ್, ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ಪೇರಲ ಹಣ್ಣು ಖರೀದಿಸಿದ್ದಾರೆ.
ತಳ್ಳುವ ಗಾಡಿಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಮಹಿಳೆ ಬಳಿ ತೆರಳಿದ ಡಿಕೆಶಿ, 70 ರೂಪಾಯಿಯಂತೆ ನಾಲ್ಕು ಕೆ.ಜೆ.ಪೇರಲ ಹಣ್ಣು ಖರೀದಿಸಿದ ಶಿವಕುಮಾರ್. ತಾವೇ ಸ್ವತಃ ಹಣ್ಣು ಆಯ್ದುಕೊಂಡು ತೂಕ ಮಾಡಿಕೊಂಡಿದ್ದಾರೆ. ಪೇರಲ ಹಣ್ಣು ತೂಕ ಮಾಡಿಕೊಂಡು ಖರೀದಿಸಿದ ಮೇಲೆ ಪೇರಲ ಹಣ್ಣಿನ ಜೊತೆ ನೆಂಚಿಕೊಳ್ಳಲು ಉಪ್ಪು ಕೇಳಿ ಪಡೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel