`ಕೈ’ಗೆ ನಾಚಿಕೆಯಾಗಬೇಕು ಎಂದ ವಿಜಯೇಂದ್ರಗೆ ಪ್ರಶ್ನೆಗಳ ಸುರಿಮಳೆಗೈದ ಉಗ್ರಪ್ಪ
ಬಳ್ಳಾರಿ : ಮಸ್ಕಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಸಿಗದಿರುವುದು ನಾಚಿಕೆಗೇಡು ಎಂಬ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ದಿವಾಳಿಯಾಗಿದೆ. ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್ ಗೆ ಅಭ್ಯರ್ಥಿಯೇ ಸಿಕ್ಕಿಲ್ಲ ಎಂದ್ರೆ ನಾಚಿಕೆಗೇಡು ಎಂಬ ವಿಜಯೇಂದ್ರ ಅವರ ಹೇಳಿಕೆಗೆ ಬಳ್ಳಾರಿಯಲ್ಲಿ ಮಾಜಿ ಕಾಂಗ್ರೆಸ್ ಸಂಸದ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನಾಯರಿಕೆ ಕ್ಯಾಂಡಿಡೇಟ್ ಹುಡುಕೋ ಕ್ಯಾಪಾಸಿಟಿ ಇಲ್ಲಾ ಎಂದು ವಿಜಯೇಂದ್ರೆ ಹೇಳಿಕೆ ನೀಡಿದ್ದಾರೆ. ಅವರು ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ.
ಸಿಎಂ ಯಡಿಯೂರಪ್ಪ ಅವರ ಮಗ ನೀವು, ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಈ ರೀತಿ ಮಾತನಾಡೋದು ಸರಿಯಲ್ಲ. ಬಾಯಿ ಹಿಡಿದು ಮಾತನಾಡಿ ಎಂದು ಉಗ್ರಪ್ಪ ಗುಡುಗಿದ್ದಾರೆ.
ಮೋದಿ, ಬಿಎಸ್ ವೈಗೆ ಸುಳ್ಳಿನ ಪ್ರಶಸ್ತಿ : ವಿ.ಎಸ್.ಉಗ್ರಪ್ಪ
ಇನ್ನು ಆರ್ ಟಿಜಿಎಸ್ ಮೂಲಕ ಲಂಚ ಪಡೆದವರು ನೀವು ಎಂದು ಕುಟುಕಿದ ಉಗ್ರಪ್ಪ, ಪ್ರತಾಪ್ ಗೌಡ ಪಾಟೀಲ್ ಎಲ್ಲಿಂದ ಬಂದವರು, ಆಪರೇಷನ್ ಕಮಲ ಮಾಡಿದವರು ಯಾರು-?- ಅವರೇಲ್ಲಾ ಎಲ್ಲಿಂದ ಬಂದವರು ಎಂದು ಪ್ರಶ್ನೆಗಳ ಸುರಿಮಳೆಗೈದರು.
ಮುಂದುವರಿದು ಬಿಜೆಪಿ ವಿರುದ್ಧ ಕಿಡಿಕಾರಿದ ಉಗ್ರಪ್ಪ, ಬಿಜೆಪಿ ಒಡೆದ ಮನೆಯಾಗಿದೆ, ಅನೇಕ ಗುಂಪುಗಳಾಗಿವೆ. ಅವರ ಪಾಪದ ಕೊಡ ತುಂಬಿದಾಗ ಯಡಿಯೂರಪ್ಪ ಮತ್ತು ಬಿಜೆಪಿ ಫಲ ತಿನ್ನುತ್ತಾರೆ.
ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ. ನಾನು ಬಿಜೆಪಿಯ ಆಂತರಿಕ ವಿಚಾರ ಮಾತನಾಡೋಲ್ಲಾ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










