sudeep
ಆಪ್ತ ಸ್ನೇಹಿತ ಜಾಕ್ ಮಂಜು ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ..!
ಇಂದು ಚಂದನವನದ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಚಿತ್ರರಣಂಗದವರು ಜಾಕ್ ಮಂಜು ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇತ್ತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಹ ತಮ್ಮ ಆಪ್ತ ಸ್ನೇಹಿತರಾದ ಮಂಜು ಅವರ ಬರ್ತ್ ಡೇ ಗೆ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ”ಶಾಲಾ ದಿನಗಳಲ್ಲಿ ವಿಲ್ಸನ್ ಗಾರ್ಡನ್ನಲ್ಲಿರುವ ಹೊಂಬೇಗೌಡ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಸಮಯದಿಂದ, ಫ್ಯಾಂಟಮ್ ಸಿನಿಮಾದವರೆಗೂ ನಮ್ಮ ಈ ಜರ್ನಿ ಅತ್ಯಂತ ಸ್ಮರಣೀಯ ದಿನಗಳು. ಹುಟ್ಟುಹಬ್ಬದ ಶುಭಾಶಯಗಳು ನನ್ನ ಆತ್ಮೀಯ ಸ್ನೇಹಿತ, ಸಹೋದರ. ಸದಾ ಖುಷಿಯಿಂದಿರು” ಎಂದು ಬರೆದುಕೊಂಡು ಗೆಳೆಯನ ಜನುಮದಿನಕ್ಕೆ ವಿಶ್ ಮಾಡಿದ್ದಾರೆ.
ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ಡಿ.ಕೆ.ಶಿವಕುಮಾರ್ : ಜಗ್ಗೇಶ್
ಅಂದ್ಹಾಗೆ ಜಾಕ್ ಮಂಜು ಅವರು ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಲ್ಲದೇ ಅನೇಕ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಖ್ಯಾತಿ ಹೊಂದಿದ್ದಾರೆ. ಅಲ್ಲದೇ ಸ್ಯಾಂಡಲ್ ವುಡ್ ಬಹುನಿರೀಕ್ಷೆಯ ಸುದೀಪ್ ನಟನೆಯ ‘ಫ್ಯಾಂಟಮ್’ ಚಿತ್ರಕ್ಕೂ ಸುದೀಪ್ ಬಂಡವಾಳ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಿತ್ರವನ್ನೂ ಸಹ ನಿರ್ಮಾಣ ಮಾಡಿದ್ದಾರೆ.
8 ಸರ್ಕಾರಿ ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..!
sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel