darshan
‘ಅಪ್ಪಾಜಿ ಬೈಯುತ್ತಿದ್ದ ವಾಯ್ಸ್ ಮಿಸ್ ಮಾಡಿಕೊಳ್ತೀನಿ’ : ಡಿ- ಬಾಸ್..!
ಇಂದು ಅಂಬಿ ಅವರ 2ನೇ ವರ್ಷದ ಪುಣ್ಯ ತಿಥಿ. ಹೀಗಾಗಿ ಇಂದು ಚಂದನವನದ ದಿಗ್ಗಜನನ್ನ ಅಭಿಮಾನಿಗಳು , ಚಿತ್ರರಂಗದವರು ಸ್ಮರಿಸುತ್ತಿದ್ದಾರೆ. ಇಂದು ಅಂಬಿ ಸ್ಮಾರಕಕ್ಕೆ ತೆರಳಿ ಪತ್ನಿ ಸುಮಲತಾ ಅಂಬರೀಷ್ , ಪುತ್ರ ಅಭಿಶೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಅನೇಕರು ಪೂಜೆ ಸಲ್ಲಿಸಿದ್ದಾರೆ.
ಬಳಿಕ ಈ ಬಗ್ಗೆ ಮಾತನಾಡಿರುವ ದರ್ಶನ್ ಅವರು , ಅಪ್ಪಾಜಿ 24 ಗಂಟೆಯೂ ನಮ್ಮ ಜೊತೆ ಇರುತ್ತಾರೆ. ಈ ಸಮಾಧಿ ದೇವಸ್ಥಾನ ಇದ್ದ ಹಾಗೆ. ನಾನು ಈ ಕಡೆ ಬಂದಾಗಲೆಲ್ಲಾ ಸಮಾಧಿಗೆ ಬಂದು ಹೋಗುತ್ತೇನೆ. ನಾನು ಅವರನ್ನು ದೇವರಂತೆ ಪೂಜೆ ಮಾಡುತ್ತೀನಿ. ಅವರು ‘ಬೈಯುವುದನ್ನು ನಾನು ಯಾವಾಗಲು ಮಿಸ್ ಮಾಡಿಕೊಳ್ಳುತ್ತೀನಿ’, ಯಾವಾಗಲು ಬೈತಾ ಇದ್ರು, ಆದರೀಗ ಅದು ಇಲ್ಲಾ ಅನ್ನೋ ಬೇಜಾರಿದೆ. ಇಂದು ಆ ವಾಯ್ಸ್ ನಮ್ಮ ಜೊತೆ ಇಲ್ಲ. ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
40 ವರ್ಷದ ಕಲಾಸೇವೆ: ಸಿನಿ ಪಯಣ ನೆನೆದು ಭಾವುಕರಾದ ಜಗ್ಗೇಶ್..!
ಇನ್ನು ಇದೇ ವೇಳೆ ಮಂಡ್ಯದಲ್ಲಿ ಅಂಬರೀಶ್ ಅವರಿಗೆ ಮಂದಿರ ನಿರ್ಮಾಣ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ದರ್ಶನ್ ಅವರು ಅಪ್ಪಾಜಿ ಅವರ ಹೆಸರಿನಲ್ಲಿ ಗುಡಿ ಕಟ್ಟೋದರಲ್ಲಿ ತಪ್ಪಿಲ್ಲ. ನಾನು ಅವರನ್ನು ದೇವರಂತೆ ಪೂಜಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
darshan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel