maharashtra govt
ಠಾಕ್ರೆ ಸರ್ಕಾರ ಶೀಘ್ರದಲ್ಲೇ ಪತನ ಎಂದ ಬಿಜೆಪಿ: ಇದು ‘ಕನಸಷ್ಟೇ’ ಎಂದ ಶಿವಸೇನಾ..!
ಮುಂಬೈ: ಒಂಡೆದೆ ಮಹಾರಾಷ್ಟ್ರದಲ್ಲಿ ಆಡಳಿತರೂಢ ಮಹಾವಿಕಾಸ ಸರ್ಕಾರ ಒಂದು ವರ್ಷ ಪೂರೈಕೆಯ ಅಂಚಿನಲ್ಲಿದೆ. ಆದ್ರೆ ಈ ಸರ್ಕಾರಕ್ಕೆ ಹೆಚ್ಚು ದಿನ ಆಯುಷ್ಯ ಇಲ್ಲ ಅಂತ ಭಾರತೀಯ ಜನತಾ ಪಾರ್ಟಿ ಭವಿಷ್ಯ ನುಡಿದಿದೆ.
ಹೌದು ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ ಸರ್ಕಾರವು ತನ್ನಿಂದ ತಾನೇ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದು ಬಿಜೆಪಿ ಹೇಳಿದೆ.
ಸೋತವರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ : ಸ್ವಪಕ್ಷದವರ ವಿರುದ್ಧ ರೇಣುಕಾಚಾರ್ಯ ಗುಡುಗು
ಆದರೆ, ಬಿಜೆಪಿ ನಾಯಕರ ಈ ಹೇಳಿಕೆಗೆ ಶಿವಸೇನಾ ಟಾಂಗ್ ಕೊಟ್ಟಿದೆ. ಬಿಜೆಪಿ ಹೇಳಿಕೆಯನ್ನ ತಳ್ಳಿ ಹಾಕಿರುವ ಶಿವಸೇನಾ, ಇದು ಬಿಜೆಪಿಯ ಕನಸಷ್ಟೇ. ಎನ್ಸಿಪಿ ಹಾಗೂ ಕಾಂಗ್ರೆಸ್ ನ ಮೈತ್ರಿ ಸರ್ಕಾರ ಆಡಳಿತಾವಧಿಯನ್ನು ಪೂರ್ಣಗೊಳಿಸಲಿದೆ. ರಾಜ್ಯದಲ್ಲಿ ಆಪರೇಷನ್ ಕಮಲ’ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ತಿಳಿಸಿದೆ.
ಹೌದು ಇಡೀ ದೇಶಾದ್ಯಂತ ಬಿಜೆಪಿ ಪ್ರಾಬಲ್ಯ ಹೆಚ್ಚುತ್ತಲೇ ಇದೆ. ಒಂದೆಡೆ ವಿಪಕ್ಷಗಳು ಆಪರೇಶನ್ ಕಮಲದ ಆರೋಪ ಹೊರಿಸುತ್ತಿದ್ದಾರೆ. ಆದ್ರೆ ಮಹಾರಾಷ್ಟ್ರದಲ್ಲಿ ಮಾತ್ರ ಆಪರೇಶನ್ ಕಮಲ ಸಕ್ಸಸ್ ಆಗಲಿಕ್ಕೆ ಬಿಡಲ್ಲ ಎಂದು ಬಿಜೆಪಿ ಸವಾಲಿಗೆ ಎದುರಾಗಿ ಶಿವಸೇನಾ ತೊಡೆತಟ್ಟಿ ನಿಂತಿದೆ.

ಇನ್ನೂ ಇತ್ತೀಚೆಗೆ ಈ ಕುರಿತಾಗಿ ಮಾತನಾಡಿದ್ದ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು , ಇದೊಂದು ಮೂರು ಪಕ್ಷಗಳ ಅಸ್ವಾಭಾವಿಕವಾದ ಮೈತ್ರಿ. ನಾವು ಪರಿಣಾಮಕಾರಿಯಾದ ವಿರೋಧಪಕ್ಷದ ಪಾತ್ರವನ್ನು ನಿಭಾಯಿಸುತ್ತಿದ್ದೇವೆ. ನಾನು ಯಾವುದೇ ದಿನಾಂಕವನ್ನು ಹೇಳುವುದಿಲ್ಲ. ಸರ್ಕಾರ ಪತನಗೊಂಡ ತಕ್ಷಣದಲ್ಲೇ, ಮತ್ತಷ್ಟು ಪರಿಣಾಮಕಾರಿಯಾದ, ಪರ್ಯಾಯ ಸರ್ಕಾರವು ಅಧಿಕಾರವಹಿಸಿಕೊಳ್ಳಲಿದೆ ಎಂದಿದ್ದಾರೆ. ಅವರ ಈ ಹೇಳಿಕೆಯಿಂದ ‘ಮಹಾ’ ರಾಜಕಾರಣದಲ್ಲಿ ಬಿರುಗಾಳಿ ಏಳುವ ಸಾಧ್ಯತೆಗಳಿವೆ.
ಅಂದ್ಹಾಗೆ ಕಳೆದ ವರ್ಷ ಬಿಜೆಪಿ ಜೊತೆಗಿನ ಮೈತ್ರಿಗೆ ಗುಡ್ ಬೈ ಹೇಳಿದ್ದ ಶಿವಸೇನೆ ಪ್ರತ್ಯೇಕವಾಗಿತ್ತು. ಬಳಿಕ ನ.28ರಂದು ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಇತ್ತ ಶಿವಸೇನಾ ನಾಯಕ ಸಂಜಯ್ ರಾವತ್ ಅವರು ಈ ಬಗ್ಗೆ ಮಾತನಾಡಿ 5 ವರ್ಷಗಳನ್ನು ನಾವು ಪೂರ್ಣಗೊಳಿಸಲಿದ್ದೇವೆ. ಮುಂದಿನ 25 ವರ್ಷಗಳವರೆಗೂ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅಧಿಕಾರವನ್ನು ನೀಡುವುದಿಲ್ಲ. ಸಿಬಿಐ, ಇ.ಡಿಯ ಬೆದರಿಕೆಗಳ ಬಗ್ಗೆ ನಮಗೆ ಚಿಂತೆಯಿಲ್ಲ ಎಂದಿದ್ದಾರೆ.
ಇನ್ನೂ ಬಿಜೆಪಿ ಹೇಳಿಕೆಗೆ ಟಾಂಗ್ ಕೊಟ್ಟಿರುವ ಠಾಕ್ರೆ ಆಪ್ತರಾಗಿರುವ ಸಚಿವ ಅನಿಲ್ ಪರಬ್ ‘ಬಿಜೆಪಿ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರ ಪೂರ್ಣಾವಧಿಯನ್ನು ಪೂರೈಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
maharashtra govt
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








