ಹುಬ್ಬಳ್ಳಿ: ಬೆಳ್ಳಂಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿಯಾದ ಘಟನೆ ಧಾರವಾಡದ ಅಣ್ಣಿಗೇರಿ ಬಳಿ ನಡೆದಿದೆ. ಕಾರು ಮತ್ತು ಕ್ರೂಸರ್ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ ನಾಲ್ಕು ಸಾವಿಗೀಡಾಗಿದ್ದಾರೆ.
ಗದಗ-ಹುಬ್ಬಳ್ಳಿ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಅಣ್ಣಿಗೇರಿ ಪಟ್ಟಣದ ಬಳಿಯ ಹೊರವಲಯದ ಕೊಂಡಿಕೊಪ್ಪ ಕ್ರಾಸ್ ನಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೃತರನ್ನು ಸಣ್ಣಗಂಗಣ್ಣ, ನಾಗಮ್ಮ, ಹನುಮಂತು, ಈರಣ್ಣ ಎಂದು ಗುರುತಿಸಲಾಗಿದೆ. ಸಣ್ಣೀರಣ್ಣ ಮತ್ತು ಲಕ್ಷ್ಮಿ ಹಾಗೂ ಕ್ರೂಸರ್ ಚಾಲಕ ಮಲ್ಲಪ್ಪ ಗಿಡ್ಡಣ್ಣವರ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕ್ರೂಸರ್ ಚಾಲಕನ ನಿರ್ಲಕ್ಷ್ಯದಿಂದಲೇ ಈ ಅಪಘಾತ ನಡೆದಿದೆ. ಮೃತರು ರಾಯಚೂರು ಜಿಲ್ಲೆಯ ಮಾನ್ವಿಯ ವಿಠ್ಠಲ ನಗರದ ನಿವಾಸಿಗಳು. ಮಾನ್ವಿಯಿಂದ ಕಾರವಾರದ ಹಲಗಾಗೆ ಪಾಶ್ರ್ವವಾಯು ಚಿಕಿತ್ಸೆಗೆ ಹೊರಟಿದ್ದರು. ಸ್ಥಳಕ್ಕೆ ಅಣ್ಣಿಗೇರಿ ಪೆÇಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








