rajeev gandhi
ಮದ್ರಾಸ್ ಹೈಕೋರ್ಟ್ ಮೊರೆ ಹೋದ ರಾಜೀವ್ ಗಾಂಧಿ ಹಂತಕ : ಬಿಡುಗಡೆ ಕೋರಿ ಮನವಿ
ಚೆನ್ನೈ: ಭಾರತದ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಹಂತಕ ಬಿಡುಗಡೆ ಕೋರಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾನೆ. ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಇನ್ನೂ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಹಂತಕರು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.
ಫೀಸ್ ಕಟ್ಟಿಲ್ಲ ಅಂದ್ರೆ ಆನ್‍ಲೈನ್, ಆಫ್‍ಲೈನ್ ಕ್ಲಾಸ್ ಬಂದ್: ಸರ್ಕಾರಕ್ಕೆ ಖಾಸಗಿ ಶಾಲೆಗಳ ಬೆದರಿಕೆ..!
ಸದ್ಯ ತಮಿಳುನಾಡಿನ ಮದುರೈ ಕೇಂದ್ರ ಕಾರಾಗೃಹದಲ್ಲಿರುವ ಹಂತಕರ ಪೈಕಿ ರವಿಚಂದ್ರನ್ ಕೋರ್ಟ್ ನಲ್ಲಿ ಈ ದಾವೆ ಹೂಡಿದ್ದಾನೆ. ಒಟ್ಟು 37 ವರ್ಷಗಳ ಕಾರಾಗೃಹ ವಾಸದಲ್ಲಿ ಈಗಾಗಲೇ 29 ವರ್ಷದ ಸಜೆಯನ್ನು ಅನುಭವಿಸಿದ್ದಾನೆ. ಹಂತಕರ ಪೈಕಿ ಇತರರು ಕೂಡ ಅವರಿಗೆ ವಿಧಿಸಲ್ಪಟ್ಟ ಸಜೆಯಲ್ಲಿ ಏಳು, 10 ಮತ್ತು 20 ವರ್ಷ ಸಜೆ ಅನುಭವಿಸಿದ್ದಾರೆ. ಇದೀಗ ಅವಧಿ ಪೂರ್ವ ಬಿಡುಗಡೆಯನ್ನು ಹಂತಕರು ಕೋರಿದ್ದಾರೆ. ಇನ್ನೂ ಏಳು ಹಂತಕರನ್ನು ಬಿಡುಗಡೆ ಮಾಡುವ ತೀರ್ಮಾನವನ್ನು ಇತ್ತೀಚೆಗಷ್ಟೇ ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿತ್ತು. ಆದರೆ, ಇದು ರಾಜ್ಯಪಾಲರ ಕಚೇರಿಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದೆ. ಹೀಗಾಗಿಯೇ ಇದನ್ನ ಪ್ರಶ್ನಿಸಿ ರವಿಚಂದ್ರನ್ ಕೋರ್ಟ್ ಕೋರ್ಟ್ ಮೊರೆ ಹೋಗಿದ್ದಾನೆ.
rajeev gandhi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel