ಐಸಿಸಿ ನೂತನ ಬಾಸ್ ಗ್ರೆಗ್ ಬಾಕ್ಲೆ,,,!
ಐಸಿಸಿಯ ನೂತನ ಮುಖ್ಯಸ್ಥರಾಗಿ ನ್ಯೂಜಿಲೆಂಡ್ ನ ಗ್ರೇಗ್ ಬಾಕ್ಲೇ ಅವರು ನೇಮಕಗೊಂಡಿದ್ದಾರೆ.
ಭಾರತದ ಶಶಾಂಕ್ ಮನೋಹರ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಬಾಕ್ರ್ಲೆ ಮುಂದೆ ಹಲವು ಸವಾಲುಗಳಿವೆ. ಇದರೊಂದಿಗೆ ಐಸಿಸಿ ಮುಖ್ಯಸ್ಥರ ಹುದ್ದೆ ಮೇಲಿನ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ.
ನ್ಯೂಜಿಲೆಂಡ್ ನ ಆಕ್ಲೆಂಡ್ ಮೂಲದ ಗ್ರೇಗ್ ಬಾಕ್ಲೆ ಅವರು ಕಮರ್ಷಿಯಲ್ ಲಾಯರ್ ಆಗಿದ್ದಾರೆ.
2012ರಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಸದ್ಯ ಅವರು ಐಸಿಸಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯನ್ನು ಪ್ರತಿನಿಧಿಸುತ್ತಿದ್ದರು.
ಇನ್ನು 2015ರ ವಿಶ್ವಕಪ್ ಟೂರ್ನಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಗ್ರೆಗ್ ಬಾಕ್ಲೆ ಅವರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ ಪ್ರತಿಷ್ಠಿತ ಕಂಪೆನಿಗಳ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಗಾಗಲೇ ಕೋವಿಡ್ 19ನಿಂದಾಗಿ ಜಾಗತಿಕ ಕ್ರಿಕೆಟ್ ತಲ್ಲಣಗೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಐಸಿಸಿ ಮುಖ್ಯಸ್ಥರಾಗಿರುವ ಗ್ರೆಗ್ ಬಾಕ್ಲೆ ಅವರು ವಿಶ್ವ ಕ್ರಿಕೆಟ್ ಗೆ ದಕ್ಕೆಯಾಗದಂತೆ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.
ಇನ್ನು ಐಸಿಸಿ ಮುಖ್ಯಸ್ಥನಾಗಿ ನೇಮಕಗೊಂಡಿರುವುದು ಖುಷಿ ತಂದಿದೆ. ಇದೊಂದು ಗೌರವ. ಎಲ್ಲರನ್ನು ಜೊತೆಯಾಗಿರಿಸಿಕೊಂಡು ಕ್ರಿಕೆಟ್ ಅನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬೆಳೆಸುವ ಗುರಿಯನ್ನು ಹೊಂದಿರುವುದಾಗಿ ಗ್ರೇಗ್ ಬಾಕ್ಲೆ ಅವರು ಹೇಳಿದ್ದಾರೆ.