ಸರ್ಕಾರಕ್ಕೆ 105 ಜನನೂ ಮುಖ್ಯ, 17 ಮಂದಿಯೂ ಮುಖ್ಯ : ಎಂಟಿಬಿ
ಬೆಂಗಳೂರು : ಸರ್ಕಾರಕ್ಕೆ 105 ಜನನೂ ಮುಖ್ಯ, 17 ಮಂದಿಯೂ ಮುಖ್ಯ. ಎಲ್ಲರೂ ಸೇರಿದ್ದರಿಂದ ಬಿಜೆಪಿ ಸರ್ಕಾರ ರಚನೆಯಾಗಿದ್ದು ಎಂದು ರೇಣುಕಾಚಾರ್ಯಗೆ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ – ಜೆಡಿಎಸ್ ಪಕ್ಷ ತೊರೆದು ಬಂದ 17 ಶಾಸಕರಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂಬುದು ಶುದ್ಧ ಸುಳ್ಳು. ವಲಸಿಗರಿಂದ ಬಿಜೆಪಿ ಸರ್ಕಾರ ರಚನೆ ಆಗಿಲ್ಲ ಎಂಬ ರೇಣುಕಾಚಾರ್ಯ ಅವರ ಹೇಳಿಕೆಗೆ ವಿಧಾನಸೌಧದಲ್ಲಿ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತ ಎಂಟಿಬಿ, 105 ಜನ ಇದ್ದಾಗ ಸರ್ಕಾರ ಏಕೆ ರಚನೆ ಆಗಿಲ್ಲಾ ಎಂದು ಪ್ರಶ್ನಿಸಿ, ಸರ್ಕಾರಕ್ಕೆ 105 ಜನನೂ ಮುಖ್ಯ, 17 ಜನರು ಮುಖ್ಯನೇ ಇಬ್ಬರೂ ಕೈ ಜೋಡಿಸಿದ್ದರಿಂದಲೇ ಸರ್ಕಾರ ಆಗಿದ್ದು.
ವಲಸೆ, ಮೂಲ ಎಂಬ ಪ್ರಶ್ನೆ ಇಲ್ಲ. ನಾವೆಲ್ಲಾ ಒಂದೇ ಮನೆಯಲ್ಲಿರೋದು. ಆ ಪ್ರಶ್ನೆ ಉದ್ಭವವಾಗಲ್ಲ ಎಂದು ರೇಣುಕಾಚಾರ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ತಡವಾಗುತ್ತಿದೆ. ಸಿಎಂ ಯಡಿಯೂರಪ್ಪನವರು ಹೈಕಮಾಂಡ್ ಗೆ ಪಟ್ಟಿ ಕೊಟ್ಟಿದ್ದಾರೆ. 17 ಜನರಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ : ವಲಸಿಗರ ವಿರುದ್ಧ ರೇಣುಕಾಚಾರ್ಯ ಗರಂ
ಪಟ್ಟಿ ಅಂಕಿತ ಪಡೆಯಬೇಕು. ಅದು ಬಂದ ಮೇಲೆ ವಿಸ್ತರಣೆ ಮಾಡುತ್ತಾರೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.
ಸಂಪುಟ ವಿಸ್ತರಣೆ ವಿಚಾರವಾಗಿ ಪದೇ ಪದೇ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಬಾರದು. ಸಿಎಂ ಭೇಟಿಯಾದಾಗ ಸಚಿವ ಸ್ಥಾನದ ಬಗ್ಗೆ ಕೇಳುತ್ತೇವೆ. ಕೊಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ಎಂ.ಪಿ.ರೇಣುಕಾಚಾರ್ಯ ಹೇಳಿದ್ದೇನು..?
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರೇಣುಕಾಚಾರ್ಯ, ಕಾಂಗ್ರೆಸ್ – ಜೆಡಿಎಸ್ ಪಕ್ಷ ತೊರೆದು ಬಂದ 17 ಶಾಸಕರಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂಬುದು ಶುದ್ಧ ಸುಳ್ಳು. ಸುತ್ತೂರಿನಲ್ಲಿ ಬಿಎಸ್ ವೈ ವಿರುದ್ಧ ಶ್ರೀನಿವಾಸ್ ಪ್ರಸಾದ್ ಬುಸ್ ಬುಸ್
ಪಕ್ಷದ ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಯಾರೋ ಒಬ್ಬರಿಂದ ಸರ್ಕಾರ ಬಂದಿದೆ ಎಂದು ಹೇಳಲಾಗದು. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಮೊದಲು 105 ಜನ ಆಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬೇಸತ್ತು 17 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನನ್ನಿಂದಲೇ ಸರ್ಕಾರ ಬಂದಿದೆ ಅಂತಾ ಯಾರು ಹೇಳುತ್ತಾರೋ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು.
ನಮ್ಮ ಪಕ್ಷದ ನಾಯಕರು, ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಕಾರ್ಯಕರ್ತರ ಶ್ರಮ ತ್ಯಾಗದಿಂದ ಪಕ್ಷ ಗಟ್ಟಿಗೊಂಡಿದೆ. ಬಿಜೆಪಿ ಸೇರಿರುವ 17 ಶಾಸಕರ ಕೊಡುಗೆಯನ್ನು ನಾನು ಗೌರವಿಸುತ್ತೇನೆ.
ಆದರೆ 105 ಶಾಸಕರು ನಾವು ಗೆದ್ದಿರಲಿಲ್ಲ ಎಂದರೆ ಈ ಸರ್ಕಾರ ಹೇಗೆ ಬರುತ್ತಿತ್ತು. ಇದನ್ನು ಯಾರು ಮರೆಯಬಾರದು ಎಂದು ತಿರುಗೇಟು ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel