`ರೈತರ ಧ್ವನಿ ಕೇಳದ ಬಿಜೆಪಿ | ಪ್ರತಿಭಟನೆ ಹತ್ತಿಕ್ಕಲು ಜಲ ಫಿರಂಗಿ ಬಳಕೆ’
ನವದೆಹಲಿ : ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ದೇಶದ ರೈತರು ದೆಹಲಿ ಚಲೋ ಚಳವಳಿ ಹಮ್ಮಿಕೊಂಡಿದ್ದು, ರೈತರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕರಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿ ನೀಡಿದ್ದು, ರೈತರ ಧ್ವನಿ ಕೇಳದ ಬಿಜೆಪಿಯು ಪ್ರತಿಭಟನೆ ಹತ್ತಿಕ್ಕಲು ಜಲ ಫಿರಂಗಿ ಬಳಸುತ್ತಿದೆ ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಉಗ್ರ ಸ್ವರೂಪ ಪಡೆದುಕೊಂಡಿದೆ.ದೆಹಲಿ ಚಲೋ ಚಳಚಳಿ ಹಿನ್ನೆಲೆ ರೈತರು ಪಂಜಾಬ್ ಮೂಲಕ ಹರಿಯಾಣ ಪ್ರವೇಶಿಸಲು ಯತ್ನಿಸಿದರು.
ಪಂಜಾಬ್ ಮತ್ತು ಹರಿಯಾಣ ಗಡಿ ಭಾಗದಲ್ಲಿರುವ ಶಂಭೂ ಅಂತಾರಾಜ್ಯ ಗಡಿ ಸಮೀಪ ಪಂಜಾಬ್ ರೈತರು ಹರಿಯಾಣ ಪ್ರವೇಶಿಸದಂತೆ ಪೊಲೀಸರು ತಡೆ ಹಿಡಿದರು.
ಪೊಲೀಸರ ಈ ವರ್ತನೆಯಿಂದ ಕುಪಿತಗೊಂಡ ರೈತ ಸಮುದಾಯ ಬ್ಯಾರಿಕೇಟ್ ಗಳನ್ನು ಕಿತ್ತು ನದಿಗೆ ಎಸೆದು ಹರಿಯಾಣ ಪ್ರವೇಶಿಸಲು ಮುಗಿ ಬಿದ್ದರು. ಸಿದ್ದರಾಮಯ್ಯನವರೇ ಮೊದ್ಲು ನಿಮ್ಮ ತಟ್ಟೆ ನೋಡಿಕೊಳ್ಳಿ : ರೇಣುಕಾಚಾರ್ಯ
ಏಕಾಏಕಿ ರೊಚ್ಚಿಗೆದ್ದ ರೈತರನ್ನು ತಡೆ ಹಿಡಿಯಲು ವಿಫಲರಾದ ಪೊಲೀಸರು ಉದ್ರಿಕ್ತ ಗುಂಪಿನ ಮೇಲೆ ಜಲಪಿರಂಗಿ ಪ್ರಯೋಗಿಸಿದರು. 2008ರ ಮುಂಬೈ ಉಗ್ರ ದಾಳಿಗೆ ಇಂದಿಗೆ 12 ವರ್ಷ: ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಾಥ್ ಕೊಟ್ಟ ಅಮೆರಿಕಾ..!
ಈ ಘಟನೆ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ನೂತನ ಮಸೂದೆ ವಿರುದ್ಧ ಪ್ರತಿಭಟನೆಗೆ ಇಳಿದಿರುವ ರೈತರ ಧ್ವನಿ ಕೇಳುವ ಬದಲು ಬಿಜೆಪಿ ಸರ್ಕಾರ ಅವರ ವಿರುದ್ಧ ಜಲಫಿರಂಗಿ ಬಳಕೆ ಮಾಡುತ್ತಿದ್ದಾರೆ.
ಬಂಡವಾಳಶಾಹಿಗಳಿಗೆ ಬ್ಯಾಂಕುಗಳು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಸಾಲ ಮನ್ನಾ ಮಾಡಲಾಗುತ್ತಿದ್ದು, ರೈತರಿನಿಂದ ಎಲ್ಲವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಗುಡುಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel