international airoplanes
ಡಿಸೆಂಬರ್ 31, 2020ರ ತನಕ ಅಂತರರಾಷ್ಟ್ರೀಯ ವಿಮಾನ ಹಾರಾಟ ಅಮಾನತು..!
ನವೆಂಬರ್ ಆರಂಭದಲ್ಲಿ ಕೊಂಚ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳು ಇದೀಗ ಮತ್ತೆ ಹೆಚ್ಚಾಗುತ್ತಿದೆ. ದೆಹಲಿ, ಮುಂಬೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಹಾವಳಿ ಮಿತಿ ಮೀರುತ್ತಿದೆ. ಈ ಹಿನ್ನೆಲೆ ಡಿಸೆಂಬರ್ 31ರವರೆಗೂ ಅಂದ್ರೆ 2020 ಕೊನೆಯ ವರೆಗೂ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಸಸ್ಥಗಿತಗೊಳಿಸಲಾಗಿದೆ ಎಂದು ಡಿಜಿಸಿಎ ಘೋಷಿಸಿದೆ.
ಆದರೆ, ಡಿಜಿಸಿಎಯಿಂದ ನಿರ್ದಿಷ್ಟವಾದ ಅನುಮತಿ ದೊರೆತಿರುವ ಮಾರ್ಗದಲ್ಲಿ ಆಯ್ದ ಅಂತರರಾಷ್ಟ್ರೀಯ ವಿಮಾನ ಹಾರಾಟ ಮುಂದುವರಿಯಲಿದೆ. 26-6-2020ರಂದು ಹೊರಡಿಸಿದ ಆದೇಶದ ಸುತ್ತೋಲೆಗೆ ಭಾಗಶಃ ಬದಲಾವಣೆ ಮಾಡಿದ್ದು, ಸಕ್ಷಮ ಪ್ರಾಧಿಕಾರವು ಸುತ್ತೋಲೆಯ ಅವಧಿಯನ್ನು ವಿಸ್ತರಣೆ ಮಾಡಿದೆ.
ಭಾರತದಿಂದ ತೆರಳುವ ಹಾಗೂ ಭಾರತಕ್ಕೆ ಬರುವ ನಿಗದಿತ ವೇಳಾಪಟ್ಟಿಯ ಪ್ರಯಾಣಿಕರ ವಾಣಿಜ್ಯ ವಿಮಾನ ಸೇವೆಗಳನ್ನು ಅಮಾನತು ಮಾಡಿ, ಡಿಸೆಂಬರ್ 31, 2020ರ 23.59 ತನಕ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ.
ದೇಶೀಯ ವಿಮಾನ ಸೇವೆಗಳು ದೊರೆಯುತ್ತಿದ್ದು, ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಹಾರಾಟ ನಡೆಸಲಾಗುತ್ತಿದೆ.
international airoplanes
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








