Trump
ಈಗಲೂ ಗೆದ್ದಿರುವುದು ನಾವೇ: ಮೊಂಡುತನ ಬಿಡದ ಟ್ರಂಪ್ ..!
ಅಮೆರಿಕ : ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊಂಡುತನವನ್ನ ಇಡೀ ವಿಶ್ವವೇ ನೋಡುವಂತಾಗಿದೆ. ಒಂದೆಡೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಅವರು ಭರ್ಜರಿಯಾಗಿ ಗೆದ್ದು ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಸೋಲನ್ನ ಒಪ್ಪದ ಟ್ರಂಪ್ ಪದೇ ಪದೇ ನಾವೇ ಗೆದ್ದಿದ್ದು, ಅಂತ ಹೇಳಿ ಮತೆಣಿಕೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದೂ ಉಂಟು.
ಇದೀಗ ಅಧ್ಯಕ್ಷರ ಚುನಾವಣೆ ಬಳಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದ್ರೂ ಟ್ರಂಪ್ ಮಾತ್ರ ಈಗಲೂ ಸೋಲನ್ನ ಒಪ್ಪಿಕೊಳ್ಳಲು ತಯಾರಾಗಿಲ್ಲ. ಈಗಲೂ ‘ನಾವೇ ಗೆದ್ದಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಗೆಟ್ಟಿಸ್ ಬರ್ಗ್ನಲ್ಲಿ ಮಾತನಾಡಿರುವ ಟ್ರಂಪ್ ಇದು, ನಾವು ಸುಲಭವಾಗಿ ಗೆಲುವು ಸಾಧಿಸಿರುವ ಚುನಾವಣೆ. ದೊಡ್ಡ ಪ್ರಮಾಣದಲ್ಲಿಯೇ ಗೆದ್ದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ನಿತೀಶ್ ಮತ್ತೆ ಸಿಎಂ ಆಗಿದ್ದಕ್ಕೆ 4ನೇ ಬೆರಳನ್ನು ಕಟ್ ಮಾಡಿಕೊಂಡ ಅಭಿಮಾನಿ
ಟ್ರಂಪ್ ಮತ್ತು ಅವರ ವಕೀಲರೂ ಆದ ನ್ಯೂಯಾರ್ಕ್ನ ಮಾಜಿ ಮೇಯರ್ ರೂಡಿ ಗಿಲಾನಿ ಅವರು ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮತ್ತೆ ಚುನಾವಣೆಯ ಫಲಿತಾಂಶದ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಆದ್ರೆ ದೇಶದ ಚುನಾವಣಾ ಅಧಿಕಾರಿಗಳು, ಅಂತರರಾಷ್ಟ್ರೀಯ ವೀಕ್ಷಕರು, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದಿದ್ದಾರೆ. ಈ ಮಧ್ಯೆ, ಅಮೆರಿಕದಲ್ಲಿ ಅಧ್ಯಕ್ಷರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ.
Trump
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel