ಪಂದ್ಯ ಸೋತ್ರೂ ರನ್ ಚರಿತ್ರೆ ಸೃಷ್ಠಿಸಿದ ಹಾರ್ದಿಕ್ ಪಾಂಡ್ಯ
ಸಿಡ್ನಿ : ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಆದ್ರೆ ಭಾರತದ ಶೋ ಮ್ಯಾನ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಪರ ರನ್ ಚರಿತ್ರೆ ಸೃಷ್ಠಿಸಿದ್ದಾರೆ.
ಹೌದು..! ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್ ನಲ್ಲಿ ಕೇವಲ 857 ಎಸೆತಗಳಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕಡಿಮೆ ಎಸೆತದಲ್ಲಿ ಸಾವಿರ ರನ್ ಪೂರ್ಣಗೊಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಈ ಮ್ಯಾಚ್ ಗೂ ಮುನ್ನ ಹಾರ್ದಿಕ್ 54 ಏಕದಿನದ 38 ಇನ್ನಿಂಗ್ಸ್ ನಲ್ಲಿ 957 ರನ್ ಹೊಡೆದಿದ್ದರು. ಇಂದಿನ ಪಂದ್ಯದಲ್ಲಿ 43 ರನ್ ಹೊಡೆಯುವ ಮೂಲಕ ಸಾವಿರ ರನ್ ಗಡಿ ದಾಟಿದರು.

ಇನ್ನು ಕಡಿಮೆ ಎಸೆತದಲ್ಲಿ ಸಾವಿರ ರನ್ ಪೂರ್ಣಗೊಳಿಸಿದ ವಿಶ್ವದ ಆಟಗಾರರ ಪೈಕಿ ವೆಸ್ಟ್‍ಇಂಡೀಸ್ ಆಟಗಾರ ಆಂಡ್ರೆ ರಸೆಲ್ ಮೊದಲ ಸ್ಥಾನದಲ್ಲಿದ್ದಾರೆ. ರಸೆಲ್ 767 ಎಸೆತದಲ್ಲಿ ಸಾವಿರ ರನ್ ಹೊಡೆದಿದ್ದರು.
ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‍ನ ಲ್ಯೂಕ್ ರೊಂಚಿ(807 ಎಸೆತ), ಪಾಕಿಸ್ತಾನ ಶಾಹಿದ್ ಅಫ್ರಿದಿ(834 ಎಸೆತ), ನ್ಯೂಜಿಲೆಂಡಿನ ಕೊರೆ ಆಂಡರ್‍ಸನ್(854 ಎಸೆತ), ಹಾರ್ದಿಕ್ ಪಾಂಡ್ಯ(857), ಇಂಗ್ಲೆಂಡಿನ ಜೋಸ್ ಬಟ್ಲರ್(860 ಎಸೆತ) ಇದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








