ಕಾರವಾರ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಆತ್ಮಹತ್ಯೆ ಯತ್ನ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಸಂತೋಷ್ ಆತ್ಮಹತ್ಯೆ ಯತ್ನಕ್ಕೆ `ಆ ವಿಡಿಯೋ’ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಸಂತೋಷ್ ವಿಡಿಯೋ ಕಾರಣಕ್ಕೆ ಬೇಸರದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಹೇಳಿದ್ದಾರೆ.
ವಿಡಿಯೋ ವಿಚಾರವಾಗಿ ಸಂತೋಷ್ ಅವರನ್ನು ಸಚಿವರು ಹಾಗೂ ಎಂಎಲ್‍ಸಿಯೊಬ್ಬರು ಬ್ಲಾಕ್‍ಮೇಲ್ ಮಾಡುತ್ತಿದ್ದರು. ವಿಡಿಯೋವನ್ನು ಮಂತ್ರಿ, ಸಚಿವರಿಗೆ ಕೊಟ್ಟಿದ್ದಾರಂತೆ. ಜತೆಗೆ ಪರ್ಸನಲ್ ವಿಡಿಯೋವನ್ನು ದೆಹಲಿ ನಾಯಕರಿಗೆ ತಲುಪಿಸಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಸತ್ಯ ಎಷ್ಟು, ಸುಳ್ಳು ಎಷ್ಟು ಎಂಬುದು ಗೊತ್ತಿಲ್ಲ. ಈ ಬಗ್ಗೆ ಸರ್ಕಾರ ಹೊರತುಪಡಿಸಿದ ತನಿಖೆಯಾಗಬೇಕು ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
ವಿಡಿಯೋ ವಿಚಾರದಲ್ಲಿ ಬಗಳಷ್ಟು ರಹಸ್ಯ ಅಡಗಿದೆ, ಸುಮಾರು ಎರಡು ಮೂರು ತಿಂಗಳಿಂದ ನನ್ನ ಗಮನಕ್ಕೂ ಬಂತು. ವಿಡಿಯೋ ಇಟ್ಟುಕೊಂಡು ಆ ಎಂಎಲ್‍ಸಿ, ಮಂತ್ರಿಯೊಬ್ಬರು ಮುಖ್ಯಮಂತ್ರಿಗಳಿಗೂ ಬ್ಲಾಕ್‍ಮೇಲ್ ಮಾಡುತ್ತಿದ್ದರು, ಬೇರೆಯವರಿಗೂ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ನನಗೆ ಬಹಳಷ್ಟು ಜನ ಫೋನ್ ಮಾಡಿ ಹೇಳುತ್ತಿದ್ದರು. ಹೀಗಾಗಿ ಈ ಬಗ್ಗೆ ತನಿಖೆಯಾಗಲಿ ಎಂದರು.
ಕಟೀಲ್‍ಗೆ ಹೆಚ್ಚುಕಮ್ಮಿಗೆ ಆಗಿದೆ, ಆಸ್ಪತ್ರೆಗೆ ಸೇರಿಸಬೇಕು
ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ಹಣದಿಂದ ನಡೆಯುತ್ತಿತ್ತು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ಹಣದಿಂದ ನಡೆದಿದ್ದರೆ ಇವರು ಎಫ್‍ಐಆರ್ ಹಾಕದೇ ಇನ್ನೂ ಯಾಕೆ ಸುಮ್ಮನಿದ್ದಾರೆ. ಯಾವುದೋ ಸಣ್ಣ ಪುಟ್ಟ ನಟಿಯರನ್ನು ಜೈಲಿಗೆ ಹಾಕಿಸಿದರೆ ಸಾಲದು. ಅಂದು ನಾನು ಕೂಡ ಸರ್ಕಾರದಲ್ಲಿ ಸಚಿವನಾಗಿದ್ದೆ. ನನ್ನ ಮೇಲೂ ಯಾಕೆ ಎಫ್‍ಐಆರ್ ಹಾಕಿಲ್ಲ, ನಮ್ಮ ಸರ್ಕಾರ, ಪಕ್ಷದಲ್ಲಿದ್ದವರು ಈಗ ಬಿಜೆಪಿಗೆ ಹೋಗಿದ್ದಾರೆ, ಅವರ ಮೇಲೂ ಕೇಸ್ ಹಾಕಲಿ ನೋಡೋಣ. ಪ್ರಭಾವಿ ರಾಜಕಾರಣಿಯನ್ನು ಜೈಲಿಗೆ ಕಳಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಜವಾಬ್ದಾರಿಯುವ ಸ್ಥಾನದಲ್ಲಿರುವ ವ್ಯಕ್ತಿ ಗೌರವದಿಂದ ನಡೆದುಕೊಳ್ಳಲಿ. ನಳಿನ್ ಕುಮಾರ್ ಕಟೀಲ್ ಅವರಿಗೆ ಅಲ್ಪಸ್ವಲ್ಪ ರಾಜಕೀಯ ಜ್ಞಾನ ಇದೆ ಎಂದುಕೊಂಡಿದ್ದೆ. ಒಂದು ಸರ್ಕಾರವನ್ನು ಡ್ರಗ್ಸ್ ಹಣದಿಂದ ನಡೆಸಲಾಗುತ್ತದೆ ಎಂಬ ಹೇಳಿಕೆ ಅವರ ಸ್ಥಾನಕ್ಕೆ ಕಳಂಕ ತರುವಂತಿದೆ. ಹೀಗಾಗಿ ಕಟೀಲ್‍ಗೆ ಹೆಚ್ಚು ಕಮ್ಮಿ ಆಗಿದೆ ಅನ್ನಿಸುತ್ತದೆ. ಆಸ್ಪತ್ರೆಗೆ ಸೇರಿಸುವುದು ಒಳ್ಳೆಯದು ಎಂದು ಡಿಕೆಶಿ ಟಾಂಗ್ ನೀಡಿದ್ದಾರೆ.
ಸಂಪುಟ ವಿಸ್ತರಣೆ ವಿಳಂವ ಬಿಜೆಪಿಯ ಆಂತರಿಕ ವಿಚಾರ. ಆ ಬಗ್ಗೆ ನಾವು ತಲೆ ಹಾಕಲ್ಲ. ನಮಗೆ ಸಂಬಂಧವೂ ಇಲ್ಲ, ಯಾರನ್ನದರೂ ಸರ್ಕಾರದಲ್ಲಿ ತೆಗೆದು ಹಾಕಲಿ, ಸೇರಿಸಿಕೊಳ್ಳಲಿ, ನಮ್ಮ ಸರ್ಕಾರ ಬೀಳಿಸಿ ಬಿಜೆಪಿಗೆ ಹೋದವರಿಗೆ ನಾವೇನು ನೋವು ಅನುಭವಿಸಿದ್ದೇವೆ ಅನ್ನೋದು ಅವರಿಗೂ ಆಗುತ್ತೆ ಎಂದು ತಿರುಗೇಟು ನೀಡಿದ್ದಾರೆ.
ನಾನು ಈಗಾಗಲೇ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ, ಗ್ರಾಮ ಪಂಚಾಯಿತು, ತಾಲೂಕು ಪಂಚಾಯಿ, ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಪ್ರಯತ್ನ ಮಾಡುತ್ತಿದ್ದೇನೆ. ಯಾವ ತನಿಖೆ ನಡೆದರೂ ಅದಕ್ಕೆ ಸಹಕಾರ ನೀಡುತ್ತೇನೆ. ನಾನು ತಪ್ಪು ಮಾಡಿಲ್ಲವಾದರೆ ಯಾಕೆ ಹೆದರಬೇಕು ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel