ADVERTISEMENT
Wednesday, October 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆಯಬೇಕು : ಬಿ.ಸಿ. ಪಾಟೀಲ್

Mahesh M Dhandu by Mahesh M Dhandu
November 28, 2020
in Newsbeat, Samagra karnataka, ರಾಜ್ಯ
Agricultural University
Share on FacebookShare on TwitterShare on WhatsappShare on Telegram

ಬೆಂಗಳೂರು : ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆಯಬೇಕು. ಈ ಮೂಲಕವೂ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕಾರಣವಾಗಬೇಕು. ಇದು ಅತೀ ಜರೂರಿನ ಕಾರ್ಯ ಎಂದು ಕೃಷಿ ಸಚಿವಗಳೂ ಆಗಿರುವ ಕೃಷಿವಿಶ್ವದ್ಯಾಲಯಗಳ ಸಹ ಕುಲಾಧಿಪತಿ ಬಿ.ಸಿ. ಪಾಟೀಲ್ ಕರೆ ನೀಡಿದರು.

ಕೃಷಿ ವಿಶ್ವವಿದ್ಯಾಲಯ ಬೆಂಗಳೂರು 54ನೇ ಘಟಿಕೋತ್ವವದಲ್ಲಿ ಪದವಿದಧರು, ಸ್ನಾತಕೋತ್ತರ ಪದವಿಧರರು, ಪಿ.ಎಚ್.ಡಿ. ಪಡೆದವರಿಗೆ ಪದವಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

Related posts

ಯಾವುದೇ ಸ್ಟಾರ್ ಇಮೇಜ್ ಹಂಗಿಲ್ಲದೆ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ ಸಣ್ಣ ಬಜೆಟ್ ನ ಪ್ರೇಮದ ಊರಲಿ ಎಂಬ ಮಹಾಕಾವ್ಯ: 100 ಕೋಟಿ ಕ್ಲಬ್ ನ ಹೊಸ್ತಿಲಲ್ಲಿ ಪ್ರೇಮದ ಊರಲಿ ಚಿತ್ರ

ಯಾವುದೇ ಸ್ಟಾರ್ ಇಮೇಜ್ ಹಂಗಿಲ್ಲದೆ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ ಸಣ್ಣ ಬಜೆಟ್ ನ ಪ್ರೇಮದ ಊರಲಿ ಎಂಬ ಮಹಾಕಾವ್ಯ: 100 ಕೋಟಿ ಕ್ಲಬ್ ನ ಹೊಸ್ತಿಲಲ್ಲಿ ಪ್ರೇಮದ ಊರಲಿ ಚಿತ್ರ

October 21, 2026
ಸ್ಟಿಂಗ್ ಆಪರೇಷನ್ ವಿವಾದ:ರಕ್ತ ಕುದಿಯುತ್ತಿದೆ ಎಂದ ಕಾರ್ಯಕರ್ತರಿಗೆ ಒಳ್ಳೆಯ ಕಾಲ ಬರಲಿದೆ ಎಂದು  ಸಮಾಧಾನಪಡಿಸಿದ H D  ಕುಮಾರಸ್ವಾಮಿ

ಸ್ಟಿಂಗ್ ಆಪರೇಷನ್ ವಿವಾದ:ರಕ್ತ ಕುದಿಯುತ್ತಿದೆ ಎಂದ ಕಾರ್ಯಕರ್ತರಿಗೆ ಒಳ್ಳೆಯ ಕಾಲ ಬರಲಿದೆ ಎಂದು ಸಮಾಧಾನಪಡಿಸಿದ H D ಕುಮಾರಸ್ವಾಮಿ

October 21, 2026

ರಾಜ್ಯದಲ್ಲಿ ಒಟ್ಟು ಆರು ಕೃಷಿ ವಿಶ್ವವಿದ್ಯಾಲಯಗಳಿವೆ. ಇವುಳು ಪ್ರತಿವರ್ಷ ತಲಾ ನಾಲ್ಕು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಲ್ಲಿಯ ಕೃಷಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಬೇಕಿದೆ ಎಂದರು.

ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯದ ಕೃಷಿ ಇಲಾಖೆಯ ವೃಂದ – ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿಯಾಗಿರಲಿಲ್ಲ.

ನಾನು ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದರ ಬಗ್ಗೆ ಆಸಕ್ತಿ ವಹಿಸಿದೆ. ಅದು ಇತ್ತೀಚೆಗೆ ತಿದ್ದುಪಡಿಯಾಗಿದೆ. ಆಹಾರ ಮತ್ತು ಕೃಷಿ ಇಂಜಿನಿಯರಿಂಗ್ ವಿಷಯಗಳಲ್ಲಿ ಪದವಿ ಪಡೆದವರಿಗೆ ಶೇಕಡ 15ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.

Agricultural University

ಪದವಿ, ಅತೀಹೆಚ್ಚು ಚಿನ್ನದ ಪದಕಗಳನ್ನು ಪಡೆದವರಲ್ಲಿ ವಿದ್ಯಾರ್ಥಿನಿಯರೇ ಅಧಿಕವಾಗಿದ್ದಾರೆ. ಇದು ಸಂತೋಷದ ಸಂಗತಿ. ಆದರೆ ಉದ್ಯಮಿಗಳಾದವರು, ಸರ್ಕಾರಿ ಉದ್ಯೋಗಿಗಳಾದವರ ಸಂಖ್ಯೆ ಗಮನಿಸಿದರೆ ಮಹಿಳೆಯರು ಕಡಿಮೆ ಇದ್ದಾರೆ.

ಕೃಷಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕೃಷಿ ನವೋದ್ಯಮಿಗಳಾಗಿ ಹೊರಹೊಮ್ಮಬೇಕು. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು.

ಈ ಮಾದರಿಯಲ್ಲಿ ಇಂಥ ವಿದ್ಯಾರ್ಥಿನಿಯರ ಜೀವನಪಥ ಮುಂದುವರಿಯಲು ಕೃಷಿ ವಿಶ್ವವಿದ್ಯಾಲಯ ಆಸಕ್ತಿ ವಹಿಸಬೇಕು ಎಂದು ಸೂಚಿಸಿದರು.

ಪದವಿಗಳನ್ನು ಪಡೆದ ಎಲ್ಲರನ್ನೂ ಶ್ಲಾಘಿಸಿದ ಅವರು ನಿಮ್ಮೆಲ್ಲರ ಸಾಧನೆ ಚಿನ್ನದ ಪದಕ –ಪಟ್ಟಿಗಳ್ನು ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಬಾರದು.

ನಿಮ್ಮ ಜ್ಞಾನ ಕೃಷಿಕರ ಏಳಿಗೆಗೆ ಸದುಪಯೋಗವಾಗಬೇಕು. ನೀವು ಸಾಧನೆ ಮಾಡಬೇಕಿರುವುದು ಬಹಳಷ್ಟಿದೆ. ನೊಂದ ರೈತ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಬೇಕು.

ಭಾರತೀಯ ರೈತರದು ಮುಂಗಾರು ಮಳೆಯೊಂದಿಗಿನ ಜೂಜಿನ ಬದುಕು. ಮಳೆ ಅತಿಯಾದರೂ ಕಷ್ಟ – ತೀರಾ ಕಡಿಮೆಯಾದರೂ ಕಷ್ಟ. ಚಂಡಮಾರುತಗಳಿಂದಲೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂಥ ಕೃಷಿಕರ ಏಳಿಗೆಗೆ ಕಾರಣವಾಗುವ ಕಾರ್ಯಗಳನ್ನು ನೀವೇಲ್ಲರೂ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

Agricultural University

ಅಖಿಲ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಕೈಲಾಸವಡಿವೊ ಶಿವನ್ ಅವರು ಆನ್ ಲೈನ್ ಮೂಲಕ ಘಟಿಕೋತ್ಸವನ್ನುದ್ದೇಶಿಸಿ ಸಚಿವರು ಮಾತನಾಡಿದರು.

ಬಲವಿದ್ದವರೇ ಬದುಕುತ್ತಾರೆ ಎಂದು ಡಾರ್ವೀನ್ ಥಿಯರಿ ಹೇಳುತ್ತದೆ. ಅಶಕ್ತರೂ ಬದುಕಬಲ್ಲ ಸಮಾಜವನ್ನು ಇನ್ನಷ್ಟು ಸದೃಢವಾಗಿ ಕಟ್ಟುವಲ್ಲಿ ನಿಮ್ಮ ಪಾತ್ರ ಗಣನೀಯ ಎಂದ ಅವರು ತಮ್ಮ ಕೃಷಿಕ ಕುಟುಂಬದ ಹಿನ್ನೆಲೆ, ವಿದ್ಯಾರ್ಥಿ ದೆಶೆಯಲ್ಲಿ ಕೃಷಿಕಾರ್ಯದಲ್ಲ ಕುಟುಂಬದ ಹಿರಿಯರಿಗೆ ಸಹಾಯ ಮಾಡುತ್ತಿದ್ದನ್ನು ನೆನೆದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಅವರು ಸ್ವಾಗತ ಕೋರಿ ಶೈಕ್ಷಣಿಕ ವರದಿ ಮಂಡಿಸಿದರು. ಕುಲಸಚಿವರು ಸಾಂಪ್ರದಾಯಿಕ ಘಟಿಕೋತ್ಸವ ನಡವಳಿ ನೇತೃತ್ವ ವಹಿಸಿದ್ದರು.

ಪದವಿಧರರು ನೇರವಾಗಿ ಮತ್ತು ಆನ್ ಲೈನ್ ಮಖಾಂತರವೂ ಭಾಗವಹಿಸಿದ್ದರು.ಸಮಾರಂಭಕ್ಕೆ ಬಂದ ಇವರ ಕುಟುಂಬ ಸದಸ್ಯರು, ಆಸಕ್ತರಿಗೆ ನಡವಳಿಯ ಕಲಾಪವನ್ನು ಸಭಾಂಗಣದ ಹೊರಗೆ ಹಾಕಿದ್ದ ಬೃಹತ್ ಸಿಸಿಟಿವಿ ಪರದೆಗಳ ಮೂಲಕ ನೇರ ಪ್ರಸಾರ ಮಾಡಲಾಯಿತು

Tags: Agricultural University Bangalore 54th ConsularB C Patilbangalore
ShareTweetSendShare
Join us on:

Related Posts

ಯಾವುದೇ ಸ್ಟಾರ್ ಇಮೇಜ್ ಹಂಗಿಲ್ಲದೆ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ ಸಣ್ಣ ಬಜೆಟ್ ನ ಪ್ರೇಮದ ಊರಲಿ ಎಂಬ ಮಹಾಕಾವ್ಯ: 100 ಕೋಟಿ ಕ್ಲಬ್ ನ ಹೊಸ್ತಿಲಲ್ಲಿ ಪ್ರೇಮದ ಊರಲಿ ಚಿತ್ರ

ಯಾವುದೇ ಸ್ಟಾರ್ ಇಮೇಜ್ ಹಂಗಿಲ್ಲದೆ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ ಸಣ್ಣ ಬಜೆಟ್ ನ ಪ್ರೇಮದ ಊರಲಿ ಎಂಬ ಮಹಾಕಾವ್ಯ: 100 ಕೋಟಿ ಕ್ಲಬ್ ನ ಹೊಸ್ತಿಲಲ್ಲಿ ಪ್ರೇಮದ ಊರಲಿ ಚಿತ್ರ

by Shwetha
October 21, 2026
0

ಬೆಂಗಳೂರು: ಕನ್ನಡ ಚಿತ್ರರಂಗದ ಗರಿಮೆಯನ್ನು ಜಗತ್ತಿನಾದ್ಯಂತ ಪಸರಿಸಲು ಕೋಟಿ ಕೋಟಿ ಬಜೆಟ್ ಅಥವಾ ದೊಡ್ಡ ತಾರಾಗಣವೇ ಬೇಕಿಲ್ಲ, ಕೇವಲ ಒಂದು ಶಕ್ತಿಯುತ ಕಥೆ ಮತ್ತು ಅದ್ಭುತ ಕಲ್ಪನೆ...

ಸ್ಟಿಂಗ್ ಆಪರೇಷನ್ ವಿವಾದ:ರಕ್ತ ಕುದಿಯುತ್ತಿದೆ ಎಂದ ಕಾರ್ಯಕರ್ತರಿಗೆ ಒಳ್ಳೆಯ ಕಾಲ ಬರಲಿದೆ ಎಂದು  ಸಮಾಧಾನಪಡಿಸಿದ H D  ಕುಮಾರಸ್ವಾಮಿ

ಸ್ಟಿಂಗ್ ಆಪರೇಷನ್ ವಿವಾದ:ರಕ್ತ ಕುದಿಯುತ್ತಿದೆ ಎಂದ ಕಾರ್ಯಕರ್ತರಿಗೆ ಒಳ್ಳೆಯ ಕಾಲ ಬರಲಿದೆ ಎಂದು ಸಮಾಧಾನಪಡಿಸಿದ H D ಕುಮಾರಸ್ವಾಮಿ

by Shwetha
October 21, 2026
0

ಮದ್ದೂರು: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕಿಚ್ಚು ಹತ್ತಿಕೊಂಡಿರುವ ಹೊತ್ತಿನಲ್ಲೇ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸುವ ಮೂಲಕ ಹೊಸ ಸಂಚಲನ...

ಸುಳ್ಳು ಹೇಳಿ ದಣಿದಿದ್ದೀರಾ ಎಂಬ ಬಿಜೆಪಿಯ ಕಿಚಾಯಿಸುವಿಕೆಗೆ ಮೋದಿಯ ವಿದೇಶಿ ಹಾರಾಟದ ದಾಖಲೆ ಬಿಚ್ಚಿಟ್ಟ ಕಾಂಗ್ರೆಸ್:ರಾಹುಲ್ ವಿಮಾನ ಯಾನದ ಬೆನ್ನಲ್ಲೇ ಶುರುವಾಯ್ತು ವಿದೇಶಿ ಪ್ರವಾಸದ ಮಹಾಯುದ್ಧ

ಸುಳ್ಳು ಹೇಳಿ ದಣಿದಿದ್ದೀರಾ ಎಂಬ ಬಿಜೆಪಿಯ ಕಿಚಾಯಿಸುವಿಕೆಗೆ ಮೋದಿಯ ವಿದೇಶಿ ಹಾರಾಟದ ದಾಖಲೆ ಬಿಚ್ಚಿಟ್ಟ ಕಾಂಗ್ರೆಸ್:ರಾಹುಲ್ ವಿಮಾನ ಯಾನದ ಬೆನ್ನಲ್ಲೇ ಶುರುವಾಯ್ತು ವಿದೇಶಿ ಪ್ರವಾಸದ ಮಹಾಯುದ್ಧ

by Shwetha
October 21, 2026
0

ನವದೆಹಲಿ: ಭಾರತೀಯ ರಾಜಕಾರಣದ ಅಂಗಳದಲ್ಲಿ ಈಗ ರಜೆಯ ರಾಜಕಾರಣ ಮತ್ತು ವಿದೇಶಿ ಪ್ರವಾಸಗಳ ಕುರಿತಾದ ವಾಗ್ವಾದ ತಾರಕಕ್ಕೇರಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ...

ಸ್ವಂತ ರಾಜಧಾನಿ ಇಲ್ಲದವರು ನಮ್ಮ ನಗರದ ಬಗ್ಗೆ ಮಾತನಾಡಬೇಡಿ:ಬೆಂಗಳೂರಿನ ಅಸ್ಮಿತೆಗೆ ಧಕ್ಕೆ ತರಲು ಸಂಚು ರೂಪಿಸಿದ ಆಂಧ್ರಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು- ನಮ್ಮ ನಗರದ ಮೇಲೆ ಕಣ್ಣಿಟ್ಟರೆ ಸುಮ್ಮನಿರಲ್ಲ ಎಂದು ಗುಡುಗಿದ ಕನ್ನಡಿಗರು

ಸ್ವಂತ ರಾಜಧಾನಿ ಇಲ್ಲದವರು ನಮ್ಮ ನಗರದ ಬಗ್ಗೆ ಮಾತನಾಡಬೇಡಿ:ಬೆಂಗಳೂರಿನ ಅಸ್ಮಿತೆಗೆ ಧಕ್ಕೆ ತರಲು ಸಂಚು ರೂಪಿಸಿದ ಆಂಧ್ರಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು- ನಮ್ಮ ನಗರದ ಮೇಲೆ ಕಣ್ಣಿಟ್ಟರೆ ಸುಮ್ಮನಿರಲ್ಲ ಎಂದು ಗುಡುಗಿದ ಕನ್ನಡಿಗರು

by Shwetha
October 21, 2026
0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಭಾಷಾ ಅಸ್ಮಿತೆ ಮತ್ತು ಕರ್ನಾಟಕದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡಲು ಯತ್ನಿಸಿದ ಹೊರರಾಜ್ಯದ ಮಂದಿಗೆ ಕನ್ನಡಿಗರು ರಣಚಂಡಿಯಂತೆ ಎದುರು ನಿಂತಿದ್ದಾರೆ. ಸಾಮಾಜಿಕ...

ದೀದಿ ಅಂಗಳದಿಂದ ಹೊರಬಂದಿದ್ದೇ ತಡ ಪಠಾಣ್ ಪಾಲಿಗೆ ಅದೃಷ್ಟ: ಯೂಸುಫ್ ಪಠಾಣ್ ಗೆ ಬಿಜೆಪಿ ಸರ್ಕಾರದಿಂದ ಕೋಟಿ ಕೋಟಿ ಮೌಲ್ಯದ ಭೂಮಿ ಗಿಫ್ಟ್

ದೀದಿ ಅಂಗಳದಿಂದ ಹೊರಬಂದಿದ್ದೇ ತಡ ಪಠಾಣ್ ಪಾಲಿಗೆ ಅದೃಷ್ಟ: ಯೂಸುಫ್ ಪಠಾಣ್ ಗೆ ಬಿಜೆಪಿ ಸರ್ಕಾರದಿಂದ ಕೋಟಿ ಕೋಟಿ ಮೌಲ್ಯದ ಭೂಮಿ ಗಿಫ್ಟ್

by Shwetha
October 21, 2026
0

ವಡೋದರ: ಭಾರತೀಯ ಕ್ರಿಕೆಟ್ ನ ದೈತ್ಯ ಆಟಗಾರ ಹಾಗೂ ಇತ್ತೀಚಿನವರೆಗೂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಯೂಸುಫ್ ಪಠಾಣ್ ಅವರ ಬದುಕಿನಲ್ಲಿ ದೊಡ್ಡ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram