kriti sanon
‘ಅದಿಪುರುಷ’ ನಿಗೆ ನಾಯಕಿ ಫೈನಲ್ : ಸೀತೆಯ ಅವತಾರದಲ್ಲಿ ಬಾಲಿವುಡ್ ನ ಖ್ಯಾತ ನಟಿ..!
ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾವಾಗಿರುವ ಆದಿಪುರುಷ್ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಳ್ತಾಯಿದ್ದು, ಬಾಲಿವುಡ್ ಖ್ಯಾತ ನಟ ಸೈಫ್ ಅಲಿಖಾನ್ ರಾವಣನಾಗಿ ಮಿಂಚಲಿದ್ದಾರೆ. ಆದ್ರೆ ಸಿನಿಮಾದಲ್ಲಿ ನಾಯಕಿ ಯಾರಾಗಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿತ್ತು. ಅಂದ್ಹಾಗೆ ಅನೇಕ ಸ್ಟಾರ್ ನಟಿಯರ ಹೆಸರು ಸಹ ಕೇಳಿಬಂದಿತ್ತು. ಅನುಷ್ಕಾ ಶೆಟ್ಟಿ, ಅನುಷ್ಕಾ ಶರ್ಮಾ, ಕೀರ್ತಿ ಸುರೇಶ್ ಸೇರಿದಂತೆ ಅನೇಕರ ಹೆಸರು ಕೇಳಿಬರುತ್ತಿತ್ತು. ಆದರೆ ಇದೀಗ ಎಲ್ಲಾ ಕುತೂಹಲಗಳಿಗೂ ತೆರೆಬಿದ್ದಿದೆ. ಚಿತ್ರದಲ್ಲಿ ಸೀತೆ ಪಾತ್ರಕ್ಕೆ ನಾಯಕಿ ಫಿಕ್ಸ್ ಆಗಿದ್ದಾರಂತೆ.
ಸುದೀಪ್ ಜೊತೆಗೆ ‘ಪ್ಯಾಂಟಮ್’ ನಲ್ಲಿ ಹೆಜ್ಜೆ ಹಾಕಲಿದ್ದಾರಂತೆ ಕತ್ರಿನಾ ಕೈಫ್..!
ಹೌದು.. ಆದಿಪುರುಷ್ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ನ ಖ್ಯಾತ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೀಗ ಆದಿಪುರುಷ್ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ಸನೂನ್ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಗೆ ಜೋಡಿಯಾಗಿ ಕೃತಿ ನಟಿಸುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕೃತಿ ಹಾಗೂ ಪ್ರಭಾಸ್ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರ ಮುಂದಿನ ವರ್ಷ ಅಂದ್ರೆ ಜನವರಿಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸಿನಿಮಾಗೆ ಓಂ ರಾವತ್ ಅವರು ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಮುಗಿದಿದೆ ಎನ್ನಲಾಗಿದೆ.
ಇನ್ನೂ ಪ್ರಭಾಸ್ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಮತ್ತೊಂದು ಹೈ ಬಜೆಟ್ ಸಿನಿಮಾವಾಗಿರುವ ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಬಣ್ಣ ಹಚ್ಚಿದ್ದಾರೆ. ಇದಾದ ನಂತರ ಪ್ರಭಾಸ್ ಆದಿಪುರುಷ್ ನಲ್ಲಿ ಬ್ಯುಸಿಯಾಗಲಿದ್ದಾರೆ. ಇದರ ಹೊರತಾಗಿ ಇನ್ನೂ ಹಲವು ಪ್ರಾಜೆಕ್ಟ್ ಗಳು ಪ್ರಬಾಸ್ ಕೈಯಲ್ಲಿವೆ. ಇತ್ತ ಬಾಲಿವುಡ್ ನ ಕ್ಯೂಟ್ ನಟಿ ಕೃತಿ ಸಹ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ ಕುಮಾರ್ ರಾವ್ ನಟನೆಯ ಹಮ್ ದೋ ಹಮಾರೆ ದೋ, ಅಕ್ಷಯ್ ಕುಮಾರ್ ಜೊತೆ ಬಚ್ಚನ್ ಪಾಂಡೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
‘ಪವರ್ ಆಫ್ ಯೂತ್’ ಪ್ರೋಮೋಗೆ ಪವರ್ ಸ್ಟಾರ್ ಫ್ಯಾನ್ಸ್ ಫಿದಾ..!
kriti sanon
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel