Ravi shankar
ಬರ್ತ್ ಡೇ ಸಂಭ್ರಮದಲ್ಲಿ ‘ಆರ್ಮುಗಂ’ : ಸೀರಿಯಲ್ ಸೆಟ್ ಚಂದ್ರಪ್ಪನ ಎಂಟ್ರಿ ಹೇಗಿದೆ ಗೊತ್ತಾ..!
ಸಕಲಕಲಾವಲ್ಲಭ ಸ್ಯಾಂಡಲ್ ವುಡ್ ನ ಆರ್ಮುಗಂ ರವಿ ಶಂಕರ್ ಅವರಿಗೆ ಇಂದು ಹುಟ್ಟುಹಹಬ್ಬದ ಸಂಭ್ರಮ. ಖಳನಟನಾಗಿ, ಹಾಸ್ಯಕಲಾವಿಧನಾಗಿ, ಪೋಷಕನಟನಾಗಿ, ಯಾವುದೇ ಪಾತ್ರದಲ್ಲೂ ನಟಿಸಿ ಅದಕ್ಕೆ ಹೊಂದುಕೊಳ್ಳುವ ಕಲಾ ನೈಪುಣ್ಯತೆ ರವಿ ಶಂಕರ್ ಅವರದ್ದು. ಅಷ್ಟೇ ಅಲ್ಲದೇ ವಾಯ್ಸ್ ಡಬ್ಬಿಂಗ್ ಹಾಗೂ ಗಾಯಕನಾಗಿ ರವಿಶಂಕರ್ ಗುರುಸಿಕೊಂಡಿದ್ದಾರೆ. ಇಂದು 54ನೇ ವತಂಸಕ್ಕೆ ಕಾಲಿಟ್ಟಿರುವ ನಟ ರವಿಶಂಕರ್ ಗೆ ಅಭಿಮಾನಿಗಳು, ಸಿನಿಮಾರಂಗದವರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.
‘ಅದಿಪುರುಷ’ ನಿಗೆ ನಾಯಕಿ ಫೈನಲ್ : ಸೀತೆಯ ಅವತಾರದಲ್ಲಿ ಬಾಲಿವುಡ್ ನ ಖ್ಯಾತ ನಟಿ..!
ಕೆಂಪೇಗೌಡ ಸಿನಿಮಾದ ಮೂಲಕ ಆರ್ಮುಗಂ ಆಗಿಯೇ ಪ್ರಸಿದ್ಧಿ ಪಡೆದ ರವಿಶಂಕರ್ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಇನ್ನೂ ವಿಶೇಷ ಅಂದ್ರೆ ಇಂದು ತಮ್ಮ ಹುಟ್ಟುಹಬ್ಬದ ದಿನವೇ ರವಿಶಂಕರ್ ಅವರು ಸೀರಿಯಲ್ ಸೆಟ್ ಚಂದ್ರಪ್ಪನಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಹೌದು, ರವಿಶಂಕರ್ ಹೊಸ ಸಿನಿಮಾವಾದ ‘ತಲ್ವಾರ್ ಪೇಟೆಯಲ್ಲಿ’ ಸೀರಿಯಲ್ ಸೆಟ್ ಚಂದ್ರಪ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚೇತಕ್ ಸ್ಕೂಟರ್ ಮೇಲೆ ಸೀರಿಯಲ್ ಸೆಟ್, ಮೈಕ್ ಸೆಟ್ ಹೊತ್ತುಕೊಂಡು ಹೋಗುತ್ತಿರುವ ರವಿಶಂಕರ್ ಲುಕ್ ಅವರ ಬರ್ತ್ ಡೇ ಪ್ರಯುಕ್ತ ರಿಲೀಸ್ ಆಗಿದೆ. ರವಿಶಂಕರ್ ಹೊಸ ಗೆಟಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸುದೀಪ್ ಜೊತೆಗೆ ‘ಪ್ಯಾಂಟಮ್’ ನಲ್ಲಿ ಹೆಜ್ಜೆ ಹಾಕಲಿದ್ದಾರಂತೆ ಕತ್ರಿನಾ ಕೈಫ್..!
ಅಂದ್ಹಾಗೆ ಕಂಚಿನ ಕಂಠದ ವಶಿಷ್ಠ ಸಿಂಹ ನಾಯಕನಾಗಿ ಕಾಣಿಸಿಕೊಮಡಿರುವ ‘ತಲ್ವಾರ್ ಪೇಟೆ’ ಸಿನಿಮಾದ ಚಿತ್ರೀಕರಣ ಭಾಗಶಃ ಕಂಪ್ಲೀಟ್ ಆಗಿದೆ. ಕೆ ಲಕ್ಷ್ಮಣ್ ಮತ್ತು ಶ್ರೀರಾಮ್ ಸಹೋದರರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರವಿ ಶಂಕರ್ ಹುಟ್ಟುಹಬ್ಬದ ಪ್ರಯುಕ್ತ ಸೀರಿಯಲ್ ಸೆಟ್ ಚಂದ್ರಪ್ಪನ ಲುಕ್ ರಿವೀಲ್ ಮಾಡಲಾಗಿದೆ.
‘ಪವರ್ ಆಫ್ ಯೂತ್’ ಪ್ರೋಮೋಗೆ ಪವರ್ ಸ್ಟಾರ್ ಫ್ಯಾನ್ಸ್ ಫಿದಾ..!
Ravi shankar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









