ಭಾರತದಲ್ಲಿ ಇನ್ನು ಮುಂದೆ ದ್ವಿಚಕ್ರ ವಾಹನಗಳಿಗೆ ಬಿಐಎಸ್-ಪ್ರಮಾಣೀಕೃತ ಹೆಲ್ಮೆಟ್ಗಳು ಮಾತ್ರ ಮಾರಾಟ BIS certified helmets
ಹೊಸದಿಲ್ಲಿ, ನವೆಂಬರ್29: ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಬಿಐಎಸ್-ಪ್ರಮಾಣೀಕೃತ ಹೆಲ್ಮೆಟ್ಗಳನ್ನು ಮಾತ್ರ ತಯಾರಿಸಲಾಗುವುದು ಮತ್ತು ಮಾರಾಟ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. BIS certified helmets

ಇನ್ನು ಮುಂದೆ, ಭಾರತದಲ್ಲಿ ದ್ವಿಚಕ್ರ ವಾಹನ ಮಾಲೀಕರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ದೃಢೀಕರಿಸಿದ ಹೆಲ್ಮೆಟ್ಗಳನ್ನು ಮಾತ್ರ ಧರಿಸಲಿದ್ದಾರೆ. ಏಕೆಂದರೆ ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ಗಳನ್ನು ಮಾತ್ರ ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ತಯಾರಿಸಿ ಮಾರಾಟ ಮಾಡಲಾಗುವುದು ಎಂದು ಸರ್ಕಾರ ಶುಕ್ರವಾರ ಹೇಳಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನೀಡಿದ ಹೇಳಿಕೆಯ ಪ್ರಕಾರ, ದೇಶದಲ್ಲಿ ಕಡಿಮೆ ಗುಣಮಟ್ಟದ ದ್ವಿಚಕ್ರ ವಾಹನ ಹೆಲ್ಮೆಟ್ಗಳ ಮಾರಾಟವನ್ನು ತಪ್ಪಿಸಲು ಈ ಕ್ರಮ ಸಹಾಯ ಮಾಡುತ್ತದೆ. ಇದು ರಸ್ತೆ ಅಪಘಾತದ ಸಂದರ್ಭದಲ್ಲಿ ಮಾರಣಾಂತಿಕ ಗಾಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅದು ಹೇಳಿದೆ.
ದ್ವಿಚಕ್ರ ವಾಹನ ಸವಾರರಿಗೆ ರಕ್ಷಣಾತ್ಮಕ ಹೆಲ್ಮೆಟ್ ಕಡ್ಡಾಯವಾಗಿದ್ದು ಬಿಐಎಸ್ ಪ್ರಮಾಣೀಕರಣ ಮತ್ತು ಗುಣಮಟ್ಟ ನಿಯಂತ್ರಣ ಆದೇಶದ ಪ್ರಕಟಣೆಯಡಿಯಲ್ಲಿ ಸೇರಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೇಳಿದೆ.
ಹುತಾತ್ಮ ಯೋಧನ ವಾಟ್ಸಾಪ್ ಚಾಟ್ ವೈರಲ್
ರಸ್ತೆ ಸುರಕ್ಷತೆ ಕುರಿತ ಸುಪ್ರೀಂ ಕೋರ್ಟ್ ಸಮಿತಿಯ ನಿರ್ದೇಶನಗಳನ್ನು ಅನುಸರಿಸಿ, ದೇಶದ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಭಾರತದಲ್ಲಿ ಹಗುರವಾದ ಹೆಲ್ಮೆಟ್ಗಳನ್ನು ಪರಿಗಣಿಸಲು ಮತ್ತು ನಾಗರಿಕರು ಹೆಲ್ಮೆಟ್ ಧರಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಸಮಿತಿಯನ್ನು ರಚಿಸಲಾಗಿತ್ತು.
ಈ ಸಮಿತಿಯು ಏಮ್ಸ್ ಮತ್ತು ಬಿಐಎಸ್ ನ ತಜ್ಞ ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರನ್ನು ಹೊಂದಿತ್ತು.
ಮಾರ್ಚ್ 2018 ರಲ್ಲಿ ಸಮಿತಿಯು ತನ್ನ ವರದಿಯಲ್ಲಿ ವಿವರವಾದ ವಿಶ್ಲೇಷಣೆಯ ನಂತರ ದೇಶದಲ್ಲಿ ಹಗುರವಾದ ಹೆಲ್ಮೆಟ್ಗಳನ್ನು ಶಿಫಾರಸು ಮಾಡಿತು ಮತ್ತು ಸಚಿವಾಲಯವು ವರದಿಯನ್ನು ಒಪ್ಪಿಕೊಂಡಿತು.
ಸಮಿತಿಯ ಶಿಫಾರಸುಗಳ ಪ್ರಕಾರ, ಬಿಐಎಸ್ ವಿಶೇಷಣಗಳನ್ನು ಪರಿಷ್ಕರಿಸಿದ್ದು, ಅದರ ಮೂಲಕ ಹಗುರವಾದ ಹೆಲ್ಮೆಟ್ಗಳನ್ನು ತಯಾರಿಸುವ ನಿರೀಕ್ಷೆಯಿದೆ.
ಭಾರತದಲ್ಲಿ ವಾರ್ಷಿಕವಾಗಿ ಸುಮಾರು 1.7 ಕೋಟಿ ದ್ವಿಚಕ್ರ ವಾಹನಗಳು ತಯಾರಾಗುತ್ತಿದೆ.

ಜಿನೀವಾ ಮೂಲದ ಜಾಗತಿಕ ರಸ್ತೆ ಸುರಕ್ಷತಾ ಸಂಸ್ಥೆಯಾದ ಇಂಟರ್ನ್ಯಾಷನಲ್ ರೋಡ್ ಫೆಡರೇಶನ್, ವಿಶ್ವದಾದ್ಯಂತ ಉತ್ತಮ ಮತ್ತು ಸುರಕ್ಷಿತ ರಸ್ತೆಗಳಿಗಾಗಿ ಕಾರ್ಯನಿರ್ವಹಿಸುತ್ತಿದೆ.
ದ್ವಿಚಕ್ರ ವಾಹನ ಸವಾರರಿಗೆ ಬಿಐಎಸ್ ಕಡ್ಡಾಯವಾಗಿರುವ ಹೆಲ್ಮೆಟ್ ತರುವ ರಸ್ತೆ ಸಾರಿಗೆ ಸಚಿವಾಲಯದ ಕ್ರಮವನ್ನು ಸ್ವಾಗತಿಸಿದೆ.
ಬಹುನಿರೀಕ್ಷಿತವಾಗಿದ್ದ ಈ ಕ್ರಮದ ಅಧಿಸೂಚನೆ ಜಾರಿಗೆ ಬಂದ ನಂತರ ಬಿಐಎಸ್ ಅಲ್ಲದ ಪ್ರಮಾಣೀಕೃತ ಹೆಲ್ಮೆಟ್ ಮಾರಾಟ ಅಪರಾಧವಾಗಿದೆ ಎಂದು ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ ಅಧ್ಯಕ್ಷ ಎಮೆರಿಟಸ್ ಕೆ ಕೆ ಕಪಿಲಾ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶೀತದ ಪರಿಣಾಮವನ್ನು ಕಡಿಮೆ ಮಾಡುವ ಅಶ್ವಗಂಧ ಚಹಾ ಸೇವಿಸುವ ಮೊದಲು ತಿಳಿದಿರಬೇಕಾದ ವಿಷಯಗಳು https://t.co/9fbsO5S2ww
— Saaksha TV (@SaakshaTv) November 28, 2020
ಆಯುಷ್ಮಾನ್ ಭವ – ಯೋಗ ಗುರು ಶ್ರೀ ನರೇಂದ್ರ ಕಾಮತ್ ಕೆ ಅವರಿಂದ ಸಾಕ್ಷಾಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಯೋಗಾಸನದ ಬಗ್ಗೆ ಮಾಹಿತಿ #yoga#Kannada#yogateacherhttps://t.co/pRB58lu6J7
— Saaksha TV (@SaakshaTv) November 25, 2020








