ಬಿಜೆಪಿ ಸಚಿವರ ಬಾಯಿಯಲ್ಲಿ ಇದೆಂಥಾ ಅ’ಧರ್ಮ’ದ ಮಾತು?
ಬೆಂಗಳೂರು : ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ನಾವು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲ್ಲ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಬೆಳಗಾವಿ ಲೋಕಸಭೆ ಕ್ಷೇತ್ರದ ಟಿಕೆಟ್ ಅನ್ನು ಕುರುಬರಿಗೋ,
ಲಿಂಗಾಯತರಿಗೋ, ಒಕ್ಕಲಿಗರಿಗೋ, ಬ್ರಾಹ್ಮಣರಿಗೋ ಕೊಡ್ತೇವೆ. ಆದರೆ ಮುಸ್ಲಿಮರಿಗೆ ಕೊಡಲ್ಲ ಎಂದು ಹೇಳಿಕೆ ನೀಡಿದ್ದರು. ನಾನು ಕೆಳಮಟ್ಟದ ರಾಜಕೀಯ ಮಾಡಲ್ಲ : ಹೆಚ್.ಡಿ.ಕುಮಾರಸ್ವಾಮಿ
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಎಸ್.ಆರ್ ಪಾಟೀಲ್, ಬಿಜೆಪಿ ಸಚಿವರ ಬಾಯಿಯಲ್ಲಿ ಇದೆಂಥಾ ಅ’ಧರ್ಮ’ದ ಮಾತು?.
ಬೆಳಗಾವಿ ಲೋಕಸಭೆ ಕ್ಷೇತ್ರದ ಟಿಕೆಟ್ ಅನ್ನು ಕುರುಬರಿಗೋ, ಲಿಂಗಾಯತರಿಗೋ, ಒಕ್ಕಲಿಗರಿಗೋ, ಬ್ರಾಹ್ಮಣರಿಗೋ ಕೊಡ್ತೇವೆ.
ಆದರೆ ಮುಸ್ಲಿಮರಿಗೆ ಕೊಡಲ್ಲ ಎಂದು ಈಶ್ವರಪ್ಪ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಅ’ಧರ್ಮ’ದ ಕಿಚ್ಚು ಹೊತ್ತಿಸಲು ಪ್ರಯತ್ನಿಸುತ್ತಿದ್ದಾರೆ. ಡಿಕೆಶಿ, ಹೆಚ್‍ಡಿಕೆ ಪಿತೂರಿ: ಮುಂದಿದೆ ಮಾರಿಹಬ್ಬ ಎಂದಿದ್ದೇಕೆ `ಸೈನಿಕ’..!
ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ನಾಲಿಗೆಯನ್ನು ಹರಿಬಿಟ್ಟಿರುವುದು ಎಷ್ಟು ಸರಿ?, ಇದೇನಾ ನಿಮ್ಮ ಪಕ್ಷದ ಶಿಸ್ತು?
ಜಾತಿ ರಾಜಕಾರಣದ ಬೆನ್ನಲ್ಲೇ ಸಚಿವ ಈಶ್ವರಪ್ಪನವರು ಧರ್ಮವನ್ನು ಎಳೆದು ತಂದಿರುವುದು ದುರಾದೃಷ್ಟಕರ ಸಂಗತಿ ಎಂದು ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










