ವಿಶ್ವ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಬರೆದ ರನ್ ರಾಕ್ಷಸ
ಸಿಡ್ನಿ : ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಆದ್ರೆ ಈ ಪಂದ್ಯದಲ್ಲಿ 89 ರನ್ ಗಳಿಸುವ ಮೂಲಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ರನ್ ಚರಿತ್ರೆ ಸೃಷ್ಠಿಸಿದ್ದಾರೆ.
ಹೌದು..! ಇಂದಿನ ಪಂದ್ಯದಲ್ಲಿ 11 ರನ್ ನಿಂದ ಶತಕ ವಂಚಿತನಾದ ವಿರಾಟ್, 89 ರನ್ ಗಳಿಸುವ ಮೂಲಕ ಅತಿ ವೇಗವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 22 ಸಾವಿರ ರನ್ ಕಂಪ್ಲೀಟ್ ಮಾಡಿದ ಸಾಧನೆ ಮಾಡಿದ್ದಾರೆ.
ಒಟ್ಟಾರೆ 418 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 22,011 ರನ್ ಗಳಿಸಿದ್ದಾರೆ. ಅಲ್ಲದೆ ವೇಗವಾಗಿ 22 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ.
ಇನ್ನು ಭಾರತದ ಪರ ವಿರಾಟ್ ಗೂ ಮುನ್ನ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್, ರಾಹುಲ್ ದ್ರಾವಿಡ್ 22 ಸಾವಿರ ರನ್ ಗಳಿಸಿರುವ ಸಾಧನೆ ಮಾಡಿದ್ದಾರೆ. ಹಾಗೇ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ವಿಶ್ವದ 8ನೇ ಬ್ಯಾಟ್ ಮನ್ ಕೂಡ ಆಗಿದ್ದಾರೆ.
ಅತಿ ಹೆಚ್ಚು ಅಂತರಾಷ್ಟ್ರೀಯ ರನ್ ಗಳಿಸಿದ ಆಟಗಾರರ ಪಟ್ಟಿ
ಸಚಿನ್ -37,357 ರನ್ 782 ಇನ್ನಿಂಗ್ಸ್
ಕುಮಾರ್ ಸಂಗಕಾರ- 28,016 ರನ್ 666 ಇನ್ನಿಂಗ್ಸ್
ಪಾಂಟಿಂಗ್ – 27,483 668 ಇನ್ನಿಂಗ್ಸ್
ಮಹೆಲಾ ಜಯವರ್ದನೆ – 25,957 ರನ್ 725 ಇನ್ನಿಂಗ್ಸ್
ಜಾಕ್ ಕಾಲೀಸ್ – 25,534 ರನ್ 617 ಇನ್ನಿಂಗ್ಸ್
ರಾಹುಲ್ ಡ್ರಾವಿಡ್ – 24,208 ರನ್ 605 ಇನ್ನಿಂಗ್ಸ್
ಲಾರಾ – 22,358 ರನ್ಸ್ 521 ಇನ್ನಿಂಗ್ಸ್
ವಿರಾಟ್ ಕೊಹ್ಲಿ – 22,011 ರನ್ 462 ಇನ್ನಿಂಗ್ಸ್
ಇದಲ್ಲದೆ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಮತ್ತೊಂದು ಸಾಧನೆ ಮಾಡಿದ್ದು, ಆಸ್ಟ್ರೇಲಿಯಾದ ವಿರುದ್ಧ 42 ಮ್ಯಾಚ್ ಗಳಲ್ಲಿ 2000 ರನ್ ಗಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










