ಹೆಮ್ಮಾರಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಇದೇ ಮಾರ್ಚ್ 17ರಂದು ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ಈತ ಮಾರ್ಚ್ 17ರಂದು ಮುಂಬೈನಲ್ಲಿ ರೈಲು ಹತ್ತಿದ್ದು, ಎಸ್ 3 ಕೋಚ್ ನ ಲೋಯರ್ ಬರ್ತ್ ನಲ್ಲಿ ಪಯಣ ಬೆಳೆಸಿ ಮಾರ್ಚ್ 18 ರಂದು ಭಟ್ಕಳಕ್ಕೆ ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ಆ ಬೋಗಿಯಲ್ಲಿದ್ದ ಇತರ ಪ್ರಯಾಣಿಕರಿಗೂ ಸಹ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ, ಅಂದು ಆ ರೈಲಿನ ಎಸ್ 3 ಬೋಗಿಯಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ತಪಾಸಣೆ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಅಲ್ಲದೆ 104, 080- 46848600, 080-66692000 ಸಹಾಯವಾಣಿ ಮೂಲಕ ಆರೋಗ್ಯ ಇಲಾಖೆಯನ್ನ ಕೂಡಲೇ ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಲು ಸರ್ಕಾರ ತಿಳಿಸಿದೆ.








