sudeep best wishes to Aindritha – diganth
‘ಡಿಂಪಲ್ ಕಪಲ್’ ದಿಗಂತ್-ಐಂದ್ರಿತಾಗೆ ಶುಭಕೋರಿದ ಕಿಚ್ಚ : ಕಾರಣ ಏನ್ ಗೊತ್ತಾ..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು, ಅಭಿಮಾನಿಗಳ ಟ್ವೀಟ್ ಗೆ ರಿಪ್ಲೈ ಮಾಡುವುದು ಇರಬಹುದು ಸಿನಿಮಾರಂಗದವರ ಬರ್ತ್ ಡೇ, ಮದುವೆಗೆ ವಿಶ್ ಮಾಡೋದಾಗಿರಬಹುದು, ಅಥವ ಇತರೇ ವಿಚಾರಗಳಿಗೆ ಸದಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕೊಪಟ್ಟೆಆಕ್ಟೀವ್ ಆಗಿರ್ತಾರೆ. ಇದೀಗ ಸುದೀಪ್ ಅವರು ನಟ ದಿಗಂತ್ ಹಾಗೂ ಐಂದ್ರಿತಾ ಜೋಡಿಗೆ ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ. ಅಷ್ಟಕ್ಕೂ ದಿಗಂತ್ ಹಾಗೂ ಐಂದ್ರಿತಾ ಅವರಿಗೆ ವಿಶ್ ಮಾಡೋದಕ್ಕೆ ಕಾರಣವೇನು..?
ಅಂದ್ಹಾಗೆ ಸುದೀಪ್ ಅವರು ಐಂದ್ರಿತಾ ಹಾಗೂ ದಿಗಂತ್ ಜೋಡಿಗೆ ವಿಶ್ ಮಾಡಿರುವುದಕ್ಕೆಕಾರಣ ಅವರ ಹೊಸ ಸಿನಿಮಾ.. ಹೌದು, ದಿಗಂತ್ ಮತ್ತು ಐಂದ್ರಿತಾ ಇಬ್ಬರು ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. 8 ವರ್ಷಗಳ ನಂತರ ತೆರೆಮೇಲೆ ಒಂದಾಗಿರುವ ದಿಗಂತ್ ಮತ್ತು ಐಂದ್ರಿತಾಗೆ ಸುದೀಪ್ ಬೆಸ್ಟ್ ವಿಶಸ್ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನ ‘ಮೋಹಕ ತಾರೆ’ಗೆ ಬರ್ತ್ ಡೇ ಸಂಭ್ರಮ : ಶುಭಕೋರಿದ ಕಿಚ್ಚ..!
ಅಂದಹಾಗೆ ದಿಗಂತ್ ದಂಪತಿ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಹೊಸ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಪ್ರಯುಕ್ತ ದಿಗಂತ್ ಮತ್ತು ಐಂದ್ರಿತಾ ಇಬ್ಬರು ಇರುವ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ಅನ್ನು ಐಂದ್ರಿತಾ ಶೇರ್ ಮಾಡಿ, ‘ಮಲೆನಾಡಿನ ಮೋಹಕ ತಾಣದಲ್ಲಿ ಚಿತ್ರೀಕರಣ ನಡೆಯುತ್ತಿದೆ. 8 ವರ್ಷದ ಬಳಿಕ ತೆರೆ ಹಿಂದಿನ ನನ್ನ ಪ್ರೀತಿ ದಿಗಂತ್ ಜೊತೆ ಮತ್ತೆ ನಟಿಸುತ್ತಿದ್ದೀನಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ‘ ಇಬ್ಬರು ಮತ್ತೆ ಒಟ್ಟಿಗೆ ನಟಿಸುತ್ತಿರುವುದು ಸೂಪರ್. ಒಳ್ಳೆಯದಾಗಲಿ ದಿಗಂತ್ ಮತ್ತು ಐಂದ್ರಿತಾ’ ಎಂದು ಹೇಳಿದ್ದಾರೆ.
ಅಂದ್ಹಾಗೆ ಮಲೆನಾಡಿನ ಸುಂದರ ಪ್ರದೇಶಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿ ರಂಜಿನಿ ರಾಘವನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿನಾಯಕ ಕೊಡ್ಸರ ಆಕ್ಷನ್ ಕಟ್ ಹೇಳ್ತಾಯಿದ್ದಾರೆ. ವಿಶೇಷ ಅಂದ್ರೆ ವಿನಾಯಕ ಕೊಡ್ಸರ ಅವರ ಚೊಚ್ಚಲ ಸ್ಯಾಂಡಲ್ ವುಡ್ ಸಿನಿಮಾ ಇದಾಗಿದೆ. ಈ ಹಿಂದೆ 2 ಕಿರು ಚಿತ್ರಗಳನ್ನ ನಿರ್ದೇಶಿಸಿರುವ ಕೊಡ್ಸರ ಇ0ದೀಗ ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.
sudeep best wishes to Aindritha – diganth
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








