urmila mathondkar
ಊರ್ಮಿಳಾ ಶಿವಸೇನೆ ಸೇರೋದು ಪಕ್ಕಾ : ಎಂಎಲ್ಸಿ ನಾಮನಿರ್ದೇಶನ ಪಟ್ಟಿಯಲ್ಲಿ ಊರ್ಮಿಳಾ ಹೆಸರು..!
ಮುಂಬೈ: ಬಾಲಿವುಡ್ ನಟಿ, ಮಾಜಿ ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ಸದ್ಯ ಶಿವಸೇನೆ ಸೇರಲಿದ್ದಾರೆ ಎಂಬ ಊಹಾಪೋಹಗಳು ಕೆಲ ದಿನಗಳಿಂದ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ. ಅಂದ್ಹಾಗೆ ಊರ್ಮಿಳಾ ಶಿವಸೇನಾ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಪಕ್ಕಾ ಆಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಊರ್ಮಿಳಾ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ಮಾಹಿತಿ ಹೊರಹಾಕಿದ್ದಾರೆ.
ಮತ್ತೊಂದು ತೆಲುಗು ಸಿನಿಮಾದಲ್ಲಿ ವಿಲ್ಲನ್ ಆಗಲಿದ್ದಾರೆ ಡಾಲಿ..!
ಹೌದು ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಕೋಟಾದಲ್ಲಿ ನಾಮನಿರ್ದೇಶನ ಸದಸ್ಯತ್ವದ ಕೋಟಾದಲ್ಲಿ ಊರ್ಮಿಳಾ ಹೆಸರನ್ನು ಸರ್ಕಾರ ರವಾನಿಸಿದೆ. ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಅವರು ಒಟ್ಟು 12 ಸದಸ್ಯರ ಪಟ್ಟಿಯನ್ನು ಅಂಗೀಕರಿಸಬೇಕಾಗಿದೆ. ಹನ್ನೊಂದು ಸದಸ್ಯರ ಪಟ್ಟಿಯನ್ನು ಮಹಾ ವಿಕಾಸ್ ಅಘಾಡಿ ಇತ್ತೀಚೆಗಷ್ಟೇ ರವಾನಿಸಿತ್ತು. ಈ ಪಟ್ಟಿಯಲ್ಲಿ ಊರ್ಮಿಳಾ ಹೆಸರಿದೆ. ಊರ್ಮಿಳಾ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸೋಲು ಅನುಭವಿಸಿದ್ದರು. ಬಳಿಕ ಮುಂಬೈ ಕಾಂಗ್ರೆಸ್ ಘಟಕದ ಕಾರ್ಯವೈಖರಿಗೆ ಅಸಮಾಧಾನಗೊಂಡು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದರು. ಇತ್ತೀಚೆಗೆ ಶಿವಸೇನೆ ಸೇರಲಿದ್ದಾರೆ ಎಂಬ ಊಹಾಪೋಹಗಳು ಸಾಕಷ್ಟು ಚರ್ಚೆಯಲ್ಲಿದ್ದವು. ಇದೀಗ ಅಧಿಕೃತವಾಗಿ ಊರ್ಮಿಳಾ ಶಿವಸೇನೆ ಸೇರುತ್ತಿರುವ ಸುದ್ದಿ ಪಕ್ಕಾ ಆಗಿದ್ದು, ವದಂತಿಗಳಿಗೆ ತೆರೆಬಿದ್ದಿದೆ.
urmila mathondkar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








