ಬಾಗಲಕೋಟೆ: ಮಹಾಲಿಂಗಪುರದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವೇಳೆ ನಡೆದಿದ್ದ ತಳ್ಳಾಟ-ನೂಕಾಟ ಪ್ರಕರಣ ಬಿಜೆಪಿ ಶಾಸಕ ಸಿದ್ದುಸವದಿ ವಿರುದ್ಧ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಆದರೆ, ಅಂದು ತಳ್ಳಾಟ-ನೂಕಾಟ ವೇಳೆ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತವಾಗಿದ್ದು, ಭೂಮಿ ನೋಡುವ ಮುನ್ನವೇ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ.
ನವೆಂಬರ್ 9ರಂದು ಪುರಸಭೆ ಕಚೇರಿ ಪ್ರವೇಶಿಸುತ್ತಿದ್ದ ಚಾಂದಿನಿ ನಾಯಕ್ ಸೇರಿದಂತೆ ಮಹಿಳಾ ಸದಸ್ಯೆಯರನ್ನು ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ತಳ್ಳಾಟ ನಡೆಸಿದ್ದರು. ಈ ವೇಳೆ ಚಾಂದಿನಿ ನಾಯಕ್ ಅವರು ಮೆಟ್ಟಿಲಿನಿಂದ ಆಯತಪ್ಪಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಇದೀಗ ಚಾಂದಿನಿಗೆ ಗರ್ಭಪಾತವಾಗಿದೆ.
ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವೇಳೆ ಬಿಜೆಪಿ ಸದಸ್ಯೆಯಾಗಿದ್ದ ಚಾಂದಿನಿ ನಾಯಕ್ ಕಾಂಗ್ರೆಸ್ಗೆ ಬೆಂಬಲ ನೀಡಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಚಾಂದಿನಿ ನಾಯಕ್ ಪುರಸಭೆಗೆ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿದ್ದರು.
ದಿದ್ದಾರೆ. ಆದರೂ, ಚಾಂದಿನಿ ಅವರು ಪುರಸಭೆ ಪ್ರವೇಶಕ್ಕೆ ಮುಂದಾದಾಗ ಸಿದ್ದು ಸವದಿ ಸೇರಿದಂತೆ ಹಲವರು ಎಳೆದಾಡಿದ್ದರು. ನೂಕಾಟ ತಳ್ಳಾಟ ನಡೆದು ಚಾಂದಿನಿ ನಾಯಕ್ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು.
3 ತಿಂಗಳ ಗರ್ಭಿಣಿಯಾಗಿದ್ದ ಚಾಂದಿನಿ
ನವೆಂಬರ್ 9ರಂದು ನಡೆದಿದ್ದ ನೂಕಾಟ ವೇಳೆ ಚಾಂದಿನಿ ನಾಯಕ್ 3 ತಿಂಗಳ ಗರ್ಭಿಣಿಯಾಗಿದ್ದರು. ಘಟನೆಯಲ್ಲಿ ಹೊಟ್ಟೆಗೆ ಪೆಟ್ಟುಬಿದ್ದ ಕಾರಣ ಮಗುವಿನ ಬೆಳವಣಿಗೆ ಕುಂಠಿತವಾಗಿತ್ತು. ಈ ಹಿನ್ನೆಲೆಯಲ್ಲಿ ಚಾಂದಿನಿ ಮಹಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸಿಕೊಳ್ಳುವಂತಾಯಿತು ಎಂದು ಪತಿ ನಾಗೇಶ್ ನಾಯಕ್ ಆರೋಪಿಸಿದ್ದಾರೆ.
ಗರ್ಭಪಾತ ಕೊಲೆಗೆ ಸಮಾನ; ಉಮಾಶ್ರೀ ಆರೋಪ
ಮಹಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ಗೆ ತಳ್ಳಾಟದ ಪರಿಣಾಮ ಗರ್ಭಪಾತವಾಗಿದೆ. ಯಡಿಯೂರಪ್ಪ ಅವರ ಕಿವಿ, ಕಣ್ಣೂ, ಬಾಯಿಯೂ ಇಲ್ಲದಂತಾಗಿದೆ. ಗರ್ಭಪಾತ ಆಗಿರೋದು ಕೊಲೆಗೆ ಸಮಾನವಾಗಿದೆ. ಆದರೆ ಸರ್ಕಾರ ಮಾತ್ರ ಏನು ಕ್ರಮ ಕೈ ಗೊಳ್ಳುತ್ತಿಲ್ಲ. ಕೂಡಲೇ ಶಾಸಕರನ್ನು ಸರ್ಕಾರ ಪಕ್ಷದಿಂದ ಅಮಾನತು ಮಾಡಬೇಕು, ಪೊಲೀಸರು ಸಿದ್ದು ಸವದಿ ಅವರನ್ನು ಬಂಧಿಸಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಆಗ್ರಹಿಸಿದ್ದಾರೆ.
ಅಬಾರ್ಷನ್ ಸುಳ್ಳು; ಸಿದ್ದು ಸವದಿ ಸ್ಪಷ್ಟನೆ
ತಳ್ಳಾಟದ ವೇಳೆ ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತವಾಗಿದೆ ಎಂಬುದು ಸುಳ್ಳು. ನಮಗೆ ಬಂದ ಮಾಹಿತಿ ಪ್ರಕಾರ 6 ವರ್ಷದ ಹಿಂದೆ ಆಕೆಗೆ ಆಪರೇಷನ್ ಆಗಿದೆ. ಈ ಹಿಂದೆಯೇ ಆಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆದರೆ ಸತ್ಯಾಸತ್ಯತೆ ಹೊರಬರಬೇಕು ಎಂದು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಸ್ಪಷ್ಟನೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel