ಕ್ರಿಕೆಟ್ ಬೆಟ್ಟಿಂಗ್‌ನಿಂದಾದ ಸಾಲ ತೀರಿಸಲು ತಾಯಿ ಮತ್ತು ಸಹೋದರಿಯನ್ನು ಹತ್ಯೆಗೈದ ಎಂಟೆಕ್ ವಿದ್ಯಾರ್ಥಿ youngster cricket betting
ಹೈದರಾಬಾದ್, ಡಿಸೆಂಬರ್01: ಕ್ರಿಕೆಟ್ ಬೆಟ್ಟಿಂಗ್‌ನಿಂದ ಉಂಟಾದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಯುವಕನೊಬ್ಬ, ತಾಯಿ ಮತ್ತು ಸಹೋದರಿಯನ್ನು ಕೊಂದ ಘಟನೆ ನಡೆದಿದೆ. youngster cricket betting

ಎಂಟೆಕ್ ಅಧ್ಯಯನ ಮಾಡುತ್ತಿದ್ದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಲ್ಲಿ ಸಾಯಿನಾಥ್ ರೆಡ್ಡಿ ಎಂಬ ಆರೋಪಿ ತನ್ನ ಸಹೋದರಿ ಪಾಲಿ ಅನುಜಾ ರೆಡ್ಡಿ (22) ಮತ್ತು ತಾಯಿ ಪಾಲಿ ಸುನಿತಾ (44) ಅವರ ಆಹಾರದಲ್ಲಿ ಕೀಟನಾಶಕವನ್ನು ಬೆರೆಸಿದ್ದಾನೆ. ವಿಷ ಆಹಾರ ಸೇವಿಸಿ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟದ್ದಾರೆ.
ಅವರಿಬ್ಬರಿಗೂ ಆಹಾರ ವಿಷಮಯವಾಯಿತು ಎಂದು ಆತ ಸಂಬಂಧಿಕರಿಗೆ ತಿಳಿಸಿದ್ದು, ಆತನ ವರ್ತನೆಯಿಂದ ಸಂಶಯಕ್ಕೆ ಒಳಪಟ್ಟ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಇದನ್ನು ಅನುಸರಿಸಿ ಪೊಲೀಸರು ಆತನನ್ನು ಪ್ರಶ್ನಿಸಿದ್ದು, ಆತ ಇಬ್ಬರನ್ನೂ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ
ಪೊಲೀಸರು ಸೋಮವಾರ ಸಾಯಿನಾಥ್ ರೆಡ್ಡಿಯನ್ನು ಬಂಧಿಸಿ ನ್ಯಾಯಾಂಗ ರಿಮಾಂಡ್‌ಗೆ ಕಳುಹಿಸಿದ್ದಾರೆ ಎಂದು ಡಿಸಿಪಿ ಬಾಲನಗರ ಪಿ.ವಿ. ಪದ್ಮಜಾ ತಿಳಿಸಿದ್ದಾರೆ
ಪೊಲೀಸರ ಪ್ರಕಾರ, ಸಾಯಿನಾಥ್ ತಂದೆ ಪ್ರಭಾಕರ್ ರೆಡ್ಡಿ ಒಂದೆರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಸಾಯಿನಾಥ್ ನಗರದ ಹೆಸರಾಂತ ಕಾಲೇಜಿನಲ್ಲಿ ಎಂ ಟೆಕ್ ಓದುತ್ತಿದ್ದರೆ, ತಾಯಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಸಹೋದರಿ ಸಹ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ದೀರ್ಘಕಾಲದಿಂದ, ಸಾಯಿನಾಥ್ ಕ್ರಿಕೆಟ್ ಬೆಟ್ಟಿಂಗ್ ವ್ಯಸನಿಯಾಗಿದ್ದ. ಆರಂಭದಲ್ಲಿ ಆತ ತನ್ನ ಸ್ವಂತ ಹಣವನ್ನು ಬೆಟ್ಟಿಂಗ್‌ಗಾಗಿ ಖರ್ಚು ಮಾಡುತ್ತಿದ್ದ. ತಂದೆಯ ಮರಣದ ನಂತರ ಪಡೆದ ವಿಮಾ ಮೊತ್ತವು ತಾಯಿಯ ಬ್ಯಾಂಕ್ ಖಾತೆಯಲ್ಲಿದೆ ಎಂದು ತಿಳಿದ ಆತ ಆ ಮೊತ್ತವನ್ನು ಪಡೆದು ಮತ್ತು ಅದನ್ನು ಬೆಟ್ಟಿಂಗ್ ಗಾಗಿ ಖರ್ಚು ಮಾಡಿದ್ದ. ಅವನು ತನ್ನ ತಾಯಿಯ ಆಭರಣಗಳನ್ನು ಸಹ ಕದ್ದ ಮತ್ತು ಆ ಹಣವನ್ನು ಬೆಟ್ಟಿಂಗ್‌ಗೆ ಖರ್ಚು ಮಾಡಿದ.
ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ ವ್ಯಕ್ತಿ ಶವಗಾರದಲ್ಲಿ ಎಚ್ಚರಗೊಂಡು ಕಿರುಚಿದಾಗ
ಮೊಬೈಲ್ ಆ್ಯಪ್‌ಗಳ ಮೂಲಕ ಸಾಲವನ್ನು ಪಡೆದ ಆತ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡಿದ್ದನು. ಇದಲ್ಲದೆ, ಆತ ಕ್ರಿಕೆಟ್ ಬೆಟ್ಟಿಂಗ್ ಮತ್ತು ಐಷಾರಾಮಿಗಳಿಗಾಗಿ ಖರ್ಚು ಮಾಡಲು ಹಲವಾರು ವ್ಯಕ್ತಿಗಳಿಂದ ಹಣವನ್ನು ಸಾಲ ಪಡೆದಿದ್ದ.
ಒಟ್ಟಾರೆಯಾಗಿ, ಆತ ಕ್ರಿಕೆಟ್ ಬೆಟ್ಟಿಂಗ್ ಗಾಗಿ ಸುಮಾರು 25 ಲಕ್ಷ ರೂಗಳನ್ನು ಖರ್ಚು ಮಾಡಿದ್ದನು. ಇದರಿಂದಾಗಿ ಆತ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ. ಇದಲ್ಲದೆ, ಜನರು ಸಾಲವನ್ನು ಹಿಂದಿರುಗಿಸುವಂತೆ ಆತನಿಗೆ ಒತ್ತಡ ಹೇರುತ್ತಿದ್ದರು.
ಈ ಒತ್ತಡವನ್ನು ಸಹಿಸಲಾಗದೆ, ಅವನು ತನ್ನ ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಲು ನಿರ್ಧರಿಸಿದನು. ಇದರಿಂದಾಗಿ ಅವನು ಕುಟುಂಬದ ಆಸ್ತಿಯ ಏಕೈಕ ಮಾಲೀಕನಾಗುತ್ತಾನೆ. ಬಳಿಕ ಅದನ್ನು ವಿಲೇವಾರಿ ಮಾಡಿ, ಸಾಲಗಳನ್ನು ತೀರಿಸಬಹುದು ಮತ್ತು ಸಂತೋಷದ ಜೀವನವನ್ನು ನಡೆಸಬಹುದು ಎಂದು ಯೋಜನೆಯನ್ನು ಹಾಕಿಕೊಂಡನು.
ಯೋಜನೆಯ ಪ್ರಕಾರ, ಆತ ಮೆಕ್ಕೆಜೋಳಕ್ಕೆ ಬಳಸುವ ಕೀಟನಾಶಕವನ್ನು ಖರೀದಿಸಿ, ನವೆಂಬರ್ 23 ರ ರಾತ್ರಿ ಅದನ್ನು ಆಹಾರದಲ್ಲಿ ಬೆರೆಸಿ ಮನೆಯಿಂದ ಹೊರಟುಹೋದನು. ತನಗೆ ರಾತ್ರಿ ಪಾಳಿಯಲ್ಲಿ ಕೆಲಸವಿರುವುದಾಗಿ ತಾಯಿ ಮತ್ತು ಸಹೋದರಿಗೆ ತಿಳಿಸಿದ.

ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಕೆಲಸವನ್ನು ಮುಂದುವರಿಸಿದ ಆತ ರಾತ್ರಿಯ ನಂತರ, ತನ್ನ ಮೊಬೈಲ್ ಅನ್ನು ಸ್ವಿಚ್ ಆನ್ ಮಾಡಿದ್ದಾನೆ. ಆತನ ತಾಯಿ ತಾನು ಮತ್ತು ಸಹೋದರಿ ಇಬ್ಬರೂ ಅನಾರೋಗ್ಯಕ್ಕೆ ಒಳಗಾಗಿರುವುದಾಗಿ ಮತ್ತು ಕೂಡಲೇ ಬಂದು ಆಸ್ಪತ್ರೆಗೆ ಕರೆದೊಯ್ಯುವಂತೆ SMS ಗಳನ್ನು ಮಾಡಿದ್ದರು.
ನಂತರ ಮನೆಗೆ ತೆರಳಿದ ಆತ ಅವರನ್ನು ಖಾಸಗಿ ಆಸ್ಪತ್ರೆಗೆ ಮತ್ತು ನಂತರ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾನೆ. ಅಲ್ಲಿ ಮರುದಿನ ಅನುಜಾ ನಿಧನರಾದರೆ, ಎರಡು ದಿನಗಳ ಹಿಂದೆ ಸುನೀತಾ ನಿಧನರಾದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1333440814983254022?s=19
https://twitter.com/SaakshaTv/status/1333441174862917633?s=19








