ಸ್ಟಾರ್ ಡೈರೆಕ್ಟರ್ ಪ್ರೇಮ್ ಅಂದ್ರೆ ಸ್ಯಾಂಡಲ್ವುಡ್ ಕ್ರೇಜಿ ಕ್ವೀನ್ ರಕ್ಷಿತಾಗೆ ಡೆನ್ಷನ್ ಅಂತೆ. ಹೌದು, ಇದು ಯಾರೋ ಹೇಳಿದ್ದಲ್ಲ ಸ್ವತಃ ತನ್ನ ಪತಿ ಬಗ್ಗೆ ರಕ್ಷಿತಾ ಹೇಳಿರೋ ಮಾತು. ಅಷ್ಟಕ್ಕೂ ಹಾಗೇ ತನ್ನ ಪತಿ ಮೇಲೆ ಆರೋಪ ಮಾಡಲು ಕಾರಣ ಏನು ಅಂತೀರಾ. ಇದಕ್ಕೆ ಉತ್ತರ ಇಲ್ಲಿದೆ.
ಕರಿಯ ಪ್ರೇಮ್.. ಹೇಳಿಕೇಳಿ ಚಂದನವನದ ಸ್ಟಾರ್ ಡೈರೆಕ್ಟರ್.. ವಿಭಿನ್ನ ಚಿತ್ರಗಳನ್ನ ನಿರ್ದೇಶನ ಮಾಡೋ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಆದ ಹೆಜ್ಜೆಗುರುತನ್ನ ಇರಿಸಿದ್ದಾರೆ. ಪ್ರೇಮ್ ನಿರ್ದೇಶನದ ಚಿತ್ರ ಅಂದ್ರೆ ಅಲ್ಲಿ ಅಬ್ಬರದ ಪ್ರಚಾರ ಇರಲೇಬೇಕು. ಅಂತಹ ಅಬ್ಬರದ ಪ್ರಚಾರಕ್ಕೆ ಪ್ರೇಮ್ ನಿರ್ದೇಶನ ಮತ್ತೊಂದು ಸಿನಿಮಾ ಸೇರ್ಪಡೆಗೊಳ್ಳುತ್ತಿದೆ. ಅದೇ ಏಕ್ ಲವ್ ಯಾ..!.
ಚಿತ್ರದಲ್ಲಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಅಭಿನಯದ ಏಕ್..ಲವ್..ಯಾ..! ಚಿತ್ರದ ಮೋಷನ್ ಪೋಸ್ಟರ್ ಇದೇ ಫೆಬ್ರವರಿ 8 ಕ್ಕೆ ಚಿತ್ರತಂಡ ರಿಲೀಸ್ ಮಾಡ್ತಿದೆ. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ರಕ್ಷಿತಾ.. ನನಗೂ ತಿಳಿಯದಂತೆ ಪ್ರೇಮ್ ಚಿತ್ರದ ಪೋಸ್ಟರ್ ಅನ್ನ ರಿಲೀಸ್ ಮಾಡುತ್ತಿರುವುದು ಕುತೂಹಲ ಮೂಡಿಸಿದೆ ಎಂದಿದ್ದಾರೆ. ಇನ್ನ, ಪ್ರೇಮ್ ಅಂದ್ರೇನೆ ಒಂದು ದೊಡ್ಡ ಟೆನ್ಷನ್, ಒಂದು ದೊಡ್ಡ ಕುತೂಹಲ ಎಂದು ಹೇಳಿರುವ ರಕ್ಷಿತಾ, ಈ ಸಲ ಪ್ರೇಕ್ಷಕರನ್ನ ಕಾಯಿಸದೇ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರದಲ್ಲಿ ಎರಡು ಸೂಪರ್ ಸಪ್ರ್ರೈಸ್ ಇದೆ, ಇದು ನನಗೂ ದೊಡ್ಡ ಸಪ್ರ್ರೈಸ್ ಎಂದು ಸುಂಟರಗಾಳಿ ರಕ್ಷಿತಾ ಚಿತ್ರದ ಸಪ್ರ್ರೈಸ್ ಅನ್ನ ರಿವೀಲ್ ಮಾಡಿದ್ದಾರೆ. ಇದೇ ಫೆಬ್ರವರಿ 8 ರ ಬೆಳಗ್ಗೆ 10 ಗಂಟೆಗೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದ್ದು. ತುಂಬಾ ಕ್ಯೂರಿಯಾಸಿಟಿ ಮೂಡಿಸಿದೆ ಎಂದು ಹೇಳಿದ್ದಾರೆ.
ಇನ್ನ, ಚಿತ್ರಕ್ಕೆ ರಕ್ಷಿತಾ ಬಂಡವಾಳ ಹೂಡಿದ್ದಾರೆ. ಇನ್ನ, ಬಾಮೈದನ ಚಿತ್ರಕ್ಕೆ ಪ್ರೇಮ್ ಆಕ್ಷ್ಯನ್ ಕಟ್ ಹೇಳಿದ್ದಾರೆ. ಚಿತ್ರ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿರೋದು ಚಿತ್ರದ ಹಾಡುಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ರಾಣಾಗೆ ಕೊಡಗಿನ ಹುಡ್ಗಿ ರೀಷ್ಮಾ ನಾಣಯ್ಯ ಹಾಗೂ ಡಿಂಪಲ್ ಕ್ವೀನ್ ರಚಿತಾರಾಮ್ ನಾಯಕಿಯರಾಗಿ ಅಭಿನಯಸಿದ್ದಾರೆ. ಚಿತ್ರದಲ್ಲಿ ಶಶಿಕುಮಾರ್, ಚರಣ್ ರಾಜ್ ಹಾಗೂ ಕಾಮಿಡಿಕಿಲಾಡಿಗಳು ಖ್ಯಾತಿಯ ಸೂರಜ್ ಮತ್ತು ಹಿತೇಶ್ ಅಭಿನಯಿಸಿದ್ದಾರೆ. ಇನ್ನ, ಚಿತ್ರದ ಟೀಸರ್ ಅನ್ನ ಪ್ರೇಮಿಗಳ ದಿನದಂದು ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.