ಸರ್ಕಾರ ನಮ್ ಜೊತೆ ನಿಲ್ಲಲಿಲ್ಲ : ಹೆಚ್.ವಿಶ್ವನಾಥ್ ತೀವ್ರ ಅಸಮಾಧಾನ
ಬೆಂಗಳೂರು : ನಮ್ಮಿಂದಲೇ ಈ ಸರ್ಕಾರ ಬಂದ್ರೂ ನಮ್ಮ ಜೊತೆ ನಿಲ್ಲಲಿಲ್ಲ. ಕಾನೂನಿನ ವಿಚಾರದಲ್ಲಿ ಯಾರೂ ಸಹಾಯ ಮಾಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ಹೊರ ಹಾಕಿದ್ದಾರೆ.
ನಿನ್ನೆ ಹೈ ಕೋರ್ಟ್ ಸಚಿವರಾಗಲು ಹೆಚ್ ವಿಶ್ವನಾಥ್ ಅರ್ಹರಲ್ಲ ಎಂದು ತೀರ್ಪು ನೀಡಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ನಮ್ಮಿಂದಲೇ ಈ ಸರ್ಕಾರ ಬಂದಿದೆ.
ಆದ್ರೆ ಯಾರು ನಮ್ಮ ಜೊತೆ ನಿಲ್ಲಲಿಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ಅಭ್ಯರ್ಥಿಗಳ ಪಟ್ಟಿಯಿಂದ ನನ್ನ ಹೆಸರು ತೆಗೆದರು. ನನ್ನ ಅನುಭವ ಬಳಸಿಕೊಳ್ಳಬಹುದಿತ್ತು.
ಹೆಚ್.ವಿಶ್ವನಾಥ್ ಗೆ ನ್ಯಾಯ ದೇವತೆ ಶಿಕ್ಷೆ
ಆದರೆ ಕಡೆಗಣಿಸಿದರು, ಎಲ್ಲವನ್ನೂ ನಾನು ಎದುರಿಸುತ್ತೇನೆ. ನನಗೂ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದ್ದರೆ ಮಂತ್ರಿ ಆಗುತ್ತಿದ್ದೆ.ಪರಿಷತ್ ಚುನಾವಣೆ ವೇಳೆ ನನ್ನ ಹೆಸರು ಯಾಕೆ ತೆಗೆದರು ಅಂತ ಗೊತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಜೂನ್ ನಲ್ಲಿ ಬಿಜೆಪಿ ಕೋರ್ ಕಮಿಟಿಗೆ ಪರಿಷತ್ ಗೆ ನನ್ನ ಹೆಸರೂ ಸೇರಿಸಿ ನಾಲ್ವರ ಹೆಸರು ಕಳುಹಿಸಲಾಗಿತ್ತು. ಅಲ್ಲಿಂದ ಪಟ್ಟಿ ಬರುವಾಗ ನನ್ನ ಹೆಸರು ಇರಲಿಲ್ಲ. ದೆಹಲಿಯಲ್ಲಿ ನನ್ನ ಹೆಸರು ತೆಗೆಸಿದ್ದು ಯಾಕೆ ಎಂದು ಬಿಜೆಪಿ ನಾಯಕರಲ್ಲಿ ಕೇಳಿದೆ.
ನಿಮ್ಮನ್ನು ನಾಮನಿರ್ದೇಶನ ಮಾಡುತ್ತೇವೆ. ಇವತ್ತು ಕೂಡ ಸಿಎಂ ಜೊತೆ ಮಾತನಾಡುತ್ತೇನೆ. ನನ್ನ ಬಗ್ಗೆ ಕಾಳಜಿ ತೋರಿ ಮಾತನಾಡಿದವರಿಗೆ ಧನ್ಯವಾದಗಳು.
ನನಗೆ ತೀರ್ಪಿನ ಪ್ರತಿ ಸಿಕ್ಕ ಮೇಲೆ ವಕೀಲರ ಜೊತೆ ಚರ್ಚೆ ಮಾಡುತ್ತೇನೆ. ಬಳಿಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಮಹಲಿಂಗಪುರ ಪುರಸಭೆ ತಳ್ಳಾಟ ಪ್ರಕರಣ: ಸದಸ್ಯೆ ಹೊಟ್ಟೆಯಲ್ಲೇ ಪ್ರಾಣಬಿಟ್ಟಿದೆ ಮಗು..!
ನಿನ್ನೆ ಹೈಕೋರ್ಟ್ ನಲ್ಲಿ ಸಚಿವ ಸ್ಥಾನದ ಅನರ್ಹತೆ ಬಗ್ಗೆ ತೀರ್ಪು ಬಂದಿದೆ. ನೆಲದ ಕಾನೂನನ್ನು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ ಎಂದ ಹೆಚ್ ವಿಶ್ವನಾಥ್, ತೀರ್ಪನ್ನು ಗೌರವದಿಂದ ಕಾಣ್ತೇನೆ.
ಮುಂದೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









