ಇಂದಿನಿಂದ ಸೆ.14ರವರೆಗೆ ವಿಧಾನಮಂಡಲ ಅಧಿವೇಶನ ಮೊದಲೇ ದಿನವೇ ಸದನಕ್ಕೆ ಶಾಸಕರ ಗೈರು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆಯೂ ರಾಜ್ಯ ವಿಧಾನಮಂಡಲಗಳ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಮೊದಲ ದಿನವೇ ಅಧಿವೇಶಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಬಹಳಷ್ಟು ಶಾಸಕರು ಗೈರು ಹಾಜರಾಗಿದ್ದರು ಅಧಿವೇಶನ ಖಾಲಿ ಖಾಲಿ ಖಾಲಿ ಎನ್ನುವಂತಿದೆ.
ಇದೇ ತಿಮಗಳ 21 ಹಾಗೂ 27ರಂದು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ತಮ್ಮ ಬೆಂಬಲಿಗರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಸಲುವಾಗಿ ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿಯೇ ಬೀಡುಬಿಟ್ಟಿದ್ದಾರೆ. ಮೊದಲ ದಿನದ ಕಲಾಪದಲ್ಲಿ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿದೆ.

ನಾಲ್ಕು ದಿನ ಮೊದಲೇ ಅಧಿವೇಶನ ಮೊಟಕು..? ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಶಾಸಕರ ಒತ್ತಡ
ಇಂದಿನಿಂದ ಡಿಸೆಂಬರ್ 15ರವರೆಗೆ ವಿಧಾನಮಂಡಲ ಅಧಿವೇಶನ ನಿಗದಿಯಾಗಿದೆ. ಆದರೆ, ಡಿಸೆಂಬರ್ 21ರಿಂದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆ.11ಕ್ಕೆ ಅಧಿವೇಶನ ಮೊಟಕುಗೊಳಿಸುವ ಸಾಧ್ಯತೆ ಇದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಸದನ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಗಲಿದ ಗಣ್ಯರಿಗೆ ಸಂತಾಪಸ್ವಪಕ್ಷೀಯ ಸಚಿವರ ವಿರುದ್ಧ ಸ್ಪೀಕರ್ ಕಾಗೇರಿ ಕೆಂಡಕಾರಿದ್ದೇಕೆ

ಇಂದು ವಿಧಾನಸಭೆ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ನಿರ್ಣಯ ಮಂಡಿಸಿದರು. ಇತ್ತೀಚೆಗೆ ನಿಧನರಾದ
ರಾಮವಿಲಾಸ್ ಪಾಸ್ವಾನ್, ಜಸ್ವಂತ್ ಸಿಂಗ್, ವೈ.ನಾಗಪ್ಪ, ಕೆ ಮಲ್ಲಪ್ಪ, ಡಿಐ ಪಾಟೀಲ್, ರತನ್ ಕುಮಾರ್ ಕಟ್ಟೆಮಾರ್, ವಿಮರ್ಶಕ ಜಿ.ಎಸ್. ಅಮೂರ, ಪತ್ರಕರ್ತ ರವಿ ಬೆಳಗೆರೆ, ಸಹಕಾರಿ ಧುರೀಣ ವಿ.ಎಸ್. ಸೊಂದೆ ಸೇರಿದಂತೆ ಅಗಲಿದ ಗಣ್ಯರಿಗೆ ಸದನದಲ್ಲಿ ಗೌರವ ಸಲ್ಲಿಸಲಾಯಿತು.
ನಂತರ ಕಲಾಪದಲ್ಲಿ 9 ಸಚಿವರು ಹಾಜರಾಗಿದ್ದಾಗಿ ಸಹಿ ಹಾಕಿದ್ದರೂ ಕೇವಲ 3 ಸಚಿವರು ಮಾತ್ರ ಇದ್ದದ್ದನ್ನು ಕಂಡು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ಹೊರಹಾಕಿದರು.
ಜತೆಗೆ ಕಳೆದ ಒಂದು ವರ್ಷದಿಂದ ಪಹಣಿ ನೀಡುವ ಸಾಫ್ಟ್ವೇರ್ ಕೆಟ್ಟುಹೋಗಿದ್ದು, ರೈತರು ಪರದಾಡುತ್ತಿದ್ದಾರೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ, ತೀರ್ಥಹಳ್ಳಿ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಗಮನ ಸೆಳೆದರು. ಕಂದಾಯ ಸಚಿವ ಆರ್.ಅಶೋಕ್ ಶೀಘ್ರದಲ್ಲೇ ಸರಿಪಡಿಸುವುದಾಗಿ ನೀಡಿದ ಭರವಸೆಗೆ ಸ್ಪೀಕರ್ ಕಾಗೇರಿ ಕಿಡಿಕಾರಿದರು.
ದೇವನಹಳ್ಳಿ ಪಟ್ಟಣದಲ್ಲಿ ಸಮರ್ಪಕ ರಸ್ತೆಗಳಿಲ್ಲ ಎಂಬ ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರಶ್ನೆಗೆ ಡಿಸಿಎಂ ಗೋವಿಂದ ಕಾರಜೋಳ ಉತ್ತರಕ್ಕೂ ಕಾಗೇರಿ ಅಸಮಾಧಾನ ಹೊರಹಾಕಿದ್ದಾರೆ.
ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ
ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಸಿದ್ದರಾಮಯ್ಯ
ಲಾಕ್ಡೌನ್ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಯಾವುದೇ ಮಸೂದೆಗಳು ಮಂಡನೆಯಾಗಿಲ್ಲ. ಮುಂದಿನ ದಿನಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡಿಸುವ ಸಾಧ್ಯತೆ ಇದ್ದು, ನಾಳೆ ರೈತರು ಭಾರತ್ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ನಾಳೆಯ ಕಲಾಪದಲ್ಲಿ ಹಾಜರಾಗುವುದು ಅನುಮಾನ ಎನ್ನಲಾಗಿದೆ.








