ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ರವೀಂದ್ರ ಜಡೇಜಾ ಅಲಭ್ಯ..?
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಆಲ್ ರೌಂಡರ್ ರವೀಂದ್ರ ಜಡೇಜಾ ಅಲಭ್ಯರಾಗುವ ಸಾಧ್ಯತೆಗಳಿವೆ.
ಟಿ-ಟ್ವೆಂಟಿ ಪಂದ್ಯದ ವೇಳೆ ಐಸಿಸಿ ಹೊಸ ನಿಯಮವಾಗಿರುವ ಕನ್‍ಕ್ಯುಸನ್ ಮತ್ತು ಸ್ನಾಯು ಸೆಳೆತದಿಂದಾಗಿ ರವೀಂದ್ರ ಜಡೇಜಾ ಆಡುವ ಸಾಧ್ಯತೆಗಳಿಲ್ಲ.
ಹೀಗಾಗಿ ಹೊನಲು ಬೆಳಕಿನಡಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದು, 50ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿರಿಸಿಕೊಳ್ಳುವ ಆಸೆಯನ್ನು ಕೈಚೆಲ್ಲಿಕೊಂಡಿದ್ದಾರೆ.
ರವೀಂದ್ರ ಜಡೇಜಾ ಅವರಿಗೆ ಕನಿಷ್ಠ ಮೂರು ವಾರಗಳ ವಿಶ್ರಾಂತಿ ಅಗತ್ಯವಿದೆ. ಆದ್ರಿಂದ ಡಿಸೆಂಬರ್ 17ರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.
ಐಸಿಸಿಯ ಕನ್‍ಕ್ಯುಸನ್ ನೀತಿಯ ಪ್ರಕಾರ ಆಟಗಾರನ ತಲೆಗೆ ಏಟು ಬಿದ್ರೆ, ಆಟಗಾರ ಕನಿಷ್ಠ 7ರಿಂದ 10 ದಿನಗಳವರೆಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಆದ್ರಿಂದ ಡಿಸೆಂಬರ್ 11ರಿಂದ ನಡೆಯಲಿರುವ ಅಭ್ಯಾಸ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.
ಇನ್ನೊಂದೆಡೆ ರವೀಂದ್ರ ಜಡೇಜಾ ಅವರು ಸ್ನಾಯು ಸೆಳೆತದಿಂದಲೂ ಬಳಲುತ್ತಿದ್ದಾರೆ.
ಸದ್ಯ 49 ಟೆಸ್ಟ್ ಪಂದ್ಯಗಳನ್ನು ಆಡಿರುವ ರವೀಂದ್ರ ಜಡೇಜಾ ಅವರು 213 ವಿಕೆಟ್ ಹಾಗೂ 1869 ರನ್ ಕೂಡ ದಾಖಲಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಹಾಗೂ 14 ಅರ್ಧಶತಕಗಳಿವೆ. ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯಿಂದ ಆರ್. ಅಶ್ವಿನ್ ಮಾತ್ರ ಸ್ಪಿನ್ ಬಳಗದಲ್ಲಿದ್ದಾರೆ. ಅಲ್ಲದೆ ಅಭ್ಯಾಸ ಪಂದ್ಯಕ್ಕೆ ಕುಲದೀಪ್ ಯಾದವ್ ಅವರು ರವೀಂದ್ರ ಜಡೇಜಾ ಸ್ಥಾನವನ್ನು ತುಂಬಲಿದ್ದಾರೆ.








