‘ಯುವರತ್ನ’ ರಿಲೀಸ್ ಗೆ ಡೇಟ್ ಫಿಕ್ಸ್ : ಅಪ್ಪು ಅಭಿಮಾನಿಗಳು ಫುಲ್ ಖುಷ್..!
ಪುನೀತ್ ಸ್ಟಾರ್ ಅಭಿಮಾನಿಗಳಷ್ಟೇ ಅಲ್ಲದೇ ಇಡೀ ಸ್ಯಾಂಡಲ್ ವುಡ್ ಕಾಯುತ್ತಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ. ಇತ್ತೀಚೆಗಷ್ಟೇ ಸಿನಿಮಾದ ‘ಪವರ್ ಆಫ್ ಯೂತ್’ ರಿಲೀಸ್ ಆಗಿ ಅಭಿಮಾನಿಗಳ ಮನಗೆದ್ದಿದೆ. ತೆಲುಗು ಹಾಗೂ ಕನ್ನಡ ಎರೆಡೂ ಬಾಷೆಗಳಲ್ಲೂ ರಿಲೀಸ್ ಆದ ಸಾಂಗ್ ಗೆ ಒಳ್ಲೆ ರೆಸ್ಪಾನ್ಸ್ ಸಿಗ್ತಿದೆ. ಹಾಡಿನಲ್ಲಿ ಅಪ್ಪು ಮಾಸ್ ಲುಕ್, ಸಖತ್ ಸ್ಟೆಪ್ಸ್ ಫ್ಯಾನ್ಸ್ ಗಳ ಹೃದಯ ಕದ್ದಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹವಾ ಸೃಷ್ಟಿ ಮಾಡಿದೆ. ಮಿಲಿಯನ್ ಗಟ್ಟಲೆ ವೀವ್ಸ್ ಹಾಗೂ ಲೈಕ್ಸ್ ಗಿಟ್ಟಿಸಿಕೊಂಡಿದೆ. ಇದೀಗ, ಚಿತ್ರದ ಎರಡನೇ ಹಾಡು ಊರಿಗೊಬ್ಬ ರಾಜ ಸರದಿ. ಈ ಹಾಡನ್ನು ಸ್ವತಃ ಪುನೀತ್ ಹಾಡಿದ್ದು ಸದ್ಯದಲ್ಲೇ ಎರಡನೇ ಹಾಡು ರಿಲೀಸ್ ಆಗಲಿದೆ. ಆದ್ರೆ ಸಿನಿಮಾ ರಿಲೀಸ್ ಗೆ ಕಾಯುತ್ತಿರುವ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಸಿನಿಮಾ ರಿಲೀಸ್ ಗೆ ಚಿತ್ರತಂಡ ಎಲ್ಲ ಸಿದ್ಧತೆಗಳನ್ನ ನಡೆಸಿಕೊಂಡಿದೆ.
10 ಮತ್ತು 12 ತರಗತಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆ ಮೇ 2021ರಲ್ಲಿ ನಡೆಸಲು ಪೋಷಕರ ಸಂಘಟನೆ ಆಗ್ರಹ
ಅಂದ್ಹಾಗೆ ಎಲ್ಲಾ ಅಂದುಕೊಂಡಂತೆ ಆದ್ರೆ ಜನವರಿ 22ಕ್ಕೆ ಯುವರತ್ನನಾಗಿ ಅಪ್ಪು ತೆರೆ ಮೇಲೆ ಅಭಿಮಾನಿಗಳಿಗೆ ದರ್ಶನ ನೀಡೋದು ಪಕ್ಕಾ ಎನ್ನಲಾಗ್ತಿದೆ. ಹೌದು 2021 ರ ಜನವವರಿಯಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆಯಂತೆ. ಇನ್ನೂ ಕೊರೊನಾ ಹಾವಳಿಯಿಂದಾಗಿ ಸಿನಿಮಾ ರಿಲೀಸ್ ತಡವಾಗ್ತಿದೆ. ಥಿಯೇಟರ್ ಗಳಲ್ಲಿ ಕೇವಲ ಶೇ . 50ರಷ್ಟು ಸೀಟಿಂಗ್ ವ್ಯವಸ್ಥೆಯಿರುವ ಕಾರಣ ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆ ಮಾಡಲು ಮೇಕರ್ಸ್ ಹಿಂದೇಟು ಹಾಕುತ್ತಿದ್ದಾರೆ. ಇದೀಗ ಶೀಘ್ರವೇ ಶೇ. 100 ರಷ್ಟು ಅವಕಾಶ ಸಿಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಶೇ. 100 ರಷ್ಟು ಸೀಟಿಂಗ್ ಗೆ ಅನುಮತಿ ಸಿಕ್ಕ ಕೂಡಲೇ ಯುವರತ್ನ ತೆರೆಗಪ್ಪಳಿಸಲಿದೆ ಎನ್ನಲಾಗ್ತಿದೆ.
ಇನ್ನೂ ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಪೊಗರು ಸಿನಿಮಾದ ರಿಲೀಸ್ ಬಗೆಗಿನ ಸುದ್ದಿ ಸಂಚಲನ ಸೃಷ್ಟಿಮಾಡಿದೆ. ಧ್ರುವ ಸರ್ಕಾ ಅಭಿನಯದ ಪೊಗರು ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಬಹುದು ಎನ್ನಲಾಗ್ತಿದೆ. ಎಲ್ಲಾ ಪ್ಲಾನ್ ಪ್ರಕಾರ ನಡೆದ್ರೆ ಜ. 14 ಕ್ಕೆ ಸಿನಿಮಾ ತೆರೆಕಾಣಬಹುದು ಎಂಬ ಸುದ್ದಿ ಹರಿದಾಡ್ತಿದೆ.
ಇತ್ತ ಮತ್ತೊಂದು ಸ್ಯಾಂಡಲ್ ವುಡ್ ಹೈ ಲೀ ಎಪ್ಸ್ ಪೆಕ್ಟೆಡ್ ಸಿನಿಮಾವಾಗಿರುವ ಚಾಲೆಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಸಹ ಡಿಸೆಂಬರ್ ನಲ್ಲಿ ಅಂದ್ರೆ ಕ್ರಿಸ್ ಮಸ್ ವೇಳೆಗೆ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಒಟ್ಟಾರೆ ಲಾಕ್ ಡೌನ್ ಬಳಿಕ ಬಹುತೇಕ ದೊಡ್ಡ ಮಟ್ಟದ ಸಿನಿಮಾಗಳು ಯಾವುದು ರಿಲೀಸ್ ಆಗಿಲ್ಲ. ಹೀಗಾಗಿ ಬಹುನಿರೀಕ್ಷೆಯ ಸಿನಿಮಾಗಳ ಲಿಸ್ಟ್ ನಲ್ಲಿರುವ ಸಿನಿಮಾಗಳು ರಿಲೀಸ್ ಆಗಬಹುದು ಎಂದು ಅಪ್ಪು, ಸುದೀಪ್, ಡಿ ಬಾಸ್ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಈ ಲಿಸ್ಟ್ ನಲ್ಲಿ ದುನಿಯಾ ವಿಜಿ ನಟನೆಯ ಸಲಗ ಸಹ ಇದೆ. ರಾಬರ್ಟ್, ಕೋಟಿಗೊಬ್ಬ 3, ಹೀಗೆ ಬಹುನಿರೀಕ್ಷೆಯ ಸಿನಿಮಾಗಳು ಶೂಟಿಂಗ್ ಮುಗಿಸಿ ಬಿಡುಗಡೆ ಹೊಸ್ತಿಲಲ್ಲಿವೆ. ಹೀಗಾಗಿ ಚಿತ್ರ ಯಾವಾಗ ತೆರೆಗಪ್ಪಳಿಸಲಿದೆ ಎಂದು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಒಂದು ವೇಳೆ ಪೊಗರು , ರಾಬರ್ಟ್ ಅಥವ ಯುವರತ್ನ ಡಿಸೆಂಬರ್ ಅಥವ ಜನವರಿಗೆ ರಿಲೀಸ್ ಆದ ಪಕ್ಷದಲ್ಲಿ ಇನ್ನೂ ಅನೇಕ ಸಿನಿಮಾಗಳನ್ನ ರಿಲೀಸ್ ಮಾಡೋದಕ್ಕೆ ಮೇಕರ್ಸ್ ಗೆ ಕೊಂಚ ಧೈರ್ಯ ಬರುತ್ತೆ.