ADVERTISEMENT
Sunday, April 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇಂಜಿನಿಯರಿಂಗ್ ಪದವೀಧರರಿಗೆ ಗುಡ್‍ನ್ಯೂಸ್: ಇನ್ಮುಂದೆ ಆಗ್ಬಹುದು ಪ್ರೈಮರಿ ಸ್ಕೂಲ್ ಟೀಚರ್ಸ್..!

Kariyappa N by Kariyappa N
December 8, 2020
in Newsbeat, Politics, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: 6ರಿಂದ 8ನೇ ತರಗತಿವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಶಿಕ್ಷಕರ ನೇಮಕಾತಿಗೆ ಅಡ್ಡಿಯಾಗಿದ್ದ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದೆ. ಇದರಿಂದ ಇನ್ನು ಮುಂದೆ ಇಂಜಿನಿಯರಿಂಗ್ ಪದವಿ ಪಡೆದು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರು ಪ್ರಾಥಮಿಕ ಶಾಲಾ ಶಿಕ್ಷಕರಾಗಬಹುದು.
ಇದಕ್ಕೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡುವುದರೊಂದಿಗೆ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.


2017ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಸ್ತಿತ್ವಕ್ಕೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕ (6ರಿಂದ 8ನೇ ತರಗತಿ) ಹುದ್ದೆಗಳ ಭರ್ತಿಗಾಗಿ 2018 ಮತ್ತು 2019ರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೂ ವಿಜ್ಞಾನ ಭೋದನೆ ಮಾಡುವ ಅಭ್ಯರ್ಥಿಗಳ ಕೊರತೆಯಿಂದ ಹೆಚ್ಚಿನ ಸ್ಥಾನಗಳು ಖಾಲಿ ಬಿದ್ದಿದ್ದವು. ಪ್ರಾಥಮಿಕ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ, ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯತೆಯ ಅಗತ್ಯವನ್ನು ಮನಗಂಡು ವೃಂದ ನಿಯಮಗಳಿಗೆ ಕೆಲ ತಿದ್ದುಪಡಿಯನ್ನು ಶಿಕ್ಷಣ ಇಲಾಖೆ ಪ್ರಸ್ತಾಪಿಸಿದ್ದು, ಈ ತಿದ್ದುಪಡಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ವೃಂದ ನಿಯಮಗಳಿಗೆ ಕೆಲವು ತಿದ್ದುಪಡಿ ಅಗತ್ಯವಾಗಿತ್ತು. ವಿಜ್ಞಾನ ಶಿಕ್ಷಕ ಹುದ್ದೆಗಳಲ್ಲಿ ಇಂಜಿನಿಯರಿಂಗ್ ಪದವೀಧರರೂ ಸೇರಿದಂತೆ ವಿವಿಧ ಪದವೀಧರರಿಗೆ ಅವಕಾಶ ಕಲ್ಪಿಸಬೇಕೆಂಬ ಪರಿಣಿತರ ಸಮಿತಿ ಅಭಿಪ್ರಾಯದಂತೆ ಈ ತಿದ್ದುಪಡಿ ಮಾಡಲಾಗಿದೆ.

Related posts

ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ವಂಚನೆ ಆರೋಪ

ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ವಂಚನೆ ಆರೋಪ

April 12, 2026
ಅಭ್ಯರ್ಥಿ ಯಾರದ್ದೇ ಇರಲಿ ಎಲ್ಲರೂ ನಮ್ಮವರೇ ರಾಜ್ಯ ಬಿಜೆಪಿ ನಾಯಕರ ನಡೆಗೆ ದೆಹಲಿ ನಾಯಕರು ಫಿದಾ   State BJP leaders

ಅಭ್ಯರ್ಥಿ ಯಾರದ್ದೇ ಇರಲಿ ಎಲ್ಲರೂ ನಮ್ಮವರೇ ರಾಜ್ಯ ಬಿಜೆಪಿ ನಾಯಕರ ನಡೆಗೆ ದೆಹಲಿ ನಾಯಕರು ಫಿದಾ State BJP leaders

April 12, 2026


6ರಿಂದ 8ನೇ ತರಗತಿ ಪ್ರಾಥಮಿಕ ಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕ ಹುದ್ದೆಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಮಾತ್ರವೇ ಆವಕಾಶವಿತ್ತು. ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರಗಳನ್ನು ಪದವಿಯಲ್ಲಿ ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು, ಮೂರನೇ ವಿಷಯವನ್ನು ರಸಾಯನಶಾಸ್ತ್ರ ವಿಷಯದ ಜೊತೆಗೆ ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್) /ಎಲೆಕ್ಟ್ರಾನಿಕ್ಸ್/ ಭೂಗೋಳಶಾಸ್ತ್ರ / ಸ್ಟ್ಯಾಟಿಟಿಕ್ಸ್/ ಗೃಹವಿಜ್ಞಾನ ವಿಷಯಗಳಿಗೂ ಸಹ ಅವಕಾಶ ಕಲ್ಪಿಸಿದಲ್ಲಿ ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯತೆಗೆ ದಾರಿಯಾಗಲಿದ್ದು, ಶಾಲಾ ಶಿಕ್ಷಣಕ್ಕೆ ಪೂರಕವಾಗಿ ಒದಗಿ ಬರಲಿದೆ. ತಾವು ನೇಮಿಸಿದ್ದ ಪರಿಣಿತರ ತಂಡದ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಸಹ ಅರ್ಹ ವಿಷಯಗಳಾಗಿ ಪರಿಗಣಿಸಲಾಗುತ್ತದೆ. ಈ ಅಭ್ಯರ್ಥಿಗಳು ಬಿಇಡಿ ಮತ್ತು ಟಿಇಟಿ ಅರ್ಹತೆ ಹೊಂದಬೇಕಿರುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ತಿದ್ದುಪಡಿಯಿಂದಾಗಿ ನಾಲ್ಕು ವರ್ಷಗಳ ಅವಧಿಯ ಇಂಜಿನಿಯರಿಂಗ್/ ಬಿ.ಟೆಕ್ ಪದವಿ (ಆರ್ಕಿಟೆಕ್ಚರ್ ಪದವಿ ಹೊರತುಪಡಿಸಿ) ಪಡೆದ ಅಭ್ಯರ್ಥಿಗಳನ್ನು ಸಹ ಈ ಹುದ್ದೆಗಳಿಗೆ ಪರಿಗಣಿಸಬಹುದಾಗಿದೆ. ಪ್ರಸ್ತುತ ನಿಯಮಗಳಲ್ಲಿ ಸಿಬಿಝಡ್ ವಿಷಯಗಳ ಅಭ್ಯರ್ಥಿಗೆ ಅವಕಾಶವಿರಲಿಲ್ಲ. ಈ ವಿಷಯಗಳ ಅಭ್ಯರ್ಥಿಗಳ ಬೇಡಿಕೆ ಗಮನಿಸಿ ವಿಜ್ಞಾನ ಮತ್ತು ಗಣಿತ ವಿಷಯದ ಎರಡನೇ ಹುದ್ದೆ ಇರುವ ಶಾಲೆಗಳಲ್ಲಿ ಜೀವ-ವಿಜ್ಞಾನ ಶಾಸ್ತ್ರ (ಬಯೋಲಜಿಕಲ್ ಸೈನ್ಸ್) ವಿಷಯವನ್ನು ಪರಿಗಣಿಸಲಾಗುತ್ತದೆ. ಪದವಿ ಹಂತದಲ್ಲಿ ಕಡ್ಡಾಯವಾಗಿ ಮೂರು ವರ್ಷಗಳಲ್ಲಿಯೂ ರಸಾಯನಶಾಸ್ತ್ರ ಅಭ್ಯಾಸ ಮಾಡಿರುವ ಮತ್ತು ಉಳಿದಂತೆ ಸಸ್ಯಶಾಸ್ತ್ರ / ಪ್ರಾಣಿ ಶಾಸ್ತ್ರ/ ರೇಷ್ಮೆ ಶಾಸ್ತ್ರ / ಪರಿಸರ ಶಾಸ್ತ್ರ / ಜೈವಿಕ ವಿಜ್ಞಾನ ವಿಷಯಗಳ್ಲಿ ಯಾವುದಾದರೂ ಎರಡು ವಿಷಯಗಳನ್ನು ಕಡ್ಡಾಯವಾಗಿ ಎಲ್ಲ 3 ವರ್ಷಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳನ್ನೂ ಇನ್ನು ಮುಂದೆ ಈ ಶಿಕ್ಷಕ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ.
ಹಾಗೆಯೇ ಭಾಷಾ ಹುದ್ದೆಗಳಿಗೆ ಇತರೆ ಭಾಷೆಗಳ ಜೊತೆಗೆ ಸಂಸ್ಕøತವನ್ನು ಸೇರ್ಪಡೆಗೊಳಿಸಲು ಮತ್ತು ಸಮಾಜ ಪಾಠಗಳ ಹುದ್ದೆಗೆ ಸಮಾಜಶಾಸ್ತ್ರ ವಿಷಯವನ್ನು ಸಹ ಸೇರ್ಪಡೆ ಮಾಡಲಾಗಿದೆ ಎಂದು ಸುರೇಶ್‍ಕುಮಾರ್ ವಿವರಿಸಿದ್ದಾರೆ.
ಈ ಎಲ್ಲ ಅಂಶಗಳ ಜೊತೆಗೆ ನೇಮಕಾತಿ ವಿಧಾನದಲ್ಲಿ ಆಧಾರದ ಸರಾಸರಿ ಅಂಕಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಅದರಂತೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು-ಶೇ.50, ಟಿಇಟಿಯಲ್ಲಿ ಗಳಿಸಿರುವ ಅಂಕಗಳು-ಶೇ.20, ಪದವಿಯಲ್ಲಿ ಗಳಿಸಿದ ಅಂಕಗಳು- ಶೇ.20 ಮತ್ತು ಡಿಇಡಿ/ಬಿಇಡಿಯಲ್ಲಿ ಗಳಿಸಿದ ಅಂಕಗಳು-ಶೇ.10ರ ಮಾನದಂಡವನ್ನು ಪ್ರಸ್ತಾಪಿಸಲಾಗಿದೆ.
ಸರ್ಕಾರದ ಈ ಕ್ರಮದಿಂದ ಈ ಶಿಕ್ಷಕ ಹುದ್ದೆಗಳಿಗೆ ಹೆಚ್ಚಿನ ಅಭ್ಯರ್ಥಿಗಳ ಲಭ್ಯತೆಯಾಗಲಿದ್ದು, ಶೈಕ್ಷಣಿಕ ವೈವಿಧ್ಯತೆ, ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: education act modifiedengeering holdersgood newsprimary school teacherssuresh kumar
ShareTweetSendShare
Join us on:

Related Posts

ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ವಂಚನೆ ಆರೋಪ

ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ವಂಚನೆ ಆರೋಪ

by Shwetha
April 12, 2026
0

ಖ್ಯಾತ ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ರೂಪಾಯಿ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನ ಪಂಜಾಗುಟ್ಟಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಿಸಲಾಗಿದೆ. ವಕೀಲ...

ಅಭ್ಯರ್ಥಿ ಯಾರದ್ದೇ ಇರಲಿ ಎಲ್ಲರೂ ನಮ್ಮವರೇ ರಾಜ್ಯ ಬಿಜೆಪಿ ನಾಯಕರ ನಡೆಗೆ ದೆಹಲಿ ನಾಯಕರು ಫಿದಾ   State BJP leaders

ಅಭ್ಯರ್ಥಿ ಯಾರದ್ದೇ ಇರಲಿ ಎಲ್ಲರೂ ನಮ್ಮವರೇ ರಾಜ್ಯ ಬಿಜೆಪಿ ನಾಯಕರ ನಡೆಗೆ ದೆಹಲಿ ನಾಯಕರು ಫಿದಾ State BJP leaders

by Shwetha
April 12, 2026
0

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮೇ ನಾಲ್ಕರಂದು ಹೊರಬೀಳಲಿರುವ ಫಲಿತಾಂಶ ಯಾರ ಪರವಾಗಿಯೇ ಬರಲಿ ಕರ್ನಾಟಕ ಬಿಜೆಪಿಯ ಒಳಮನೆಯಲ್ಲಿ...

ಜನನಾಯಕನ್ ಚಿತ್ರಕ್ಕೆ ಸಂಕಷ್ಟ : ಪೈರಸಿ ಹಾವಳಿ ನಡುವೆ ವಿಜಯ್ ಬೆನ್ನಿಗೆ ನಿಂತ ಅಣ್ಣಾಮಲೈ ನಾನು ಈ ಸಿನಿಮಾ ಥಿಯೇಟರ್ ನಲ್ಲೇ ನೋಡುತ್ತೇನೆ ಎಂದು ಘೋಷಣೆ

ಜನನಾಯಕನ್ ಚಿತ್ರಕ್ಕೆ ಸಂಕಷ್ಟ : ಪೈರಸಿ ಹಾವಳಿ ನಡುವೆ ವಿಜಯ್ ಬೆನ್ನಿಗೆ ನಿಂತ ಅಣ್ಣಾಮಲೈ ನಾನು ಈ ಸಿನಿಮಾ ಥಿಯೇಟರ್ ನಲ್ಲೇ ನೋಡುತ್ತೇನೆ ಎಂದು ಘೋಷಣೆ

by Shwetha
April 12, 2026
0

ಕನ್ನಡದ ಹೆಮ್ಮೆಯ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ದಳಪತಿ ವಿಜಯ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಜನನಾಯಕನ್ ಬಿಡುಗಡೆಗೂ ಮುನ್ನವೇ ದೊಡ್ಡ ಸಂಕಷ್ಟಕ್ಕೆ...

ನುಸುಳುಕೋರರಿಗೆ ಗೇಟ್ ಪಾಸ್ ಪಕ್ಕಾ: ಬಂಗಾಳದ ನೆಲದಲ್ಲಿ ಪ್ರಧಾನಿ ಮೋದಿ ಗುಡುಗು

ನುಸುಳುಕೋರರಿಗೆ ಗೇಟ್ ಪಾಸ್ ಪಕ್ಕಾ: ಬಂಗಾಳದ ನೆಲದಲ್ಲಿ ಪ್ರಧಾನಿ ಮೋದಿ ಗುಡುಗು

by Shwetha
April 12, 2026
0

ಪಶ್ಚಿಮ ಬಂಗಾಳದ ಚುನಾವಣಾ ರಾಜಕೀಯದ ಅಖಾಡ ಈಗ ಕಾವೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಪ್ರಚಾರಕ್ಕೆ ಹೊಸ ವೇಗ ನೀಡಿದ್ದಾರೆ....

ದಾವಣಗೆರೆಯಲ್ಲಿ ಕೈಗೆ ತಪ್ಪಿತೇ ಮುಸ್ಲಿಂ ಮತಗಳ ಸಾಥ್? ಸೋಲಿನ ಭೀತಿಯಲ್ಲಿ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ದಾವಣಗೆರೆಯಲ್ಲಿ ಕೈಗೆ ತಪ್ಪಿತೇ ಮುಸ್ಲಿಂ ಮತಗಳ ಸಾಥ್? ಸೋಲಿನ ಭೀತಿಯಲ್ಲಿ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

by Shwetha
April 12, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಬಾಗಲಕೋಟೆ ಉಪಚುನಾವಣೆಯ ಮತದಾನ ಮುಗಿದಿದ್ದು, ಫಲಿತಾಂಶಕ್ಕಾಗಿ ರಾಜ್ಯ ರಾಜಕೀಯ ವಲಯ ಕಾತರದಿಂದ ಕಾಯುತ್ತಿದೆ. ಈ ನಡುವೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram