ಚಿಕ್ಕಮಗಳೂರು: ಭಯೋತ್ಪಾದಕರು, ದೇಶ ಇಬ್ಭಾಗ ಮಾಡುವ ಖಲಿಸ್ತಾನಿಗಳ ಜೊತೆಯೂ ಸೇರಲು ಕಾಂಗ್ರೆಸ್ ಸಿದ್ಧವಾಗಿದೆ. ಖಲಿಸ್ತಾನಿಗಳ ಮೂಲಕ ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಭಾರತವನ್ನು ಇಬ್ಭಾಗ ಮಾಡಲು, ಖಲಿಸ್ತಾನ ಪ್ರತ್ಯೇಕಿಸಲು ಸಂಚು ನಡೆಯುತ್ತಿದೆ. ರೈತರ ಮೂಲಕ ವ್ಯವಸ್ಥಿತ ಷಡ್ಯಂತ್ರ್ಯ ಹೊರ ದೇಶದಿಂದ ನಡೆಯುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ದೇಶದ ಸಂಸದರಿಗೆ ವಾಯ್ಸ್ ಮೆಸೇಜ್ ಬರುತ್ತಿವೆ. ನಾವು ಖಲೀಸ್ತಾನ್ ಮೂವ್‍ಮೆಂಟಿನವರು, ಭಾರತ ಸೈನಿಕರು ಭಾರತದ ವಿರುದ್ಧ ತಿರುಗಿ ಬೀಳಬೇಕು. ಪಂಜಾಬಿನ ಪೆÇಲೀಸರು ಭಾರತದ ವಿರುದ್ಧ ತಿರುಗಿ ಬೀಳಬೇಕು ಎಂದು ವಾಯ್ಸ್ ಮೇಸೇಜ್ ನಮಗೆ ಕಳಿಸುತ್ತಾರೆ. ಖಲೀಸ್ತಾನ್ ಮೂವ್ಮೆಂಟ್ ಬೇರೆ ದೇಶದಲ್ಲಿ ಇನ್ನೂ ಜೀವಂತವಿದೆ. ಇದಕ್ಕೆ ಎಲ್ಲರೂ ಸೇರಿ ಜೀವ ಕೊಡುವ ಕೆಲಸ ಮಾಡುತ್ತಿದ್ದಾರೆ.
ರಾಜಕೀಯಕ್ಕಾಗಿ, ಮೋದಿ ವಿರೋಧಿüಸಲು ಕಾಂಗ್ರೆಸ್ ಖಲಿಸ್ತಾನಿಗಳ ಜತೆ ಸ್ನೇಹ ಬೆಳೆಸಿದೆ. ಈ ಹಿಂದೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ಬಗ್ಗೆ ಹೇಳಿತ್ತು, ಎಪಿಎಂಸಿ ಕಾಯ್ದೆ ಬಗ್ಗೆ ಹೇಳಿದ್ದ ಕಾಂಗ್ರೆಸ್ ಮೋದಿ ಅವರನ್ನು ವಿರೋಧಿಸಲು ಕೆಳಮಟ್ಟಕ್ಕೆ ಇಳಿದಿದೆ. ಭಯೋತ್ಪಾದಕರು ಹಾಗೂ ದೇಶ ಇಬ್ಭಾಗ ಮಾಡುವವರ ಜತೆಯೂ ಸೇರಲು ಸಿದ್ದವಿದೆ ಎಂಬುದನ್ನು ಕಾಂಗ್ರೆಸ್ ತೋರಿಸಿಕೊಟ್ಟಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಸಂಸದೆ ಶೋಭಾ ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel