ಜೆಡಿಎಸ್ ಮಣ್ಣಿನ ಮಕ್ಕಳ ಪಕ್ಷವಲ್ಲ : ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು : ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಪರಿಷತ್ ನಲ್ಲಿ ಬೆಂಬಲಿಸಿದ ವಿಚಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, ಜೆಡಿಎಸ್ ನವರು ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ನಿನ್ನೆ ಬೆಳಗ್ಗೆ ಹೇಳಿದ್ರು.
ಆದರೆ ಸಂಜೆ ವೇಳೆ ಉಲ್ಟಾ ಹೊಡೆದು ಯಡಿಯೂರಪ್ಪನರಿಗೆ ಬೆಂಬಲ ಕೋಡ್ತಾರೆ ಎಂದರೆ ಏನು ಅರ್ಥ..? ಬಿಎಸ್ ಯಡಿಯೂರಪ್ಪ ಜೊತೆ ನಿಮಗೆ ಎಷ್ಟು ಡೀಲ್ ಆಗಿದೆ..?
ಎಷ್ಟು ಶಾಸಕರನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದೀರಿ..? ನಿಮ್ಮದು ಜ್ಯಾತ್ಯಾತೀತ ತತ್ವನು ಅಲ್ಲ ಮತ್ತು ರೈತರ ಪರವಾದ ಚಿಂತನೆಯೂ ನಿಮ್ಮ ಪಕ್ಷಕ್ಕಿಲ್ಲ.
ನೀವು ಈ ಮಣ್ಣಿನ ದ್ರೋಹಿಗಳು. ನೂರಕ್ಕೆ ನೂರು ಡಿಲ್ ಮಾಡುವುದರಲ್ಲಿ ನೀವು ನಿಸ್ಸಿಮರು ಎಂದು ಆಕ್ರೋಶ ಹೊರಹಾಕಿದರು.
ಇನ್ನು ಜೆಡಿಎಸ್ ಮಣ್ಣಿನ ಮಕ್ಕಳ ಪಕ್ಷವಲ್ಲ, ಆ ಹೆಸರಿನಲ್ಲಿ ಮಣ್ಣಿನ ಮಕ್ಕಳಿಗೆ ಮೋಸ ಮಾಡುವ ಪಕ್ಷ ಎಂದು ಜರಿದ ಚಂದ್ರಶೇಖರ್, ಕುಮಾರಸ್ವಾಮಿ ರೈತರ, ಮಣ್ಣಿನ ಮಕ್ಕಳು ಹೆಸರು ಹೇಳಿಕೊಂಡು ಅಚ್ಚುಕಟ್ಟಾಗಿ ಅವರ ಅಧಿಕಾರವನ್ನು ನಡೆಸಿದ್ದಾರೆ.
ಕುಮಾರಸ್ವಾಮಿಗೆ ನೆನಪಿರಲಿ ದೇವೇಗೌಡರು ಇದಕ್ಕೆ ಒಪ್ಪುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ದೇವೇಗೌಡರು ಅವರ ಇಬ್ಬರು ಮಕ್ಕಳಿಗೆ ಬುದ್ಧಿ ಹೇಳಬೇಕಿತ್ತು. ಹೇಳಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ ಎಂದರು.
ಕುಮಾರಸ್ವಾಮಿ ಮಾಡಿರುವ ಅಪರಾಧವನ್ನು ಈ ಮಣ್ಣು ಒಪ್ಪುವುದಿಲ್ಲ. ಮಣ್ಣಿಗೆ ದ್ರೋಹ ಮಾಡುವುದನ್ನು ನಾವು ಸಹಿಸುವುದಿಲ್ಲ.
ಕುಮಾರಸ್ವಾಮಿ ಕೇವಲ ತನ್ನ ಹಿತಾಸಕ್ತಿಗಳ ರಾಜಕಾರಣ ಮಾಡಲು ಈ ತರಹದ ಕೆಳ ಮಟ್ಟದ ರಾಜಕಾರಣಕ್ಕೆ ಇಳಿದಿರುವುದನ್ನು ನಾವು ವಿರೋಧಿಸುತ್ತೇವೆ.
ರೈತರು ಯಾವುದೇ ಕಾರಣಕ್ಕೂ ನಿಮ್ಮನ್ನು ಕ್ಷಮಿಸುವುದಿಲ್ಲ. ಇದೇ ನಿಮ್ಮ ಕಡೆಯ ರಾಜಕಾರಣ ಎಂದು ನಾನು ಭಾವಿಸುತ್ತೇನೆ ಎಂದು ಗುಡುಗಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel