ಚೀನಾ ಎಂಬ ಪರಮ ದರಿದ್ರ ರಾಷ್ಟ್ರ ಹೇಗೆ ವಿಶ್ವಕ್ಕೆ ಸಂಕಟ ತಂದಿಟ್ಟ ಮನುಕುಲದ ಮಹಾಮಾರಿ ಕೋವಿಡ್-19 ಹಬ್ಬಲು ಕಾರಣ ಗೊತ್ತಾ!
1) ಕೋವಿಡ್-19 ಅಥವಾ ಕರೋನಾ ಎಚ್ಚರಿಕೆ ಚೀನಾಗೆ ದೊರೆತಿದ್ದೇ ಡಿಸೆಂಬರ್ ಹಾಗೂ ಜನವರಿ ಮಧ್ಯಭಾಗದಲ್ಲಿ. ಆದರೆ ಚೀನಾ ಬೇಜವಬ್ದಾರಿತನದಿಂದ ಅದನ್ನು ನಿರ್ಲಕ್ಷಿಸಿತು.
2) ಡಿಸೆಂಬರ್ ಮಧ್ಯಭಾಗದಲ್ಲೇ ಚೀನಾದ ಹುವಾನನ್ ಸೀ ಫುಡ್ ಹೋಲ್ ಸೆಲ್ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಸೋಂಕು ತಗುಲಿದ್ದು ದೃಢವಾಗಿತ್ತು. ನೆನಪಿಡಿ ಇದೇ ಮಾರುಕಟ್ಟೆಯಲ್ಲಿ ಚೀನಿಯರು ತಿನ್ನುವ ಎಲ್ಲಾ ಕಾಡು ಪ್ರಾಣಿಗಳು, ನಾಡು ಪ್ರಾಣಿಗಳು, ಮನೆ ಪ್ರಾಣಿಗಳು, ಕ್ರಿಮಿ ಕೀಟ, ನೆಲದಲ್ಲಿ ತೆವಳುವ – ಆಗಸದಲ್ಲಿ ಹಾರುವ – ಸಮುದ್ರದಲ್ಲಿ ಈಜುವ ಎಲ್ಲಾ ಬಗೆಯ ಜೀವಜಂತುಗಳ ಮಾಂಸ ಮಾರಾಟವಾಗುತ್ತದೆ. (ಈ ಚೀನಿಯರು ತಿನ್ನದೇ ಬಿಟ್ಟ ಪ್ರಾಣಿಗಳೆಂದರೆ ಅದು ಸ್ವತಃ ತಮ್ಮವರಾದ ಚೀನೀಯರು ಮತ್ತು ಈಗಾಗಲೇ ನಾಶವಾಗಿರುವ ಡೈನೋಸರಸ್ ಮಾಂಸ ಮಾತ್ರ)
3) ಚೀನಾದ ಕೆಲವು ಲ್ಯಾಬ್ ಟೆಕ್ನೀಶಿಯನ್ಸ್ ಡಿಸೆಂಬರ್ 26ರಂದು ಈ ಕುರಿತಾದ ವರದಿಯೊಂದನ್ನು ನೀಡಿದ್ದರು. ಅದರ ಅನ್ವಯ ಈ ಸೋಂಕು ಸಾರ್ಸ್ ಕುಟುಂಬಕ್ಕೆ ಸೇರಿದ ಹೊಸ ಬಗೆಯ ಕರೋನಾ ವೈರಸ್. ಇದರಿಂದ ಗಂಭೀರವಾದ ಶ್ವಾಸಕೋಶ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಇದು ಸಾಂಕ್ರಾಮಿಕ ಜೊತೆಗೆ ಪ್ರಾಣಕಂಟಕ. ನೆನಪಿಡಿ ಇದು ಅತ್ಯಂತ ಪ್ರಾರಂಭಿಕ ಹಂತವಾಗಿತ್ತು.
4) ಡಿಸೆಂಬರ್ 30ರ ರಾತ್ರಿ ಚೀನಾದ ವುಹಾನ್ ಸೆಂಟ್ರಲ್ ಆಸ್ಪತ್ರೆಯ ನೇತ್ರಶಾಸ್ತ್ರಜ್ಞ ಲಿ ವೆನ್ ಲಿಯಾಂಗ್ ಈ ನೋವೆಲ್ ಕರೋನಾ ವೈರಸ್ ಅಪಾಯದ ಕುರಿತಾಗಿ ಆನ್ ಲೈನ್ ಚಾಟ್ ರೂಂನಲ್ಲಿ ಚರ್ಚೆ ನಡೆಸಿದ್ದಾರೆ. ಈ ವೈರಸ್ ಕುರಿತಾದ ಭವಿಷ್ಯದ ಅಪಾಯವನ್ನು ಮೊದಲು ಊಹಿಸಿದ್ದೇ ಡಾ ಲಿಯಾಂಗ್. ಅವರ ಜೊತೆಗೆ ಕೆಲವು ಮೆಡಿಕಲ್ ಪ್ರಾಕ್ಟೀಸ್ ನಡೆಸುತ್ತಿದ್ದ ಪ್ರೊಫೇಷನಲ್ ತಜ್ಞರೂ ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಚೀನಾ ಸರ್ಕಾರ ಮಾಡಿದ್ದೇನು? ಇವರಲ್ಲಿ ಕೆಲವರ ಧ್ವನಿ ಹತ್ತಿಕ್ಕಿತು ಕೆಲವರನ್ನು ಜೈಲಿಗಟ್ಟಿತು.
5) ಜನವರಿ 1 ರಂದು ಚೀನಾದ ಕ್ಸಿನ್ ಹ್ವಾ ನ್ಯೂಸ್ ಏಜೆನ್ಸಿ ಲಿ ವೆನ್ ಲಿಯಾಂಗ್ ಮಾತನ್ನು ಅನುಮೋದಿಸಿ ಎಚ್ಚರಿಕೆ ನೀಡಿತು. ಆದರೆ ಚೀನಾ ಪೊಲೀಸರು ಈ ರೀತಿಯ ತಪ್ಪು ಸಂದೇಶ ಹರಡಬೇಡಿ ಇದೊಂದು ರೂಮರ್ಸ್ ಎಂದು ನ್ಯೂಸ್ ಏಜೆನ್ಸಿಯ ವಿರುದ್ಧವೇ ಕಿಡಿಕಾರಿದರು. ಚೀನಾದ ಪಬ್ಲಿಕ್ ಸೆಕ್ಯೂರಿಟಿ ಬ್ಯೂರೋ, ಡಾಕ್ಟರ್ ಲಿ ವೆನ್ ಲಿಯಾಂಗ್ ಗೆ ಕೊಡಬಾರದ ಚಿತ್ರ ಹಿಂಸೆ ಕೊಟ್ಟು, ಅವರು ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಅವರಿಂದಲೇ ಬರೆಸಿ ಸಹಿ ಹಾಕಿಸಿಕೊಂಡಿತು. ಇದಾದ ಕೆಲವೇ ದಿನ ಲಿ ವೆನ್ ಲಿಯಾಂಗ್ ತಮ್ಮದಲ್ಲದ ತಪ್ಪಿಗೆ ಅದೇ ಕರೋನಾ ವೈರಸ್ ಸೋಂಕಿಗೆ ಬಲಿಯಾದರು.
6) ಈ ವೈರಸ್ ಬಗ್ಗೆ ಎಚ್ಚರಿಕೆ ನೀಡುತ್ತಿದ್ದ ಎಲ್ಲಾ ವೈದ್ಯರನ್ನು ಹೆದರಿಸಿ ಬೆದರಿಸಿದ ಚೀನಾ ತನ್ನ ಪತ್ರಿಕೆಗಳಿಗೂ ನಿರ್ಬಂಧ ವಿಧಿಸಿತು. ವುಹಾನ್ ನ ವೈಲ್ಡ್ ಟ್ರೇಡ್ ಮಾರುಕಟ್ಟೆಯೇ ಕರೋನಾ ವೈರಸ್ ತವರು. ಇದನ್ನು ಕೂಡಲೇ ಬಂದ್ ಮಾಡಿ ಎನ್ನುವ ಎಚ್ಚರಿಕೆಯ ಗಂಟೆಯನ್ನು ಉಡಾಫೆ ತೋರಿ ನಿರ್ಲಕ್ಷ್ಯ ಮಾಡಿತು. ಜನವರಿ 22ರ ವರೆಗೂ ವುಹಾನ್ ಈ ದೊಡ್ಡ ಪರಮ ಕೊಳಕು ಕಸಾಯಿ ಖಾನೆ ತೆರೆದೇ ಇತ್ತು. ಅಲ್ಲಿಯವರೆಗೆ ಚೀನಾದಲ್ಲಿ 17 ಜನ ಕರೋನಾ ವೈರಸ್ ಗೆ ಬಲಿಯಾಗಿದ್ದರೆ 570 ಜನರಿಗೆ ಸೋಂಕು ತಗುಲಿತ್ತು.
7) ಡಿಸೆಂಬರ್ 31ರಂದು ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್ ಒಂದು ಅಡ್ನಾಡಿ ಹೇಳಿಕೆ ನೀಡಿತ್ತು. ಅದರ ಪ್ರಕಾರ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ವ್ಯಾಧಿ ಅಲ್ಲ. ಇದೊಂದು ಸಾಮಾನ್ಯ ಸೀಸನಲ್ ವೈರಲ್ ಫ್ಲೂ ಅಷ್ಟೆ. ಇದರ ನಿಯಂತ್ರಣ ಸುಲಭ. ಇಂತದ್ದೊಂದು ಮೂರ್ಖತನದ ಹೇಳಿಕೆಯನ್ನು ಚೀನಾ ಸರ್ಕಾವೂ ಕಣ್ಮುಚ್ಚಿ ಒಪ್ಪಿಕೊಂಡಿತು.
8) ಫೆಬ್ರವರಿ 1 ರಂದು ನ್ಯೂಯಾರ್ಕ್ ಟೈಂ ಚೀನಾದ ಎಂಡಮಿಕ್ ಕಾಯಿಲೆ ಮುಂದೆ ಅತ್ಯಂತ ದೊಡ್ಡ ಸಂಕಟ ತಂದೊಡ್ಡಬಹುದಾದ ಎಚ್ಚರಿಕೆ ನೀಡಿತು. ಆದರೆ ಚೀನಾ ಸರ್ಕಾರ ಇದನ್ನು ಮುಚ್ಚಿಟ್ಟು ತಮ್ಮ ರಾಜತಾಂತ್ರಿಕ ಇರಿಸುಮುರಿಸು ತಪ್ಪಿಸಿಕೊಳ್ಳಲು ಪ್ರಯತ್ನಿಸಿತು.
9) ಫೆಬ್ರವರಿ 14 ರವರೆಗೆ ಅಂದರೆ ಅದಾಗಲೇ ವೈರಸ್ ಹಬ್ಬತೊಡಗಿ ಸುಮಾರು ಎರಡು ತಿಂಗಳಾಗಿ, ಬರೋಬ್ಬರಿ 1400 ಹೆಲ್ತ್ ಕೇರ್ ಸಿಬ್ಬಂದಿಗಳು ಸೋಂಕಿತರಾಗುವ ತನಕ ಚೀನಾ ಸರ್ಕಾರ ಈ ಗಂಭೀರ ಸಮಸ್ಯೆಯ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆಗೆ (WHO) ಗೆ ಮಾಹಿತಿಯನ್ನೇ ನೀಡಲಿಲ್ಲ.
10) ಅದಾದ ನಂತರವೂ WHO ನ ಪರಿಣಿತರು ಕರೋನಾ ವೈರಸ್ ಕುರಿತಾಗಿ ಚೀನಾ ಸರ್ಕಾರಕ್ಕೆ ಮಾಹಿತಿ ಕೇಳಿದಾಗಲೂ ಅಧಿಕಾರಿಗಳು ಪಾರದರ್ಶಕವಾದ ಮಾಹಿತಿ ನೀಡಲಿಲ್ಲ.
11) 194 ರಾಷ್ಟ್ರಗಳು ಸೇರಿ ನಿರ್ಮಿಸಿಕೊಂಡಿರುವ 2005ರ ಅಂತರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳ ಕೂಟದಲ್ಲಿ ಚೀನಾ ಸಹ ಒಂದು ರಾಷ್ಟ್ರವಾಗಿತ್ತು. ಈ ನಿಟ್ಟನಲ್ಲಿ ನೋಡುವಾದಾದರೆ ಯಾವುದೇ ಎಪಿಡಮಿಕ್ ವ್ಯಾಧಿಗಳ ಕುರಿತಾಗಿ ಕಾಲಕಾಲಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ಚಾಚೂ ತಪ್ಪದೇ ಮಾಹಿತಿ ನೀಡಬೇಕಿದ್ದಿದ್ದು ಚೀನಾದ ಕರ್ತವ್ಯವಾಗಿತ್ತು. ಅದರಲ್ಲೂ ಈ ನಿಯಮಾವಳಿಗಳಲ್ಲಿ ಮುಖ್ಯವಾಗಿರುವ ಕಾಲರಾ, ಪ್ಲೇಗ್, ಹಳದಿ ಜ್ವರ, ಟೈಪಸ್, ಸ್ಮಾಲ್ ಪಾಕ್ಸ್ ಮುಂತಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ತಪ್ಪುವಂತೆಯೇ ಇಲ್ಲ. ಈ ಒಡಂಬಡಿಯ ನಿಯಮಾವಳಿಗಳ ಬೈಲಾದಲ್ಲಿ ಎರಡನೇ ಪರಿಚ್ಚದೇದ ನಾಲ್ಕರಲ್ಲ ಸಾರ್ಸ್ ಮತ್ತು ಅದರ ಕುಟುಂಬದ ವೈರಸ್ ಗಳ ಉಲ್ಲೇಖವಿದೆ. ಹೀಗಾಗಿ ಸಾರ್ಸ್ ಕುಟುಂಬದ ಹೊಸ ಬಗೆಯ ಕರೋನಾ ವೈರಸ್ ಕಾಲಿಟ್ಟಿದ್ದರ ಕುರಿತಾಗಿ ಅತ್ಯಂತ ಬೇಜವಬ್ದಾರಿಯಿಂದ ನಡೆದುಕೊಂಡಿದ್ದು ಚೀನಾದ ಅಕ್ಷಮ್ಯ ಅಪರಾಧ.
12) ಈಗ ಈ ಅಂತರಾಷ್ಟ್ರೀಯ ಆರೋಗ್ಯ ನಿಯಮಾವಳಿ ಒಕ್ಕೂಟದಲ್ಲಿರುವ 150 ರಾಷ್ಟ್ರಗಳು ಚೀನಾದ ಮೇಲೆ ನ್ಯಾಯಾಂಗ ಸಮರಕ್ಕೆ ಸಿದ್ಧವಾಗಿದೆ. ಕಾರಣ ಇದು ಚೀನಿಯರು ವಿಶ್ವಕ್ಕೆ ಕೊಟ್ಟ ಪ್ರಸಾದ ಅನ್ನೋದು ಅತ್ಯಂತ ಸ್ಪಷ್ಟ.
ಮೊನ್ನೇ ಸೋಮವಾರ ಫ್ಲೋರಿಡಾದಲ್ಲೀ ಚೀನಾ ವಿರುದ್ಧ ಮೊತ್ತ ಮೊದಲ ಜಾಗತಿಕ ಕಾನೂನು ಸಮರದ ಮೊದಲ ಅರ್ಜಿ ದಾಖಲಾಗಿದೆ. ಮೇಡ್ ಇನ್ ಚೈನಾ ಕರೋನಾ ವೈರಸ್ ವಿರುದ್ಧ ದಾವೆ ಹೂಡಲಾಗಿದೆ. ಎರಡನೇ ದಾವೇ ಈ ಸಂಕಷ್ಟಕ್ಕೇ ನೇರವಾಗಿ ಕಾರಣ ಚೀನಾ ಎಂದು ಟೆಕ್ಸಾಸ್ ನಲ್ಲಿ ಹೂಡಲಾಗಿದೆ. ಅಮೇರಿಕನ್ ಲಾಯರ್ ಹಾಗೂ ಅಲ್ಲಿನ ಬಲಪಂಥೀಯ ನಾಯಕ ಲಾರಿ ಕ್ಲೇಮನ್ ಚೀನಾದಿಂದ ಜಗತ್ತೇ ತತ್ತರಿಸಿದೆ ಎಂದು ಆರೋಪಿಸಿ 20 ಟ್ರಿಲಿಯನ್ ಅಮೇರಿಕನ್ ಡಾಲರ್ ಪರಿಹಾರಕ್ಕೆ ಆಗ್ರಹಿಸಿ ಕೇಸ್ ಹಾಕಿದ್ದಾರೆ.
ಫ್ರೀಡಂ ವಾಚ್ ಮತ್ತು ಬಝ್ ಫೋಟೋಸ್ ಎನ್ನುವ ಎರಡು ಸಂಘಟನೆಗಳು ಕೋವಿಡ್ 19 ಎನ್ನುವ ಈ ಅನಾಹುತಕಾರಿ ಕರೋನಾ ವೈರಸ್, ಚೀನಿಯರು ಜಗತ್ತಿನಲ್ಲಿ ವಿಧ್ವಂಸ ಎಸೆಗಲು ಸೃಷ್ಟಿಸಿರುವ ಬಯೋಲಾಜಿಕಲ್ ವೆಪನ್. ಈ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಬಯೋವಾರ್ ಶುರುಮಾಡಿದ್ದಾರೆ ಎಂದು ಆರೋಪಿಸಿದೆ. ಚೀನಾ ಸರ್ಕಾರ, ಸೇನೆ, ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆ ಹಾಗೂ ಅದರ ನಿರ್ದೇಶಕ ಶಿ ಝೆಂಗ್ಲಿ, ಚೀನಾ ಸೈನ್ಯದ ಮೇಜರ್ ಜನರಲ್ ಚೆನ್ ವೈ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ತನ್ನ ದೋಷಾರೋಪಣ ಪಟ್ಟಿಯಲ್ಲಿ “COVID-19 virus was “designed” by China to kill mass populations. Biological weapons were outlawed in 1925 and hence such a biological weapon is a terrorist-related weapon of mass destructions” ಎಂದು ಆಪಾಧಿಸಿವೆ ಈ ಸಂಘಟನೆಗಳು.
ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಚೀನಾ ಪರಮ ಅದ್ಭುತ ರಾಷ್ಟ್ರ. ಭೂಲೋಕದ ಅಮರಾವತಿ. ಸ್ವರ್ಗ ಅದೂ ಇದು ಅಂತ ಬೊಗಳುವ ಬುದ್ದಿವಂತರೇ ಸ್ವಲ್ಪ ಇದನ್ನು ಓದಿಕೊಳ್ಳಿ.
ಮೂಲಗಳು : ವಾರ್ ಆನ್ ದಿ ರಾಕ್ಸ್ ಡಾಟ್ ಕಾಂ
Business today
The week
Business standard
– ವಿಭಾ ( ವಿಶ್ವಾಸ್ ಭಾರದ್ವಾಜ್)








