ಐಪಿಎಲ್ ನಿಂದ ಧೋನಿ, ರೋಹಿತ್, ಕೊಹ್ಲಿ ಗಳಿಸಿರುವ ದುಡ್ಡು ಎಷ್ಟು.. ?
ಇಂಡಿಯನ್ ಪ್ರೀಮಿಯರ್ ಲೀಗ್.. ವಿಶ್ವ ಕ್ರಿಕೆಟ್ ನ ಅತ್ಯಂತ ಶ್ರೀಮಂತ ದೇಸಿ ಕ್ರಿಕೆಟ್ ಟೂರ್ನಿ. ಪ್ರತಿಯೊಬ್ಬ ಆಟಗಾರನೂ ಐಪಿಎಲ್ ಟೂರ್ನಿಯನ್ನು ಮಹತ್ವದ ಟೂರ್ನಿಯಾಗಿ ಪರಿಗಣಿಸುತ್ತಾನೆ.
ದೇಶದ ಪರ ಆಡುತ್ತಿವೋ ಬಿಡ್ತಿವೋ ಗೊತ್ತಿಲ್ಲ. ಆದ್ರೆ ಐಪಿಎಲ್ ಟೂರ್ನಿಯಲ್ಲಿ ಆಡಿದ್ರೆ ಸಾಕು ಅನ್ನೋ ಮನೋಭಾವನೆ ಕೂಡ ಅನೇಕ ಕ್ರಿಕೆಟಿಗರಲ್ಲಿದೆ.
ಇದಕ್ಕೆ ಮುಖ್ಯ ಕಾರಣ ಐಪಿಎಲ್ ನಲ್ಲಿ ಹರಿದು ಬರುತ್ತಿರುವ ನೇಮ್, ಫೇಮ್ ಮತ್ತು ಮನಿ. ಹೌದು, ಒಂದು ಐಪಿಎಲ್ ಟೂರ್ನಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿದೆ. ಹೀಗಾಗಿ ಐಪಿಎಲ್ ನಲ್ಲಿ ಆಡುವ ಆಟಗಾರರ ಜೇಬು ಕೂಡ ತುಂಬಿ ತುಳುಕುವಂತೆ ಮಾಡುತ್ತಿದೆ.
ಐಪಿಎಲ್ ಕುಬೇರ ಮಹೇಂದ್ರ ಸಿಂಗ್ ಧೋನಿ
ಅಂದ ಹಾಗೇ ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವಣೆ ಪಡೆದ ಆಟಗಾರ ಯಾರು ಅನ್ನೋ ಪ್ರಶ್ನೆಗೆ ಕೇಳಿಬರುತ್ತಿರುವ ಮೊದಲ ಹೆಸರೇ ಮಹೇಂದ್ರ ಸಿಂಗ್ ಧೋನಿ.
ಹೌದು, ಐಪಿಎಲ್ ನಲ್ಲಿ ಗರಿಷ್ಠ ಸಂಭಾವಣೆ ಪಡೆದ ಆಟಗಾರರ ಲೀಸ್ಟ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.
ಅಷ್ಟಕ್ಕೂ ಧೋನಿ ಕಳೆದ 13 ವರ್ಷಗಳಲ್ಲಿ ಐಪಿಎಲ್ ಟೂರ್ನಿಯಲ್ಲಿ ಗಳಿಸಿದ್ದ ಒಟ್ಟು ಹಣ ಬರೋಬ್ಬರಿ 137 ಕೋಟಿ ರೂ. ಇದ್ರಲ್ಲಿ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಸೇರಿದಂತೆ ಇನ್ನಿತರ ಬಹುಮಾನಗಳ ಮೊತ್ತ ಸೇರಿಲ್ಲ. ಬದಲಾಗಿ ಬರೀ ಸಂಭಾವನೆ ಮಾತ್ರ ಒಳಗೊಂಡಿದೆ.
ರೋಹಿತ್ ಶರ್ಮಾ ಸಂಭಾವಣೆ 131 ಕೋಟಿ
ಇನ್ನು ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇದ್ದಾರೆ. ರೋಹಿತ್ ಶರ್ಮಾ ಇಲ್ಲಿಯವರೆಗೆ 131 ಕೋಟಿ ಹಣವನ್ನು ಸಂಭಾವಣೆ ರೂಪದಲ್ಲಿ ಪಡೆದುಕೊಂಡಿದ್ದಾರೆ.
ಹಾಗೇ ಟೀಮ್ ಇಂಡಿಯಾ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 126 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ.
2008ರ ಚೊಚ್ಚಲ ಐಪಿಎಲ್ ನಲ್ಲಿ ಧೋನಿಯ ಸಂಭಾವಣೆ 1.5 ಮೀಲಿಯನ್ ಡಾಲರ್. ಈ ಮೊತ್ತವನ್ನು ಈಗ ಯುವ ಆಟಗಾರರು ಪಡೆದುಕೊಳ್ಳುತ್ತಿದ್ದಾರೆ. ಆದ್ರೆ ಆಗ ಅದು ದೊಡ್ಡ ಮೊತ್ತವಾಗಿತ್ತು. ಇದೇ ಮೊತ್ತವನ್ನು ಧೋನಿ 2010ರವರೆಗೆ ಪಡೆದುಕೊಂಡಿದ್ದರು. ಆ ನಂತರ ಅಂದ್ರೆ 2011ರಿಂದ 2013ರವರೆಗೆ ಧೋನಿ ತಲಾ 8.2 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ಅಲ್ಲದೆ 2014 ಮತ್ತು 2015ರಲ್ಲಿ ಪುಣೆ ವಾರಿಯರ್ಸ್ ತಂಡದ ಪರವಾಗಿ ಆಡುತ್ತಿರುವಾಗಲೂ ಇದೇ ಸಂಭಾವಣೆಯನ್ನು ಪಡೆದುಕೊಳ್ಳುತ್ತಿದ್ದರು.
ಇನ್ನು 2018ರಿಂದ 2020ರವರೆಗೆ ಧೋನಿ ಪಡೆಯುತ್ತಿದ್ದ ಸಂಭಾವಣೆ ಬರೋಬ್ಬರಿ 15 ಕೋಟಿ. ಹೀಗೆ ಕಳೆದ 13 ಐಪಿಎಲ್ ಟೂರ್ನಿಗಳಲ್ಲಿ 137 ಕೋಟಿ ಸಂಪಾದನೆ ಮಾಡಿ ಐಪಿಎಲ್‍ನ ಶ್ರೀಮಂತ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ವಿರಾಟ್ ಗಿಂತ ರೋಹಿತ್ ಶ್ರೀಮಂತ…
ಇನ್ನು ರೋಹಿತ್ ಶರ್ಮಾ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಗಿಂತ ಶ್ರೀಮಂತರಾಗಿದ್ದಾರೆ. ರೋಹಿತ್ ಶರ್ಮಾ 131 ಕೋಟಿ ರೂ. ಸಂಭಾವಣೆ ರೂಪದಲ್ಲಿ ಪಡೆದುಕೊಂಡಿದ್ದಾರೆ. 2008ರಿಂದ 2011ರವರೆಗೆ ರೋಹಿತ್ ಡೆಕ್ಕನ್ ಚಾರ್ಜಸ್ ಪರ ಆಡುವಾಗ ಮೂರು ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದರು. ಆನಂತರ 2011ರಿಂದ 2013ರವರೆಗೆ ಮುಂಬೈ ತಂಡದ ಪರ ಆಡುವಾಗ ರೋಹಿತ್ ಸಂಭಾವಣೆ 9.2 ಕೋಟಿ. ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕನಾದ ಮೇಲೆ ಧೋನಿಂiÀಷ್ಟೇ ಅಂದ್ರೆ ಪ್ರತಿ ವರ್ಷ 15 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದರು.
ಮೂರನೇ ಸ್ಥಾನದಲ್ಲಿದ್ದಾರೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ..!
ಮತ್ತೊಂದೆಡೆ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಸಂಪಾದನೆ ಮಾಡಿದ ಒಟ್ಟು ಹಣ 126 ಕೋಟಿ ರೂ. ಹಾಗೇ ನೋಡಿದ್ರೆ, 2008ರಲ್ಲಿ ಆರ್ ಸಿಬಿ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡುತ್ತಿದ್ದಾಗ ಕೊಹ್ಲಿ ಪಡೆದುಕೊಂಡಿದ್ದ ಸಂಭಾವಣೆ 12 ಲಕ್ಷ ರೂಪಾಯಿ. ಅಲ್ಲದೆ 2009 ಮತ್ತು 2010ರಲ್ಲೂ ವಿರಾಟ್ ಕೊಹ್ಲಿ 12 ಲಕ್ಷ ಸಂಭಾವಣೆ ಪಡೆದುಕೊಂಡಿದ್ದರು.
ಕಳೆದ 13 ವರ್ಷಗಳಿಂದ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಪರ ಆಡುತ್ತಿದ್ದಾರೆ. 2011ರಿಂದ 2018ರವರೆಗೆ ಕೊಹ್ಲಿ ತಲಾ 12.5 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ಆದ್ರೆ 2018ರಿಂದ ಕೊಹ್ಲಿ ಐಪಿಎಲ್ ನಲ್ಲಿ ಗರಿಷ್ಠ ಸಂಭಾವಣೆ ಪಡೆದ ಆಟಗಾರನಾಗಿದ್ದರು. ಕಳೆದ ಮೂರು ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ಪ್ರತಿ ಟೂರ್ನಿಗೆ ತಲಾ 17 ಕೋಟಿ ರೂಪಾಯಿ ಸಂಭಾವಣೆ ರೂಪದಲ್ಲೇ ಬಂದಿದೆ.
ಒಟ್ಟಿನಲ್ಲಿ ಐಪಿಎಲ್ ಹಲವು ಕ್ರಿಕೆಟಿಗರ ಭವಿಷ್ಯವನ್ನೇ ಬದಲಾವಣೆ ಮಾಡುವಂತೆ ಮಾಡಿದೆ.