“ಕುಮಾರಸ್ವಾಮಿಯವರೇ ನಿಮಗೆ ನಾಚಿಕೆ ಆಗುವುದಿಲ್ಲವೇ”
ಬೆಂಗಳೂರು : ಹೆಚ್ ಡಿ ಕುಮಾರಸ್ವಾಮಿಯವರೇ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾನತಾಡಿದ ಸಿದ್ದರಾಮಯ್ಯ ಸರ್ಕಾರ ಮತ್ತು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ರು.
ಅಪ್ಪ, ಅಣ್ಣ ರೈತರ ಪರ ಅಂತಾರೆ. ಕುಮಾರಸ್ವಾಮಿ ಮಾತ್ರ ಸರ್ಕಾರದ ಪರ ಕಾನೂನುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಭೂಮಿ ಕೃಷಿಕರಿಗಾಗಿಯೇ ಮೀಸಲಿರಬೇಕು ಎಂಬುದು ಕಾನೂನಿನಲ್ಲಿದೆ.
ಈಗ ಈ ತಿದ್ದುಪಡಿಗೆ ಬೆಂಬಲ ನೀಡುತ್ತಿದ್ದೀರಲ್ಲ ಇದು ಸರಿನಾ ಕುಮಾರಸ್ವಾಮಿಯವರೇ..? ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕುಮಾರಸ್ವಾಮಿ ಹತ್ತಿರ ಬೇನಾಮಿ ಜಮೀನು ಇದೆ. ಅದಕ್ಕೆ ಸರ್ಕಾರದ ಪರ ನಿಂತಿದ್ದಾರೆ. ಯಡಿಯೂರಪ್ಪ, ಸಚಿವ ಅಶೋಕ್ ಸುಮ್ಮನೇ ಹಣ ಮಾಡಿದ್ದಾರಾ, ಬೆಂಗಳೂರಿನ ಸುತ್ತಲಿನ ಬೇನಾಮಿ ಜಾಗಗಳ ಕೇಸ್ ಗಳ ಖುಲಾಸೆ ಮಾಡಿದ್ದೀರಾ.
ರೈತರ ಹೆಸರಲ್ಲಿ ಪ್ರಮಾಣವಚನ ತಗೊಂಡು ಹೀಗೆ ಮಾಡಲು ನಾಚಿಕೆ ಆಗಲ್ಲವೇ, ಇಂದು ರೈತರ ವಿರುದ್ಧವಾಗಿ ನಿಲ್ಲುವುದು ಸರಿನಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಇದೇ ವೇಳೆ ಕೇಂದ್ರದ ಕೃಷಿ ಮಸೂದೆಗಳ ಬಗ್ಗೆ ಕಿಡಿಕಾರಿದ ಸಿದ್ದರಾಮಯ್ಯ, ಕೇಂದ್ರ ವಿತ್ತ ಸಚಿವೆ ಸೀತಾರಾಮನ್ ಎಪಿಎಂಸಿ ಮಾರುಕಟ್ಟೆ ರದ್ದಿಗೆ ಸಕಾಲ ಎಂದಿದ್ದಾರೆ.
ಖಾಸಗಿ ಕಂಪನಿಗಳು ಮಾರುಕಟ್ಟೆ ಮಾಡಲು ಅವಕಾಶ ಕೊಟ್ಟಿದ್ದಾರೆ. ರೈತರಿಗೆ ಒಂದೆರಡು ಮಾರುಕಟ್ಟೆಗಳಲ್ಲಿ ಬೆಲೆ ಬರುತ್ತೆ. ಅಮೇಲೆ ರೈತರಿಗೆ ನ್ಯಾಯ ಸಿಗಲ್ಲ ಎಂದು ವಿವರಿಸಿದ್ರು.
ಇನ್ನು ಬಂಡವಾಳ ಶಾಹಿಗಳ ಬಳಿ ರೈತರು ತಲೆ ಬಾಗಿಸಬೇಕಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಎಂಎಲ್ ಸಿ ಹೇಳಿದ ಬೆಲೆಗೆ ಬೆಳೆ ಕೊಡಬೇಕಾಗುತ್ತದೆ. ಈಗ ಇಡೀ ದೇಶದ ರೈತ ಹೋರಾಟ ಮಾಡುತ್ತಿದ್ದಾರೆ.
ರಾಜ್ಯದ ರೈತರು 42 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳ ಬೆಳೆದಿದ್ದಾರೆ. ಕೇಂದ್ರ ಸರ್ಕಾರ 1,850 ರೂ. ಎಂಸಿ ಘೋಷಣೆ ಮಾಡಿದೆ. ರಾಜ್ಯದ 25 ಜನ ಸಂಸದರಿಗೆ ನಾಚಿಕೆ ಆಗಲ್ವಾ..? ಬೆಂಬಲ ಬೆಲೆ ಇಲ್ಲದೇ ರೈತ ಏನು ಮಾಡಬೇಕು ಎಂದು ಪ್ರಶ್ನಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









