ತ್ರಿಶೂರ್: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ದೇಶವನ್ನು ಲಾಕ್ ಡೌನ್ ಮಾಡಿದೆ. ಈ ಕಾರಣ ಬಾರ್, ಪಬ್ ವೈನ್ ಶಾಪ್ ಗಳು ಮುಚ್ಚಿದ್ದು,ತನಗೆ ಕುಡಿಯಲು ಮದ್ಯ ಸಿಗದ ಕಾರಣ ಕೇರಳದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೇರಳದ ಕುನ್ನಮಕುಳಂ ಸಮೀಪದ ತವರೂರಿನಲ್ಲಿ ಈ ಘಟನೆ ನಡೆದಿದ್ದು, ಕೆ. ಸನೋಜ್ ಮೃತ ವ್ಯಕ್ತಿಯಾಗಿದ್ದಾನೆ.
ಈತ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ತನ್ನ ಮನೆಯಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಳೆದೆರಡು ದಿನಗಳಿಂದ ಮದ್ಯ ಸಿಗದೆ ಸನೋಜ್ ಬಹಳ ನಿರಾಶನಾಗಿದ್ದನಂತೆ. ಇದರಿಂದ ಆತ ತುಂಬ ತಲೆಕೆಡಿಸಿಕೊಂಡಿದ್ದ ಎಂದು ಸನೋಜ್ ನ ತಮ್ಮ ಹೇಳಿದ್ದು, ಮದ್ಯ ಸಿಗಲಿಲ್ಲವೆಂದೇ ಸನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.








