ಮನೆ ಬಾಗಿಲಿಗೆ ಮದುವೆ ಊಟ – ಮದುವೆ ಸಂಭ್ರಮದ ಹೊಸ ಪ್ರವೃತ್ತಿ
ಚೆನೈ, ಡಿಸೆಂಬರ್11: ಕೊರೋನವೈರಸ್ ನ ಆಗಮನವು ಅಕ್ಷರಶಃ ನಮ್ಮ ಜೀವನವನ್ನು ಬದಲಿಸಿದೆ, ಜೀವನದ ಎಲ್ಲಾ ಅಂಶಗಳಂತೆಯೇ, ಸಾಂಕ್ರಾಮಿಕವು ವಿವಾಹಗಳು ನಡೆಯುವ ವಿಧಾನವನ್ನು ಸಹ ಬದಲಾಯಿಸಿದೆ ಮತ್ತು ಭಾರತೀಯ ವಿವಾಹದ ಬಗ್ಗೆ ಪ್ರಪಂಚದ ದೃಷ್ಟಿಕೋನವನ್ನು ಬದಲಾಯಿಸಿದೆ.

ಪ್ರತಿಯೊಬ್ಬರ ಸುರಕ್ಷತೆ ಮತ್ತು ಆರೋಗ್ಯವನ್ನು ಪರಿಗಣಿಸಿ, ಅನೇಕ ಭಾರತೀಯ ಕುಟುಂಬಗಳು ಈಗ ಮನೆಯಲ್ಲೇ ಮದುವೆ ಅಥವಾ ವರ್ಚುವಲ್ ವೆಡ್ಡಿಂಗ್ಸ್ ಅನ್ನು ಆಶ್ರಯಿಸುತ್ತಿವೆ. ಆದರೆ, ‘ಶಾದಿ ಕಾ ಖಾನಾ’ ಅಥವಾ ‘ಮದುವೆ ಊಟ’ ಇಲ್ಲದೆ ಭಾರತೀಯ ವಿವಾಹವು ಪೂರ್ಣವಾಗುವುದಿಲ್ಲ. ಇದು ಮದುವೆ ಸಮಾರಂಭದಲ್ಲಿ ಅತ್ಯಂತ ಆನಂದದಾಯಕ ಭಾಗವಾಗಿದೆ.
ಕೇರಳದಲ್ಲಿ ‘ಪ್ಲಾಸ್ಮೋಡಿಯಂ ಓವಲ್’ ಎಂಬ ಹೊಸ ಅಪರೂಪದ ಮಲೇರಿಯಾ ಪ್ರಕರಣ ಪತ್ತೆ
ತಮಿಳು ಕುಟುಂಬವೊಂದು ಇದಕ್ಕೆ ಅಂತಿಮವಾಗಿ ಪರಿಹಾರವನ್ನು ಕಂಡುಕೊಂಡಿದೆ!
ಅವರು ‘ಕಲ್ಯಾಣ ಸಪ್ಪಾಡು’ ಅಥವಾ ವಿವಾಹದ ಊಟವನ್ನು ಅತಿಥಿಗಳ ತಮ್ಮ ಮನೆ ಬಾಗಿಲಿಗೆ ತಲುಪಿಸಲು ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಅತಿಥಿಗಳು ಆನ್‌ಲೈನ್‌ನಲ್ಲಿ ವಿವಾಹವನ್ನು ನೋಡುತ್ತಾ ರುಚಿಕರವಾದ ಆಹಾರವನ್ನು ಸವಿದರು. ಅತಿಥಿಗಳಿಗೆ 4 ವರ್ಣರಂಜಿತ ಬಾಕ್ಸ್ ಮತ್ತು ಬಾಳೆ ಎಲೆಗಳನ್ನು ಅವರು ಕಳುಹಿಸಿ ಕೊಟ್ಟಿದ್ದು, ಪ್ರತಿಯೊಂದೂ 4 ಟಿಫಿನ್ ಬಾಕ್ಸ್ ಗಳನ್ನು ಹೊಂದಿತ್ತು. ಬಾಳೆ ಎಲೆಯಲ್ಲಿ ಪ್ರತಿ ವಸ್ತುವನ್ನು ಎಲ್ಲಿ ಇಡಬೇಕು ಎಂಬ ಸೂಚನೆಗಳೊಂದಿಗೆ ಒಟ್ಟು 12 ಭಕ್ಷ್ಯಗಳು ಅವುಗಳೊಳಗೆ ಪ್ಯಾಕ್ ಮಾಡಲ್ಪಟ್ಟಿದ್ದವು.

ಶಿವಾನಿ ಎಂಬ ಟ್ವಿಟ್ಟರ್ ಬಳಕೆದಾರರು ಅದರ ಚಿತ್ರಗಳನ್ನು ಹಂಚಿಕೊಂಡಿದ್ದು ಮದುವೆ ಸಂಭ್ರಮದ ಹೊಸ ಪ್ರವೃತ್ತಿ. ಮದುವೆ ಆಹಾರವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಬರೆದು ಕೊಂಡಿದ್ದಾರೆ.
ಅನೇಕರು ಈ ವಿಚಾರವನ್ನು ಮೆಚ್ಚಿದ್ದು ಟ್ವೀಟ್ ಈಗ ವೈರಲ್ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಳಿಗಾಲದಲ್ಲಿ ಅಗತ್ಯವಾಗಿ ಸೇವಿಸಬೇಕಾದ ಸೂಪರ್‌ಫುಡ್‌ಗಳುhttps://t.co/0cgV3uCy8H
— Saaksha TV (@SaakshaTv) December 9, 2020
ಹಿಂದೂ, ಕ್ರಿಶ್ಚಿಯನ್ ಮಹಿಳೆಯರನ್ನು ಬಲವಂತವಾಗಿ ಮದುವೆ ಮಾಡಿಸಿ ಚೀನಾಕ್ಕೆ ಮಾರಾಟ ಮಾಡುತ್ತಿರುವ ಪಾಕಿಸ್ತಾನhttps://t.co/Rbj3NH9Moa
— Saaksha TV (@SaakshaTv) December 10, 2020








