ಬಿಹಾರ | ಕಳೆದ 24 ಗಂಟೇಲಿ ಮೂವರು ರೈತರ ಕೊಲೆ
ಪಾಟ್ನಾ : ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದ ಮೂರು ರೈತರು ಅಪರಿಚಿತ ದುಷ್ಕರ್ಮಿಗಳಿಂದ ಕೊಲೆಯಾಗಿದ್ದಾರೆ.
ಮೊದಲ ಘಟನೆಯಲ್ಲಿ ಧಾರಂಪುರ ಗ್ರಾಮದ ಹೊಲದಲ್ಲಿ ತನ್ನ ಬೆಳೆಗಳನ್ನು ಕಾಯುತ್ತಿದ್ದ ಕೃಷಿಕನನ್ನು ಕೆಲ ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ. ಮೃತ ರೈತನನ್ನು ನರೇಶ್ ಪ್ರಸಾದ್ ಎಂದು ಗುರುತಿಸಲಾಗಿದೆ.
ಇನ್ನು 2ನೇ ಘಟನೆ ವೈಶಾಲಿ ವ್ಯಾಪ್ತಿಯಲ್ಲಿ ನಡೆದಿದ್ದು, ರೈತ ಮುಖ್ಲಾಲ್ ರಾಯ್ ರಾತ್ರಿ ಹೊತ್ತಿನಲ್ಲಿ ತನ್ನ ಹೊಲದಲ್ಲಿ ಮಲಗಲು ಹೋಗುತ್ತಿದ್ದಾಗ ದುಷ್ಕರ್ಮಿಗಳು ತೀಕ್ಷ್ಣವಾದ ವಸ್ತುವಿನಿಂದ ಇರಿದು ಕೊಂದಿದ್ದಾರೆ.
3ನೇ ಘಟನೆಯಲ್ಲಿ ರೋಹ್ಟಾಸ್ ನ ಕಾರ್ಗಹಾರ್ ಪೆÇಲೀಸ್ ಠಾಣಾ ವ್ಯಾಪ್ತಿಯ ಘುರನ್‍ಪಿಪ್ರ ಗ್ರಾಮದಲ್ಲಿ ನಡೆದಿದೆ. ಶಶಿಕಾಂತ್ ರೈ ಎಂಬ ರೈತ ಹೊಲದಲ್ಲಿ ಕೆಲಸ ಮಾಡೋ ವೇಳೆ ಗುಂಡಿಕ್ಕಿ ಕೊಂದಿದ್ದಾರೆ.